4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಹೇಮಂತ್ ಪ್ರಮಾಣವಚನ; ಯಾರು ಈ ಸೊರೇನ್?

Date:

Advertisements

ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಾರ್ಖಂಡ್‌ನಲ್ಲಿ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಿಜೆಪಿಯ ದಬ್ಬಾಳಿಕೆ, ಬಂಧನ, ಜೈಲಿಗೆ ಬಗ್ಗದೆ, ಎಲ್ಲವನ್ನೂ ಮೆಟ್ಟಿನಿಂತ ನಾಯಕನಾಗಿ ದೇಶದ ಚಿತ್ತ ಸೆಳೆದಿದ್ದಾರೆ.

ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಬಲಿಷ್ಠ ನಾಯಕನಾಗಿರುವ ಸೊರೇನ್ ತಮ್ಮ ರಾಜಕೀಯ ಆರಂಭಿಸಿದ್ದು 2009ರಲ್ಲಿ. ಆ ವರ್ಷದ ಜೂನ್‌ನಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸೊರೇನ್, 2010ರ ಜನವರಿಯಲ್ಲಿ ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ವಿಧಾನಸಭೆ ಪ್ರವೇಶಿಸಿದರು. ವಿಧಾನಸಭೆ ಪ್ರವೇಶಿಸುತ್ತಿದ್ದಂತೆಯೇ, ಬಿಜೆಪಿ-ಜೆಎಂಎಂ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಂಡರು. ಆದರೆ, 2013ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ತೊರೆದರು. ಯಾವುದೇ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.

ಅಂತಿಮವಾಗಿ, 2013ರ ಜುಲೈನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡ ಸೊರೇನ್ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿದರು. ಆದಾಗ್ಯೂ, 2024ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಿತು. ಆಗ ವಿರೋಧ ಪಕ್ಷದ ನಾಯಕನಾಗಿ ವಿಪಕ್ಷಗಳನ್ನು ಸೊರೇನ್ ಮುನ್ನಡೆಸಿದರು. 2019ರಲ್ಲಿ ಬಿಜೆಪಿಯನ್ನು ಮಣಿಸಿ, ಜೆಎಂಎಂ ಮೈತ್ರಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

Advertisements

ಗಮನಾರ್ಹವಾಗಿ, ಇದೇ ವರ್ಷದ ಫೆಬ್ರವರಿ 1ರಂದು ಸೊರೇನ್ ಅವರನ್ನು ಭೂಹಗರಣ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತು. ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ಜನವರಿ 31ರಂದು ರಾಜೀನಾಮೆಯನ್ನೂ ನೀಡಿದ್ದರು. ಅದಾದ ಮೂರೇ ತಿಂಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನೂ ಇಡಿ ಬಂಧಿಸಿತು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಪಕ್ಷಗಳ ಪ್ರಬಲ ನಾಯಕರನ್ನು ಹಣಿಯುವ ಉದ್ದೇಶದಿಂದಲೇ ಸೊರೇನ್ ಮತ್ತು ಕೇಜ್ರಿವಾಲ್‌ ಅವರನ್ನು ಬಂಧಿಸಿದೆ ಎಂಬ ಆಕ್ರೋಶ, ಆರೋಪಗಳು ವ್ಯಕ್ತವಾದವು.

ಇದೆಲ್ಲದರ ನಡುವೆ, ಜೂನ್ 28ರಂದು ಜಾಮೀನು ಪಡೆದ ಹೊರಬಂದ ಹೇಮತ್ ಸೊರೇನ್, ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ತಮ್ಮ ವಿರುದ್ಧ ಹೊಂಚು ಹಾಕಿದ್ದ, ತಂತ್ರಗಳನ್ನು ಹೆಣೆದು ಜೈಲಿಗೆ ಕಳಿಸಿದ ಬಿಜೆಪಿಯನ್ನು 2024ರ ಚುನಾವಣೆಯಲ್ಲಿಯೂ ಅಧಿಕಾರದಿಂದ ದೂರವಿಟ್ಟು, ತಮ್ಮ ಮೈತ್ರಿಕೂಟವನ್ನು ಅಧಿಕಾರದಲ್ಲಿ ಮುಂದುವರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯೂ ಆಗಿದ್ದಾರೆ.

ಸೊರೇನ್ ರಾಜಕೀಯ ಹೆಜ್ಜೆಗುರುತು

2009 – ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಪಾದಾರ್ಪಣೆ (2009ರ ಜೂನ್ 24ರಿಂದ 2010ರ ಜನವರಿ 4ವರೆಗೆ ರಾಜ್ಯಸಭಾ ಸದಸ್ಯ)

2010 – ಶಾಸಕರಾಗಿ ಆಯ್ಕೆಯಾಗಿ ಜಾರ್ಖಂಡ್‌ ವಿಧಾನಸಭೆ ಪ್ರವೇಶ. 2010ರ ಸೆಪ್ಟೆಂಬರ್‌ನಿಂದ 2013ರ ಜನವರಿ 8ರವೆಗೆ ಉಪಮುಖ್ಯಮಂತ್ರಿ

2013- ಜೆಎಂಎಂ-ಆರ್‌ಜೆಡಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ

2014- ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ – ದುಮ್ಕಾ ಕ್ಷೇತ್ರದಲ್ಲಿ ಸೋಲು, ಬರ್ಹೈತ್‌ ಕ್ಷೇತ್ರದಲ್ಲಿ ಗೆಲುವು. ವಿಪಕ್ಷ ನಾಯಕನಾಗಿ ಆಯ್ಕೆ

2019- ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ದುಮ್ಕಾ ಮತ್ತು ಬರ್ಹೈತ್ ಎರಡೂ ಕ್ಷೇತ್ರಗಳಲ್ಲೂ ಸೊರೇನ್ ಗೆಲುವು. ಕಾಂಗ್ರೆಸ್‌-ಜೆಎಂಎಂ-ಆರ್‌ಜೆಡಿ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ

2024- ಭೂ ಹಗರಣ ಆರೋಪದಲ್ಲಿ ಇಡಿಯಿಂದ ಬಂಧನ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ, 147 ದಿನಗಳ ಜೈಲುವಾಸ. ಜಾಮೀನು ಮೇಲೆ ಬಿಡುಗಡೆ, 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

2024ರ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಮೈತ್ರಿಗೆ ಬಹುಮತ – ನಾಲ್ಕನೇ ಬಾರಿಗೆ ಸೊರೇನ್ ಮುಖ್ಯಮಂತ್ರಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X