ಉತ್ತರ ಪ್ರದೇಶದ ಆಗ್ರಾದಲ್ಲಿ ಸತತ 3 ದಿನಗಳಿಂದ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ತಾಜ್ ಮಹಲ್ ಆವರಣದಲ್ಲಿನ ಮತ್ತೊಂದು ವಿಡಿಯೋ ಹರಿದಾಡಿದೆ. ಇಬ್ಬರು ಪ್ರವಾಸಿಗರು ತಾಜ್ ಮಹಲ್ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆ ತಾಜ್ ಮಹಲ್ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದ್ದು, ವೈರಲ್ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?
ಹೆಚ್ಚುವರಿಯಾಗಿ, ಉದ್ಯಾನಗಳಲ್ಲಿ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ತಾಜ್ ಮಹಲ್ ಉಸ್ತುವಾರಿ ಮತ್ತು ಭದ್ರತಾ ಸಿಬ್ಬಂದಿ, ಉದ್ಯಾನಗಳಲ್ಲಿ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರಿಕೆಯನ್ನು ವಹಿಸಬೇಕೆಂದು ಆಗ್ರಾ ಎಎಸ್ಐ ಮುಖ್ಯಸ್ಥ ಆರ್ಕೆ ಪಟೇಲ್ ಹೇಳಿದ್ದಾರೆ.
‘‘ತಾಜ್ ಮಹಲ್ ಕಾಂಪ್ಲೆಕ್ಸ್‌ನಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಿದ್ದರೂ ಪ್ರವಾಸಿಗರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಯಾವ ಇಲಾಖೆಗೂ ಕಂಡಿಲ್ಲವೇ ಎಂದು ಮಾರ್ಗದರ್ಶಿ ಸಂಘದ ಅಧ್ಯಕ್ಷ ದೀಪಕ್ ದಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಈ ನಡುವೆ ಮೂತ್ರ ವಿಸರ್ಜನೆ ಘಟನೆ ಬಳಿಕ ತಾಜ್ ಮಹಲ್ ಅಪವಿತ್ರಗೊಂಡಿದೆ ಎಂದು ಗಂಗಾಜಲದೊಂದಿಗೆ ಆಗಮಿಸಿದ ಹಿಂದೂ ಕಾರ್ಯಕರ್ತರೊಬ್ಬರನ್ನು ಪೊಲೀಸರು ತಡೆ ಹಿಡಿದಿದ್ದಾರೆ.

Sir ji edu hindu sangattane galu mattu muslim virodhi galu e taraha madiddu elli varege yaaru eki madilla evage yake
Edu yella kutantra ede