ಇವತ್ತು ಬುದ್ಧ ಪೂರ್ಣಿಮಾ ದಿನ. ಭಾರತ ಹಿಂದಿನಿಂದಲೂ ಶಾಂತಿ ರಾಷ್ಟ್ರವಾಗಿದೆ. ಆದರೆ, ಪಾಕಿಸ್ತಾನದೊಂದಿಗೆ ನಾವು ಶಾಂತಿಯಿಂದ ಇರಲು ಸಾಧ್ಯವಿಲ್ಲ. ನಮ್ಮ ದೇಶದ ಸೈನ್ಯಕ್ಕೆ ಆಗಾದವಾದ ಶಕ್ತಿ ಇದೆ. ನಮ್ಮ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು.
‘ಆಪರೇಷನ್ ಸಿಂಧೂರ’ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದರು.
“ಆತಂಕವಾದಿಗಳ ಹೆಡ್ ಕ್ವಾಟರ್ಸ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬಹವಾಲ್ಪುರ್, ಮುರಿಡ್ಕೆ ಇವು ಜಾಗತಿಕ ಉಗ್ರವಾದದ ವಿಶ್ವವಿದ್ಯಾಲಯಗಳಾಗಿದ್ದವು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಉಗ್ರವಾದಿಗಳ ತಾಣಗಳು ಈಗ ಸಂಪೂರ್ಣ ನಾಶವಾಗಿವೆ” ಎಂದು ತಿಳಿಸಿದರು.
“ವಿಜ್ಞಾನಗಳಿಗೆ, ಸೈನಿಕರಿಗೆ ನನ್ನ ನಮಸ್ಕಾರ ತಿಳಿಸುವೆ. ಆಪರೇಷನ್ ಸಿಂಧೂರವನ್ನು ನಮ್ಮ ಸೈನಿಕರು ಯಶಸ್ವಿಗೊಳಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಕುಟುಂಬದ ಸದಸ್ಯರನ್ನು ಕೊಂದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಪ್ರತಿ ತಾಯಿ ಮತ್ತು ಸಹೋದರಿಯರಿಗೆ ನಮ್ಮ ಸೇನೆ ನ್ಯಾಯ ಒದಗಿಸಿದೆ” ಎಂದರು.
“ಅಮಾಯಕರನ್ನು ಮನಬಂದಂತೆ ಕೊಂದ ಭಯೋತ್ಪಾದಕರು. ಭಯೋತ್ಪಾದಕ ವಿರುದ್ಧ ಪ್ರತೀಕಾರಕ್ಕೆ ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವು. ಪರಿಣಾಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದರೆ ಏನಾಗುತ್ತದೆ ಅಂತ ನಮ್ಮ ಸೈನ್ಯ ಭಯೋತ್ಪಾದಕರಿಗೆ ತೋರಿಸಿಕೊಟ್ಟಿದೆ. ಆತಂಕವಾದಿ ಸಂಘಟನೆಗಳ ವಿರುದ್ಧ ನಮ್ಮ ಸೈನ್ಯ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಿದೆ. ಭಾರತ ಹೀಗೆ ತಮ್ಮ ಮೇಲೆ ಪ್ರತಿ ದಾಳಿ ಮಾಡುತ್ತದೆ ಎಂದು ಉಗ್ರವಾದಿಗಳು ತಮ್ಮ ಕನಸಿನಲ್ಲೂ ಯೋಚಿಸರಲಿಲ್ಲ” ಎಂದು ಹೇಳಿದರು.
“ಭಯೋತ್ಪಾದಕರು ನಮ್ಮ ದೇಶದ ಗುರುದ್ವಾರ, ಶಾಲಾ -ಕಾಲೇಜುಗಳನ್ನು ಗುರಿಯಾಗಿಸಿಕೊಂಡಿದ್ದರು. ನಮ್ಮ ಸೇನೆಲೆ ಮಿಸೈಲ್‌ಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದ ಭಯೋತ್ಪಾದನ ನೆಲೆಗಳತ್ತ ನುಗ್ಗಿ ಅವುಗಳನ್ನು ನಾಶಪಡಿಸುವೆ. ಇದರ ಪರಿಣಾಮ, ಪಾಕಿಸ್ತಾನದ ಜಂಘಾಬಲವೇ ಉಡುಗುವಂತಾಗಿದೆ. ಪಾಕಿಸ್ತಾನವು ನಮ್ಮ ಸೀಮೆಯ ಮೇಲೆ ದಾಳಿ ನಡೆಸಿದರೆ, ನಾವು ಅವರ ಆಂತರ್ಯಕ್ಕೆ ಹೋಗಿ ದಾಳಿ ನಡೆಸಿದ್ದೇವೆ” ಎಂದರು.
“ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸ ಒಂದು ಕ್ರೂರತ್ವಕ್ಕೆ ಸಾಕ್ಷಿ. ಆ ಘಟನೆಯು ಇಡೀ ದೇಶ, ಜಾತಿಮತ ಭೇದಗಳಿಲ್ಲ ಭಯೋತ್ಪಾದನೆಯ ವಿರುದ್ಧ ಸಿಡಿದೆದ್ದವು. ನಾವು ಉಗ್ರವಾದಿಗಳನ್ನು ಮಣ್ಣಿನಲ್ಲಿ ಮಣ್ಣಾಗಿಸಲು ನಾವು ಪ್ರತಿಜ್ಞೆ ಮಾಡಿದೆವು. ಇಂದು ಆತಂಕವಾದಿಗಳು, ಅವರ ಸಂಘಟನೆಗಳಿಗೆ ನಮ್ಮ ಅಕ್ಕ ತಂಗಿಯ ಹಣೆಯಿಂದ ಕುಂಕುಮ ಅಳಿಸಿದರೆ ಏನಾಗುತ್ತೆ ಎಂಬುದಕ್ಕೆ ಉತ್ತರ ಸಿಕ್ಕಿದೆ” ಎಂದು ತಿಳಿಸಿದರು.
“ಆಪರೇಷನ್ ಸಿಂಧೂರ ಇಡೀ ಭಾರತದ ಭಾವನೆಗಳ ಪ್ರತೀಕ. ಮೇ 6ರ ರಾತ್ರಿ ಹಾಗೂ ಮೇ 7ರ ನಡುವಿನ ಮಧ್ಯರಾತ್ರಿ ಇಡೀ ಜಗತ್ತು ನಮ್ಮ ಪ್ರತಿಜ್ಞೆ ಏನಾಗಿತ್ತು ಎಂಬುದನ್ನು ಕಣ್ಣಾರೆ ನೋಡಿತು. ಪಾಕಿಸ್ತಾನದ 9 ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿದೆವು. ಅವರು ಇದನ್ನು ಕನಸಲ್ಲೂ ಎಣಿಸಿರಲಿಲ್ಲ. ಆದರೆ, ನಮ್ಮ ನಿರ್ಧಾರ ಸ್ಪಷ್ಟವಾಗಿತ್ತು. ನಮಗೆ ದೇಶ ಮೊದಲು ಆಗಿತ್ತು. ಯಾವಾಗ ಇಂಥ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತೋ ಆಗ ಇಂಥ ದಾಳಿಗಳನ್ನು ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿದ್ದು, ಇದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಇದಾದ ಬಳಿಕ ಭಾರತೀಯ ಸೇನೆ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಪಾಕ್ ಹಾಗೂ ಭಾರತ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.