ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ, ವಿವಾದಿತ ನಾಯಕಿ ಕೊಂಪೆಲ್ಲಾ ಮಾಧವಿ ಲತಾ ಅವರು ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರನ್ನು ತಮ್ಮ ಮತದಾರರ ಗುರುತಿನ ಚೀಟಿಯಲ್ಲಿರುವ ಫೋಟೋಗಳೊಂದಿಗೆ ಹೊಂದಿಸಲು ತಮ್ಮ ಮುಖವನ್ನು ತೋರಿಸುವಂತೆ ಒತ್ತಾಯಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.
ಇಂದು ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆಯಲ್ಲಿ ಹೆಚ್ಚು ಧಾರ್ಮಿಕ ದ್ವೇಷಪೂರಿತ ಭಾಷಣಕ್ಕೆ ಕುಖ್ಯಾತರಾದ ಅಭ್ಯರ್ಥಿಗಳ ಪೈಕಿ ಮಾಧವಿ ಲತಾ ಕೂಡ ಒಬ್ಬರು. ಅವರು ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಡಿಮೆಯಿದ್ದರೂ ಹೈದರಾಬಾದ್‌ನಿಂದ ನಾಲ್ಕು ಬಾರಿ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
Is this even allowed?
Can a candidate check the voter-id card of voters?
Is she not intimidating the voters??@ECISVEEP – hope you will take action on this.
— Mahua Moitra Fans (@MahuaMoitraFans) May 13, 2024
ಮಾಧವಿ ಲತಾ ಅವರ ಗುರುತನ್ನು ಪರಿಶೀಲಿಸಲು ಯಾರೊಬ್ಬರ ಮುಸುಕನ್ನು ಎತ್ತುವ ಹಕ್ಕು ಯಾವುದೇ ಅಭ್ಯರ್ಥಿಗೆ ಇಲ್ಲದಿರುವುದರಿಂದ ಅವರ ವಿರುದ್ಧ ಪೊಲೀಸರು, ಐಪಿಸಿ ಸೆಕ್ಷನ್ 171ಸಿ, 186,505(1) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ರೊನಾಲ್ಡ್ ರಾಸ್ ತಿಳಿಸಿದ್ದಾರೆ.
“ಒಂದು ವೇಳೆ ಅಭ್ಯರ್ಥಿಗಳಿಗೆ ಮತದಾರರ ಬಗ್ಗೆ ಏನೇ ಅನುಮಾನವಿದ್ದಲ್ಲಿ, ಮತದಾರರ ಗುರುತನ್ನು ಪರಿಶೀಲಿಸಲು ಚುನಾವಣಾಧಿಕಾರಿಯವರ ಬಳಿ ವಿನಂತಿಸಿಕೊಳ್ಳಬಹುದು. ಖುದ್ದು ಅವರಾಗಿಯೇ ಈ ರೀತಿ ಮಾಡುವಂತಿಲ್ಲ. ಹಾಗಾಗಿ, ತಮ್ಮಿಷ್ಟದಂತೆ ವರ್ತಿಸಿರುವ ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
