ನಿಮ್ಮ ಸೋದರ ಅತ್ಯಾಚಾರವೆಸಗಿದ ಎಂದು ಹೇಳಿದ್ದಕ್ಕೆ ಪತ್ನಿಯ ಎದೆಯ ಮೇಲೆ ಕುಳಿತುಕೊಂಡ ಪತಿ ಆಕೆಯ ಕತ್ತು ಹಿಸುಕಿದ ಆಘಾತಕಾರಿ ಘಟನೆ ಉತ್ತರ ಪ್ರದೇಶ ದ ಮುಜಾಫ್ಫರ್‌ನಗರದಲ್ಲಿ ನಡೆದಿದೆ.
ಮಹಿಳೆಯ ಪತಿಯ ಸಹೋದರ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ನೀವು ಮನೆಯಲ್ಲಿ ಇಲ್ಲದ ವೇಳೆ ನಿಮ್ಮ ಸೋದರ ನನ್ನ ಮೇಲೆ ಅತ್ಯಾಚಾರವೆಸಗಿದ’ ಎಂದು ಮಹಿಳೆಯು ತನ್ನ ಪತಿಗೆ ಹೇಳಿದ್ದಕ್ಕೆ ಅತ ಕೋಪಗೊಂಡಿದ್ದಾನೆ. ನಂತರ ನೀನು ನನ್ನ ಹೆಂಡತಿಯಲ್ಲ ಇನ್ನು ಮುಂದೆ ನೀನು ನನ್ನ ಅತ್ತಿಗೆ ಎಂದಿದ್ದಾನೆ.
ಮರುದಿನ ಪತಿ ಹಾಗೂ ಆತನ ಸೋದರ ಮಹಿಳೆ ಇದ್ದ ಕೊಠಡಿಗೆ ಆಗಮಿಸಿದ್ದಾರೆ. ಪತ್ನಿಯ ಎದೆಯ ಮೇಲೆ ಕುಳಿತ ಪತಿ ದುಪ್ಪಟದಿಂದ ಆಕೆಯ ಕುತ್ತಿಗೆ ಹಿಸುಗಿದ್ದಾನೆ. ಇದನ್ನು ಆಕೆಯ ಸೋದರ ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ದಾಳಿಯಿಂದ ಬದುಕುಳಿದಿರುವ ಮಹಿಳೆಯು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹರಿದಾಡಿದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
“ಮಹಿಳೆಯ ಪತಿ ಹಾಗೂ ಆಕೆಯ ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 376, 307 ಹಾಗೂ 328 ಸೆಕ್ಷನ್‌ಗಳಡಿಯಲ್ಲಿ ದೂರು ದಾಖಲಿಸಲಾಗಿದೆ”ಎಂದು ಪೊಲೀಸ್ ವರಿಷ್ಟಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ತಿಳಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುವ ಮುನ್ನವೆ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ. ಈತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.
