ಜಮ್ಮು ಕಾಶ್ಮೀರ, ಹಿಮಾಚಲದಲ್ಲಿ ಭಾರೀ ಮಳೆ; ಪ್ರವಾಹಕ್ಕೆ 55 ಮಂದಿ ಬಲಿ

Date:

Advertisements

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ, ಮೇಘಸ್ಪೋಟ, ಭೂಕುಸಿತ ಹಾಗೂ ಪ್ರವಾಹಗಳು ಸಂಭವಿಸಿದ್ದು, ಭಯಾನಕ ಹಾನಿಯನ್ನುಂಟುಮಾಡಿವೆ. ಎರಡೂ ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಜಾರಿಗೊಳಿಸಿದೆ. ಈ ಪ್ರದೇಶಗಳಲ್ಲಿ ಕಳೆದೊಂದು ವಾರದಲ್ಲಿಯೇ 300-500 ಮಿಲಿಮೀಟರ್‌ಗೂ ಹೆಚ್ಚು ಮಳೆ ಸುರಿದಿದೆ.

ಜಮ್ಮು ಪ್ರದೇಶದಲ್ಲಿ 296 ಮಿಲಿಮೀಟರ್ ಮಳೆ ಸುರಿದಿದ್ದು, ತಾವಿ, ಚೇನಬ್, ಜೆಲಮ್ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ನದಿಗಳ ಹರಿವು ಹೆಚ್ಚಾಗಿ, ಪ್ರವಾಹಗಳು ಸಂಭವಿಸಿವೆ. ದೊಡ್ಡ, ಕಥುವಾ, ರೀಸಿ, ಸಂಬಾ, ಉಧಂಪುರ್ ಜಿಲ್ಲೆಗಳು ಅತ್ಯಂತ ಹಾನಿಗೊಳಗಾಗಿವೆ.

ಕಳೆದೊಂದು ವಾರದಲ್ಲಿ, ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ, 34 ಮಂದಿ ವೈಶ್ಣೋ ದೇವಿ ಯಾತ್ರೆಗೆ ತೆರಳಿದ್ದವರು. ಯಾತ್ರಾ ಮಾರ್ಗವಾದ ಅಧ್ಕುವಾರಿ ಬಳಿ ಸಂಭವಿಸಿದ ಭೂಕುಸಿತದಲ್ಲಿ ಅವರೆಲ್ಲರೂ ಸಾವನ್ನಪ್ಪಿದ್ದಾರೆ. ಅಲ್ಲದೆ, 14 ಮಂದಿ ಗಾಯಗೊಂಡಿದ್ದರೆ, ಹಲವರು ನಾಪತ್ತೆಯಾಗಿದೆ.

ಇನ್ನು, ದೊಡ್ಡ ಜಿಲ್ಲೆಯಲ್ಲಿ ಮೇಘಸ್ಪೋಟದಿಂದ 4 ಮಂದಿ ಸಾವನ್ನಪ್ಪಿದ್ದರೆ, ಕಥುವಾ, ಕಿಷ್ಟ್ವಾರ್ ಜಿಲ್ಲೆಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮನೆಗಳು ಹಾನಿಯಾಗಿವೆ.

ಪ್ರವಾಹದಿಂದಾಗಿ 6,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ನೈಕಿ ತಾವಿ, ಪೀರ್‌ಖೋ, ಮಾರ್ಗಿ ಪ್ರದೇಶಗಳಲ್ಲಿ ಹಲವಾರು ಮನೆಗಳು ಹಾಗೂ ಕೃಷಿ ಬೆಳೆಗಳು ನಾಶವಾಗಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಳೆಯ ಭೀಕರತೆಯಿಂದಾಗಿ ಜಮ್ಮು-ಶ್ರೀನಗರ, ಕಿಷ್ಟ್ವಾರ್-ದೊಡ್ಡ, ಜಮ್ಮು-ಪಠಾಂಕೋಟ್ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ಈ ರಸ್ತೆ ಮಾರ್ಗಗಳಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಸೇತುವೆಗಳು ಹಾನಿಯಾಗಿವೆ. 22 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಜಮ್ಮು ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ NDRF, SDRF ಹಾಗೂ ಭಾರತೀಯ ಸೇನೆಯ 18 ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 5000ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ಮಳೆ ಅಬ್ಬರಕ್ಕೆ ಮ್ಯಾಂಡಿ, ಕುಲ್ಲು, ಶಿಮ್ಲಾ, ಕಾಂಗ್ರಾ ಜಿಲ್ಲೆಗಳಲ್ಲಿನ ಜನರು ತತ್ತರಿಸಿಹೋಗಿದ್ದಾರೆ. ಕಳೆದ ಒಂದು ವಾರದಲ್ಲಿ 10 ಮಂದಿ ಸಾವನ್ನಪ್ಪಿದ್ದು, ಸುಮಾರು 109 ಮಂದಿ ಗಾಯಗೊಂಡಿದ್ದಾರೆ.

ಈ ಲೇಖನ ಓದಿದ್ದೀರಾ?: ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ

ಜೂನ್‌ 20ರಿಂದ ಈವರೆಗೆ ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತದಿಂದಾಗಿ 310 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. ಪ್ರವಾಸಿಗರ ನೆಚ್ಚಿನ ತಾಣವಾದ ಮನಾಲಿಯಲ್ಲಿ ಬೀಸ್ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕೆಲವರು ಕೊಚ್ಚಿ ಹೋಗಿರುವ ಶಂಕೆ ಇದೆ.

ಮಳೆ ಬಾಧಿತ ಜಿಲ್ಲೆಗಳಲ್ಲಿ ಒಟ್ಟು 1,738 ಮನೆಗಳು ಮತ್ತು 31,000ಕ್ಕೂ ಹೆಚ್ಚು ನಾನಾ ರೀತಿಯ ಕಟ್ಟಡಗಳು ಹಾನಿಗೊಳಗಾಗಿವೆ. 2 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 582 ರಸ್ತೆಗಳಿಗೆ ಭೀಕರ ಹಾನಿಯಾಗಿದೆ. 1,155 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. 346 ನೀರು ಸರಬರಾಜು ಯೋಜನೆಗಳ ಕೆಲಸಗಳು ನಿಂತುಹೋಗಿವೆ.

ಹಿಮಾಚಲದಲ್ಲಿ ಕಳೆದ ಜೂನ್‌ನಿಂದ ಈವರೆಗೆ 55 ಪ್ರವಾಹಗಳು, 28 ಮೇಘಸ್ಪೋಟಗಳು, 48 ಭೂಕುಸಿತಗಳು ಸಂಭವಿಸಿವೆ. ಪರಿಣಾಮ, 2,450 ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿವೆ. ತ್ವರತಿ ಪರಿಹಾರ ಕ್ರಮಗಳಿಗಾಗಿ 2,000 ಕೋಟಿ ರೂ. ನೆರವಿವಾಗಿ ಕೇಂದ್ರ ಸರ್ಕಾರದ ಬಳಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವೀಂದರ್ ಸಿಂಗ್ ಸುಖು ಅವರು ಬೇಡಿಕೆ ಇಟ್ಟಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!

ಭಾರತದ ಬಿಲಿಯನೇರ್‌ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X