ಭಾರತೀಯ ಹಾಕಿ ತಾರೆ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ರಾಣಿ ರಾಂಪಾಲ್ ತನ್ನ ಸೂಟ್‌ಕೇಸ್‌ಗೆ ಹಾನಿಯಾದ ವಿಚಾರದಲ್ಲಿ ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆನಡಾದಿಂದ ಭಾರತಕ್ಕೆ ಹಿಂದಿರುಗುವಾಗ ರಾಣಿ ರಾಂಪಾಲ್ ಸೂಟ್‌ಕೇಸ್ ಒಡೆದುಹೋಗಿದೆ. ಇದರ ಚಿತ್ರವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಣಿ ರಾಂಪಾಲ್ ಏರ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್‌ಗೆ ‘ಭಾರತ ರತ್ನ’ ನೀಡಿ: ಪೋಸ್ಟರ್ ಹಾಕಿದ ಜೆಡಿಯು ನಾಯಕ!
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಅದ್ಭುತ ಆಶ್ಚರ್ಯ ನೀಡಿದ್ದಕ್ಕಾಗಿ ಏರ್ ಇಂಡಿಯಾಕ್ಕೆ ಧನ್ಯವಾದಗಳು. ನಿಮ್ಮ ಸಿಬ್ಬಂದಿ ನಮ್ಮ ಬ್ಯಾಗ್‌ಗಳನ್ನು ಈ ರೀತಿ ನೋಡಿಕೊಳ್ಳುತ್ತಾರೆ. ನಾನು ಇಂದು ಮಧ್ಯಾಹ್ನ ಕೆನಡಾದಿಂದ ಭಾರತಕ್ಕೆ ಹಿಂದಿರುಗುವಾಗ ದೆಹಲಿಯಲ್ಲಿ ಇಳಿದ ನಂತರ ನೋಡಿದಾಗ ನನ್ನ ಬ್ಯಾಗ್ ಮುರಿದುಹೋಗಿದೆ” ಎಂದು ಹೇಳಿದ್ದಾರೆ.
ಈ ಟ್ವೀಟ್‌ಗೆ ಏರ್‌ಇಂಡಿಯಾ ಪ್ರತಿಕ್ರಿಯಿಸಿದ್ದು, ಕ್ಷಮೆಯಾಚಿಸಿದೆ. “ಆತ್ಮೀಯ ರಾಂಪಾಲ್ ಅವರೇ ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ದಯವಿಟ್ಟು ನಿಮ್ಮ ಟಿಕೆಟ್ ವಿವರಗಳು, ಬ್ಯಾಗ್ ಟ್ಯಾಗ್ ಸಂಖ್ಯೆ ಮತ್ತು ಹಾನಿಯ ದೂರು ಸಂಖ್ಯೆ/ಡಿಬಿಆರ್ ಪ್ರತಿಯನ್ನು ನಮಗೆ ಮೆಸೇಜ್ ಮೂಲಕ ತಿಳಿಸಿ” ಎಂದು ಏರ್ ಇಂಡಿಯಾ ಹೇಳಿದೆ.
Thank you Air India for this wonderful surprise. This is how your staff treat our bags. On my way back from Canada to India this afternoon after landing in Delhi I found my bag broken.@airindia pic.twitter.com/xoBHBs0xBG
— Rani Rampal (@imranirampal) October 5, 2024
