ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಹಿಂದೂಗಳ ಪ್ರಾರ್ಥನೆ ಮುಂದುವರಿಯಲಿದೆ ಎಂದು ನ್ಯಾಯಾಧೀಶ ರಂಜನ್ ಅಗರ್‌ವಾಲ್ ಅವರು ಮಸೀದಿ ಸಮಿತಿ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಕಳೆದ ತಿಂಗಳು ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲ ಮಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು.
ತಮ್ಮ ಪೂರ್ವಜರು ಡಿಸೆಂಬರ್ 1993ರವರೆಗೂ ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಿದ್ದರು ಎಂದು ಶೈಲೇಂದ್ರ ಕುಮಾರ್ ಪಾಠಕ್ ಎಂಬುವವರ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿದಿತ್ತು. ನಾನೊಬ್ಬ ಅನುಮಂಶಿಕ ಅರ್ಚಕನಾದ ಕಾರಣ ತಮಗೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಪಾಠಕ್ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ಜ್ಞಾನವಾಪಿ ಮಸೀದಿಯು 4 ನೆಲಮಾಳಿಗೆಯನ್ನು ಹೊಂದಿದ್ದು, ಅದರಲ್ಲಿ ಒಂದು ವ್ಯಾಸ್ ಕುಟುಂಬಕ್ಕೆ ಸೇರಿದೆ. ಅರ್ಜಿದಾರರ ವಾದವನ್ನು ಮಸೀದಿ ಸಮಿತಿ ನಿರಾಕರಿಸಿದೆ. ನೆಲಮಾಳಿಗೆಯಲ್ಲಿ ಯಾವುದೇ ವಿಗ್ರಹಗಳು ಇರಲಿಲ್ಲ. ಹಾಗಾಗಿ 1993ರ ವರೆಗೂ ಪೂಜೆ ಮಾಡಿರುವ ಬಗ್ಗೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದು ಮಸೀದಿ ಸಮಿತಿ ಹೇಳಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಮಸೀದಿ ಸಮಿತಿ ವಾರಣಾಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿ ಹೊರಬಿದ್ದ ನಂತರ ವಾರಣಾಸಿ ನ್ಯಾಯಾಲಯದ ತೀರ್ಪು ಪ್ರಕಟವಾಗಿತ್ತು. ಈ ಮಸೀದಿಯನ್ನು ಔರಂಗಜೇಬ್ ಆಡಳಿತದ ವೇಳೆ ಹಿಂದು ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿತ್ತು ಎಂದು ವರದಿ ಹೇಳಿತ್ತು.