18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಕರ್ನಾಟಕದ ಸಾಗರ್ ಈಶ್ವರ ಖಂಡ್ರೆ ಅವರು ಲೋಕಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಬೀದರ್ ಲೋಕಸಭಾ ಕ್ಷೇತ್ರದಿಂದ 26ನೇ ವಯಸ್ಸಿನಲ್ಲಿಯೇ ಸಂಸದರಾಗಿ ಲೋಕಸಭೆಗೆ ಆಯ್ಕೆಯಾಗಿರುವ ಸಾಗರ ಈಶ್ವರ ಖಂಡ್ರೆ ಅವರು ನೂತನ ಸಂಸತ್ ಭವನದಲ್ಲಿ ಸೋಮವಾರ ಆರಂಭಗೊಂಡ ಮೊದಲ ಅಧೀವೇಶನದಲ್ಲಿ ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರಾದ ಭರ್ತೃಹರಿ ಮಹಾತಾಬ್ ಅವರು ಸಾಗರ ಖಂಡ್ರೆ ಅವರಿಗೆ ಕೈಕುಲುಕಿ ಅಭಿನಂದಿಸಿದರು.
ಈ ಕುರಿತು ʼಎಕ್ಸ್ʼನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು “ನಮ್ಮ ಪ್ರೀತಿಯ ಬೀದರ ಲೋಕಸಭಾ ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ಇಂದು ದೆಹಲಿಯ ಸಂಸತ ಭವನದಲ್ಲಿ 18ನೇ ಲೋಕಸಭೆಯ ಸದಸ್ಯನಾಗಿ, ಬೀದರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿದೇನು” ಎಂದಿದ್ದಾರೆ.
“ಈ ಅದ್ಭುತ, ಅವಿಸ್ಮರಣೀಯ ಕ್ಷಣಕ್ಕೆ ಕಾರಣೀಭೂತರಾದ ಬೀದರ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಅನಂತ ಧನ್ಯವಾದಗಳು ಅರ್ಪಿಸುತ್ತೇನೆ. ತಮ್ಮೆಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಬೀದರ ಕ್ಷೇತ್ರದ ಜನತೆಗೆ ಚುತ್ಯಿ ಬರದಂತೆ ಕ್ಷೇತ್ರ, ರಾಜ್ಯ ಹಾಗೂ ದೇಶದ ಏಳಿಗೆಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೆನೆ” ಎಂದು ಬರೆದುಕೊಂಡಿದ್ದಾರೆ.
ನಮ್ಮ ಪ್ರೀತಿಯ ಬೀದರ ಲೋಕಸಭಾ ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ಇಂದು ದೆಹಲಿಯ ಸಂಸತ ಭವನದಲ್ಲಿ 18ನೇ ಲೋಕಸಭೆಯ ಸದಸ್ಯನಾಗಿ, ಬೀದರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆನು.
ಈ ಅಧ್ಭೂತ, ಅವಿಸ್ಮರಣೀಯ ಕ್ಷಣಕ್ಕೆ ಕಾರಣೀಭೂತರಾದ ಬೀದರ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಅನಂತ ಧನ್ಯವಾದಗಳು ಅರ್ಪಿಸುತ್ತೇನೆ.… pic.twitter.com/EKSVgSr0zU
— Sagar Khandre (@SagarKhandre12) June 24, 2024
ಲೋಕಸಭಾ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದ ಅವರು ದೇಶದ ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ.