ಇತ್ತೀಚೆಗೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಂಡ್ಲಾ ಜಿಲ್ಲೆಯ ಬೈನ್ಸ್ವಾಹಿ ಗ್ರಾಮದಲ್ಲಿ ಫ್ರಿಡ್ಜ್ನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 11 ಮನೆಗಳನ್ನು ಪೊಲೀಸರು ಕೆಡವಿದ್ದಾರೆ. ಸರ್ಕಾರಿ ಭೂಮಿಯಲ್ಲಿರುವ, ಗೋಮಾಂಸ ಪತ್ತೆಯಾದ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ಹೇಳಿದ್ದಾರೆ.
ಬಹುತೇಕ ಮಾಧ್ಯಮಗಳು ಫ್ರಿಡ್ಜ್ನಲ್ಲಿ ಗೋಮಾಂಸವಿದ್ದ ಮನೆಗಳನ್ನು ಕೆಡವಲಾಗಿದೆ ಎಂದೇ ಸುದ್ದಿ ಮಾಡಿವೆ. ಗೋದಿ ಮಾಧ್ಯಮಗಳು ಇದನ್ನು ‘ಗೋ ಹತ್ಯೆ ನಿಷೇಧ’ದ ಕ್ರಮ ಎಂದು ಬಣ್ಣಿಸಿಕೊಂಡಿದೆ. ಕೆಲವು ನೆಟ್ಟಿಗರು, “ಜನರನ್ನು ತಪ್ಪು ದಾರಿಗೆ ಯಾಕೆ ಎಳೆಯುತ್ತೀರಿ. ಮನೆಯನ್ನು ಅಕ್ರಮವಾಗಿ ಕಟ್ಟಲಾಗಿದೆ. ಅದಕ್ಕಾಗಿ ಕೆಡವಲಾಗಿದೆ” ಎಂದು ಸುದ್ದಿಗಳಿಗೆ ಕಾಮೆಂಟ್ ಮಾಡಿದ್ದಾರೆ.
ನಾವು ಎಲ್ಲ ಕಾನೂನು ಕ್ರಮಗಳು, ರೀತಿ-ರಿವಾಜುಗಳು, ನಿಯಮಗಳನ್ನು ಬದಿಗೊತ್ತಿ ಈ 11 ಮನೆಗಳನ್ನು ಕೂಡಾ ಅಕ್ರಮವೆಂದೇ ಪರಿಗಣಿಸೋಣ. ಈ ಕಾರಣದಿಂದಾಗಿಯೇ ಕೆಡವಲಾಗಿದೆ ಎಂದು ತಿಳಿಯೋಣ. ಆದರೆ, ಕೆಡವಲಾದ ಮನೆಗಳ ನೆರೆಹೊರೆಯಲ್ಲೇ ಅಕ್ರಮವಾಗಿರುವ ನಿರ್ಮಾಣಗೊಂಡಿರುವ 16 ಮನೆಗಳು ಹಾಗೆಯೇ ಉಳಿದಿವೆ ಎಂಬುದು ಗಮನಾರ್ಹ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ| ಫ್ರಿಡ್ಜ್ನಲ್ಲಿ ಗೋಮಾಂಸ ಪತ್ತೆ; 11 ಮನೆಗಳನ್ನು ಕೆಡವಿದ ಪೊಲೀಸರು!
ಹೌದು, ಜೂನ್ 15ರಂದು ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧದ ಕ್ರಮದ ಭಾಗವಾಗಿ ಫ್ರಿಡ್ಜ್ನಲ್ಲಿ ಗೋಮಾಂಸ ಪತ್ತೆಯಾಗಿದೆ ಎಂದು ಆರೋಪಿಸಲಾಗಿತ್ತು. ಅದೇ ಕಾರಣಕ್ಕೆ, 11 ಮನೆಗಳನ್ನು ನೆಲಸಮ ಮಾಡಲಾಗಿತ್ತು. ಬಳಿಕ, ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಕಾರಣಕ್ಕೆ ನೆಲಸಮಗೊಳಿಸಲಾಗಿದೆ ಎಂಬ ಸಮಜಾಯಷಿಗಳು ಬಂದಿದ್ದವು. ಆದರೆ, ಅದೇ ಭೂಮಿಯಲ್ಲೇ ಅಕ್ರಮವಾಗಿ ನಿರ್ಮಾಣವಾಗಿರುವ ಉಳಿದ 16 ಮನೆಗಳ ತಂಟೆಗೆ ಪೊಲೀಸರು ಹೋಗಿಲ್ಲ. ಕಾರಣ ಆ ಮನೆಗಳ ಫ್ರಿಡ್ಜ್ನಲ್ಲಿ ಗೋಮಾಂಸ ಪತ್ತೆಯಾಗಿಲ್ಲ!
Incessant violence has been committed against Muslims in the couple weeks since result day.
An entire neighborhood razed in Lucknow days before Eid, 11 homes demolished on claims of having beef, mob violence in Medak over Eid, and now a man has been lynched in Aligarh.— Sabika (@sadigalisabzi) June 19, 2024
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನೈನ್ಪುರ ಪೊಲೀಸ್ ಠಾಣೆಯ ಎಸ್ಎಚ್ಒ ಇಂದರ್ ಬಲ್ದೇವ್, “ನಾವು ಗೋಮಾಂಸ ಪತ್ತೆಯಾದ ಮನೆಗಳನ್ನು ನೆಲಸಮಗೊಳಿಸಿದ್ದೇವೆ ಮತ್ತು ಉಳಿದವರನ್ನು ಸದ್ಯಕ್ಕೆ ಬಿಟ್ಟಿದ್ದೇವೆ. ಯಾವ ಮನೆಗಳನ್ನು ಕೆಡವಬೇಕು ಎಂಬುದು ನಮ್ಮ ಪ್ರೋಟೋಕಾಲ್ನ ಭಾಗವಲ್ಲ. ಇದನ್ನು ಕಂದಾಯ ಇಲಾಖೆ ನಿರ್ಧರಿಸುತ್ತದೆ” ಎಂದು ಹೇಳಿದ್ದಾರೆ.
“ಜಾನುವಾರು ಕಳ್ಳಸಾಗಾಣಿಕೆದಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೆವು. ಪ್ರಾಣಿಗಳ ಚರ್ಮವನ್ನು ಖರೀದಿಸಿದ ಜಬಲ್ಪುರದ ಚರ್ಮದ ಕಂಪನಿಗಳು ಮತ್ತು ಈ ಗ್ಯಾಂಗ್ನಿಂದ ಹಸುವಿನ ಮಾಂಸವನ್ನು ಖರೀದಿಸಿದ ಸ್ಥಳೀಯ ಬುಡಕಟ್ಟು ಜನರನ್ನು ತನಿಖೆ ಮಾಡಲಾಗುತ್ತದೆ. ಪುನರಾವರ್ತಿತ ಅಪರಾಧಿಗಳಾಗಿರುವ ಐವರು ಆರೋಪಿಗಳ ವಿರುದ್ಧ ಎನ್ಎಸ್ಎ ಅರ್ಜಿ ಸಲ್ಲಿಸಲಾಗುವುದು” ಎಂದೂ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗೋಮಾಂಸ ರುಚಿಯಾಗಿರಲು ಹಸುಗಳಿಗೆ ಡ್ರೈ ಫ್ರೂಟ್ಸ್ ತಿನ್ನಿಸಿ, ಬಿಯರ್ ಕುಡಿಸಿ: ಮಾರ್ಕ್ ಜುಕರ್ಬರ್ಗ್
ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಲಾ ಜಿಲ್ಲಾಧಿಕಾರಿ ಸಲೋನಿ ಸಿಡಾನಾ “ನಿರ್ದಿಷ್ಟ ಮನೆಗಳನ್ನು ಗುರಿಯಾಗಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ. “ಸ್ಥಳೀಯ ಆಡಳಿತವು 2022ರಿಂದ ಈ ಗ್ರಾಮದ ನಿವಾಸಿಗಳಿಗೆ ನೋಟಿಸ್ಗಳನ್ನು ನೀಡುತ್ತಿದೆ. 2016ರಲ್ಲಿ ಈ ಗ್ರಾಮದಲ್ಲಿ ವಾರೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸರೊಬ್ಬರನ್ನು ಹೊಡೆದು ಸಾಯಿಸಲಾಗಿದೆ. ಈ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
This is fascist rule of the jungle!
Only in BJP ruled states https://t.co/P3fdUceORq— Prashant Bhushan (@pbhushan1) June 15, 2024
ಉಳಿದ 16 ಮನೆಗಳನ್ನು ಯಾಕೆ ಕೆಡವಿಲ್ಲ ಎಂಬ ಪ್ರಶ್ನೆಗೆ, “ಕೆಲವು ನಿರ್ಬಂಧಗಳು ಇರುವುದರಿಂದ ನಾವು ಇತರ ಮನೆಗಳನ್ನು ಕೆಡವಲಿಲ್ಲ. ಇದು ಈದ್ ದಿನ, ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಆ ಮನೆಗಳನ್ನು ಹಾಗೆಯೇ ಉಳಿಸಿದ್ದೇವೆ. ಈ ಗ್ರಾಮದಲ್ಲಿರುವ ಎಲ್ಲ ಅಕ್ರಮ ಕಟ್ಟಡಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಈದ್ ದಿನದ ಸೂಕ್ಷ್ಮತೆಯ ಬಗ್ಗೆ ಮಾತನಾಡುವ ಮಂಡ್ಲಾ ಜಿಲ್ಲಾಧಿಕಾರಿ ಸಲೋನಿ ಸಿಡಾನಾ ಈದ್ಗೂ ಒಂದು ದಿನ ಮುನ್ನವೇ ದಾಳಿ ನಡೆಸಿ ಆ ಮನೆಗಳನ್ನು ಕೆಡವಿರುವುದರ ಹಿಂದೆ ಇರುವ ಸೂಕ್ಷ್ಮತೆಯ ಬಗ್ಗೆ ಮಾತನಾಡುವುದಿಲ್ಲ.
ನೋಟಿಸ್ ನೀಡದೆಯೇ ಮನೆ ಕೆಡವಿದ್ದಾರೆ!
ಬೈನ್ಸ್ವಾಹಿ ಗ್ರಾಮವು ಬುಡಕಟ್ಟು ಮತ್ತು ಮುಸ್ಲಿಂ ಸಮುದಾಯಗಳನ್ನು ಒಳಗೊಂಡ ಸುಮಾರು 1,100 ನಿವಾಸಿಗಳನ್ನು ಹೊಂದಿದೆ. ಗ್ರಾಮದಾದ್ಯಂತ ಸುಮಾರು 80 ಮುಸ್ಲಿಂ ಮನೆಗಳಿವೆ. ಈ ಹಿಂದೆ 15,000 ಚದರ ಅಡಿ ಸರ್ಕಾರಿ ಭೂಮಿಯಲ್ಲಿದ್ದ ಸುಮಾರು 27 ಮನೆಗಳ ಮೇಲೆ ಭಾರೀ ಪೊಲೀಸ್ ಪಡೆ ದಾಳಿ ನಡೆಸಿದ್ದು ನೆಲಸಮ ಮಾಡಿತ್ತು.
ಇದನ್ನು ಓದಿದ್ದೀರಾ? ಬೆಂ.ಗ್ರಾ | ಗೋಮಾಂಸ ಸಾಗಾಟಗಾರರ ಮೇಲೆ ಸಂಘಪರಿವಾರದವರ ವಿಕೃತ ಹಲ್ಲೆ
ಆದರೆ ಈ ಪ್ರಕರಣದಲ್ಲಿ ಗೋಮಾಂಸವಿದ್ದ ಕಾರಣಕ್ಕೆ ಮನೆಗಳನ್ನು ಕೆಡವಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮ ಮನೆಯನ್ನು ಕೆಡವುವ ಮುನ್ನ ನೋಟಿಸ್ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಗ್ರಾಮಸ್ಥರ ಉತ್ತರ ಇಲ್ಲ ಎಂಬುವುದಾಗಿದೆ. “ನಮಗೆ ಯಾವುದೇ ನೋಟಿಸ್ ಅನ್ನು ನೀಡಿಲ್ಲ. ನೋಟಿಸ್ ನೀಡಿದ್ದರೆ ನಾವು ಅಗತ್ಯ ಸಾಮಾಗ್ರಿಗಳನ್ನಾದರೂ ಸುರಕ್ಷಿತವಾಗಿರಿಸುತ್ತಿದ್ದೆವು. ಈಗ ನಮ್ಮಲ್ಲಿ ಒಂದು ಬಟ್ಟೆಯಷ್ಟೆ ಉಳಿದಿದೆ” ಎನ್ನುತ್ತಾರೆ ಸುಲ್ತಾನ್ ಖುರೇಷಿ.
#Beef
Muslims Homes being demolished for Beef found in fridge…Al kabeer largest exporter of beef is owned by a Hindu … https://t.co/cbJzKNOS4D— Dr Asma Zehra Tayeba (@AsmaZehradr) June 18, 2024
ಇನ್ನು ಅಕ್ರಮವಾದರೂ ತನ್ನ ಮನೆ ಉಳಿದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಶಿಯಾ ಖುರೇಷಿ, “ಈ ಗ್ರಾಮದಲ್ಲಿ ನನಗೆ ಎರಡು ಮನೆಗಳಿವೆ, ಅವೆರಡನ್ನೂ ಕೆಡವಬಹುದೆಂದು ನಾನು ಭಾವಿಸಿದ್ದೆ. ನನ್ನ ಮನೆಯೂ ಸರಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದು, 25 ವರ್ಷಗಳಿಂದ ಇಲ್ಲೇ ವಾಸವಾಗಿದ್ದೇನೆ. ಇತರರ ಮನೆಗಳನ್ನು ಕೆಡವುವುದಾದರೆ ನನ್ನ ಮನೆಯನ್ನು ಕೂಡಾ ಕೆಡವಬೇಕು. ಅವರ ಮನೆಯಲ್ಲಿ ಗೋಮಾಂಸ ಇತ್ತು, ನನ್ನ ಮನೆಯಲ್ಲಿ ಗೋಮಾಂಸ ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಮನೆಯನ್ನು ಕೆಡವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.