2006 ರ ಮುಂಬೈ ರೈಲು ಸ್ಫೋಟ ಪ್ರಕರಣದ ಎಲ್ಲ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ್ದು, ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ “ಸಂಪೂರ್ಣವಾಗಿ ವಿಫಲವಾಗಿದೆ” ಎಂದು ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರನ್ನೊಳಗೊಂಡ ವಿಶೇಷ ಪೀಠವು ಸೋಮವಾರ ಬೆಳಿಗ್ಗೆ ತೀರ್ಪು ನೀಡಿತು. ಪೀಠವು ಎಲ್ಲ ಅಪರಾಧ ನಿರ್ಣಯಗಳನ್ನು ರದ್ದುಗೊಳಿಸಿತು, ಈ ಹಿಂದೆ ನೀಡಲಾದ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಗಳನ್ನು ಎತ್ತಿಹಿಡಿಯಲು ನಿರಾಕರಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
“ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಆರೋಪಿಯೇ ಅಪರಾಧ ಮಾಡಿದ್ದಾನೆ ಎಂದು ನಂಬುವುದು ಕಷ್ಟ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿದ್ದರೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಹೇಳಿದೆ.
ಜುಲೈ 11, 2006 ರಂದು, ಪಶ್ಚಿಮ ರೈಲ್ವೆ ಮಾರ್ಗದಲ್ಲಿ ಮುಂಬೈನ ಉಪನಗರ ರೈಲುಗಳಲ್ಲಿ ಜನದಟ್ಟಣೆಯ ಸಮಯದಲ್ಲಿ ಏಳು ಬಾಂಬ್ ಸ್ಫೋಟಗಳು ಸಂಭವಿಸಿದವು. ಸರಣಿ ದಾಳಿಗಳಲ್ಲಿ 189 ಜನರು ಮೃತಪಟ್ಟು ಮತ್ತು 800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪ್ರೆಶರ್ ಕುಕ್ಕರ್ ಕಂಟೇನರ್‌ಗಳಲ್ಲಿ ಇರಿಸಲಾದ ಬಾಂಬ್‌ಗಳು ಪ್ರಥಮ ದರ್ಜೆಯ ಕಂಪಾರ್ಟ್‌ಮೆಂಟ್‌ಗಳನ್ನು ಗುರಿಯಾಗಿಸಿಕೊಂಡು ಸ್ಪೋಟಿಸಲಾಗಿತ್ತು.
