ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ

Date:

ಅನುಮತಿಯಿಲ್ಲದೆ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ ಸಿಜೆಪಿ ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ದೆಹಲಿಯ ತಿಹಾರ್ ಜೈಲಿನ ಪ್ರತ್ಯೇಕ ಹೈ-ಸೆಕ್ಯುರಿಟಿ ವಾರ್ಡ್‌ಗಳಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಇಬ್ಬರ ಕೋಣೆಗಳ ಹೊರಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಗಲಿನ ವೇಳೆ ಜೈಲಿನ ಇತರ ಕೈದಿಗಳೊಂದಿಗೆ ಇವರನ್ನು ಹೊರಗೆ ಬಿಡಬಾರದು ಎಂದು ಜೈಲು ಆಡಳಿತ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಕಾನೂನು ಉಲ್ಲಂಘಿಸಿ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಪ್ರಯತ್ನವನ್ನು ಪದೇಪದೇ ನಡೆಸಿದ ಆರೋಪದ ಮೇಲೆ ಅಕ್ಟೋಬರ್ 14ರಂದು ಇಬ್ಬರನ್ನು ಬಂಧಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಮತ್ತೆ ಕಾನೂನು ಉಲ್ಲಂಘಿಸುವ ಹಾಗೂ ಇತರರನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಇಬ್ಬರನ್ನೂ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಜೈಲಿನ ದಾಖಲೆಗಳ ಪ್ರಕಾರ, ಸೌರವ್ ದಾಸ್ ಅವರ ಕೈದಿ ಸಂಖ್ಯೆ 3752 ಆಗಿದ್ದು, ಆಶುತೋಷ್ ರಂಕಾ ಅವರ ಕೈದಿ ಸಂಖ್ಯೆ 1784 ಆಗಿದೆ. ಆರಂಭದಲ್ಲಿ ಇಬ್ಬರನ್ನೂ ಜೈಲು ಸಂಖ್ಯೆ 2ರಲ್ಲಿ ಇರಿಸಲಾಗಿತ್ತು. ಬಳಿಕ ರಂಕಾ ಅವರನ್ನು ಜೈಲು ಸಂಖ್ಯೆ 4ಕ್ಕೆ ಸ್ಥಳಾಂತರಿಸಲಾಗಿದೆ. ದಾಸ್ ಅವರನ್ನು ಜೈಲು ಸಂಖ್ಯೆ 2ರ ಮೂರನೇ ವಾರ್ಡ್‌ನಲ್ಲಿ ಇರಿಸಲಾಗಿದ್ದರೆ, ರಂಕಾ ಅವರು ಜೈಲು ಸಂಖ್ಯೆ 4ರ 15ನೇ ವಾರ್ಡ್‌ನಲ್ಲಿದ್ದಾರೆ. ಈ ವಾರ್ಡ್‌ಗಳಲ್ಲಿ ಇತರ ವಿಭಾಗಗಳಿಗಿಂತ ಕಡಿಮೆ ಸಂಖ್ಯೆಯ ಕೈದಿಗಳಿದ್ದಾರೆ ಎಂದು ವರದಿ ತಿಳಿಸಿದೆ.

ಇಬ್ಬರನ್ನೂ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಇತರ ವಾರ್ಡ್‌ಗಳ ಯಾವುದೇ ಕೈದಿಗಳಿಗೆ ಈ ವಾರ್ಡ್‌ಗಳಿಗೆ ಪ್ರವೇಶಿಸಲು ಅವಕಾಶವಿಲ್ಲ. ಅವರ ಕೋಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ. ಆತ್ಮಹತ್ಯೆ ತಡೆಗಟ್ಟುವ ಉದ್ದೇಶದಿಂದಲೂ ದಿನದ 24 ಗಂಟೆಯೂ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಹಾರ್ ಜೈಲಿನ ಮೂಲವೊಂದು ತಿಳಿಸಿದೆ. ಗುರುವಾರ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರು ಜೈಲಿಗೆ ಭೇಟಿ ನೀಡಿ ಇಬ್ಬರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ ನಾಯಕರಾದ ಸೌರವ್, ರಾಂಕಾ, ಅಜಿಂಕ್ಯಗೆ 5 ದಿನ ನ್ಯಾಯಾಂಗ ಬಂಧನ

ದಾಸ್‌ ಇರುವ ಜೈಲು ಸಂಖ್ಯೆ 2ರಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ಇದ್ದರು. ಹೋರಾಟಗಾರ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಕೂಡ ಇದೇ ಜೈಲಿನಲ್ಲಿದ್ದಾರೆ. ಆದರೆ ಅವರನ್ನು ಪ್ರತ್ಯೇಕ ಹೈ-ರಿಸ್ಕ್ ಕೋಣೆಯಲ್ಲಿ ಇರಿಸಲಾಗಿದೆ ಎಂದು ವರದಿ ಹೇಳಿದೆ. ಆಶುತೋಷ್ ರಂಕಾ ಇರುವ ಜೈಲು ಸಂಖ್ಯೆ 4ರಲ್ಲಿ ಈ ಹಿಂದೆ ವಿಪಶ್ಯನಾ ಧ್ಯಾನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಶಸ್ತ್ರಾಸ್ತ್ರ ವ್ಯಾಪಾರಿ ಅಭಿಷೇಕ್ ವರ್ಮಾ ಅವರನ್ನೂ ಹಿಂದೆ ಇದೇ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇಬ್ಬರೂ ಜೈಲು ಆಡಳಿತಕ್ಕೆ ಯಾವುದೇ ವಿಶೇಷ ಮನವಿ ಸಲ್ಲಿಸಿಲ್ಲ. ಆದರೆ ಅವರಲ್ಲಿ ಒಬ್ಬರು ಮತ್ತೊಬ್ಬ ಕೈದಿಯನ್ನು ಭೇಟಿಯಾಗಲು ಮೌಖಿಕವಾಗಿ ಮನವಿ ಮಾಡಿದ್ದು, ಅದನ್ನು ಜೈಲು ಆಡಳಿತ ತಿರಸ್ಕರಿಸಿದೆ ಎಂದು ಮೂಲವೊಂದು ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ದೇಶದಲ್ಲಿ ಅಲ್ಲದೆ ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕೇ?; ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಕಿಡಿ

ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸದಿದ್ದರೆ ಪಾಕಿಸ್ತಾನದಲ್ಲಿ ಹಾರಿಸಬೇಕೇ? ಭಾರತದ ತ್ರಿವರ್ಣ...

ಕಮಲನಗರ | ಚಕ್ರ ಎಸೆತ : ಅಂಬೇಡ್ಕರ್‌ ವಸತಿ ಶಾಲೆ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ

2026–27ನೇ ಸಾಲಿನ ಕ್ರೀಡಾಕೂಟದಲ್ಲಿ ಕಮಲನಗರ ತಾಲ್ಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ...

ಭಾರತದ ಮೇಲೆ 100% ಸುಂಕ ಹೇರುವ ನಿರ್ಧಾರ ರದ್ದು: ಟ್ರಂಪ್

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಸೇರಿದಂತೆ ವಿಶ್ವದ ಪ್ರಮುಖ...

CEC ರಾಜೀನಾಮೆಗೆ ಆಗ್ರಹ; ಅ.23ರಂದು ಸಂಯುಕ್ತ ಕಿಸಾನ್‌ ಮೋರ್ಚಾದಿಂದ ದೆಹಲಿ ಚಲೋ

SIR ಪ್ರಕ್ರಿಯೆಯನ್ನು ವಿರೋಧಿಸಿ, CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್...