ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾ ಕರಾವಳಿಯತ್ತ ಸಾಗುತ್ತಿದ್ದ ಭಾರತೀಯ ನೌಕಾಪಡೆ ಹಡಗನ್ನು ಅಪಹರಿಸುವ ಯತ್ನವನ್ನು ನೌಕಾಪಡೆಯ ತಕ್ಷಣದ ಪ್ರತಿಕ್ರಿಯೆಯಿಂದ ವಿಫಲಗೊಳಿಸಲಾಗಿದೆ.
ಶುಕ್ರವಾರ ಮುಂಜಾನೆ ಸೊಮಾಲಿಯಾ ಕರಾವಳಿಯತ್ತ ಸರಕು ಸಾಗಣೆ ಹೊತ್ತ ಭಾರತೀಯ ನೌಕಾಪಡೆಯ ಮಾಲ್ಟೀಸ್ ಹಡಗು ಸಾಗುತ್ತಿದ್ದಾಗ ಹಡಗಿನಲ್ಲಿ ಸೇರಿಕೊಂಡಿದ್ದ ಅಪಹರಣಕಾರರು ಹಡಗನ್ನು ಅಪಹರಿಸಲು ಹೊಂಚು ಹಾಕುತ್ತಿದ್ದರು. ತಕ್ಷಣವೇ ಭಾರತೀಯ ನೌಕಾಪಡೆಯ ಸಿಬ್ಬಂದಿ ಪ್ರತಿರೋಧ ವ್ಯಕ್ತಪಡಿಸಿ ಅಪಹರಣವನ್ನು ತಡೆದಿದ್ದಾರೆ. ಅಲ್ಲದೆ ಮಾಲ್ಟೀಸ್ ಹಡಗಿನ ಮೇಲೆ ನಿಗಾ ವಹಿಸಿದ್ದು, ಹೆಚ್ಚಿನ ಭದ್ರತೆ ವಹಿಸಲಾಗಿದೆ.
“ಮಾಲ್ಟೀಸ್ ಹಡಗು 18 ಸಿಬ್ಬಂದಿಯೊಂದಿಗೆ ತೆರಳುತ್ತಿದ್ದಾಗ ಡಿಸೆಂಬರ್ 14 ರಂದು ಇಂಗ್ಲೆಂಡ್ ಮೂಲದ ಯುಕೆಎಂಟಿಒ ನೌಕಾ ಸಂಸ್ಥೆ 6 ಅಪರಿಚಿತರು ಹಡಗಿನಲ್ಲಿರುವ ಬಗ್ಗೆ ಸಂದೇಶ ರವಾನಿಸಿತ್ತು. ಮಾಹಿತಿ ಪಡೆದ ನೌಕಾಪಡೆಯ ಸಿಬ್ಬಂದಿ ಅಪಹರಣ ಯತ್ನವನ್ನು ವಿಫಲಗೊಳಿಸಿದ್ದಾರೆ” ಎಂದು ಭಾರತೀಯ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಟ್ಟು ಅಂಗವೈಕಲ್ಯವಲ್ಲ; ಸ್ಮೃತಿ ಇರಾನಿ ಹೇಳಿಕೆ ಯಾರನ್ನು ಮೆಚ್ಚಿಸಲು?
“ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಪಾಲುದಾರರು ಮತ್ತು ಸ್ನೇಹಪರ ವಿದೇಶಿ ರಾಷ್ಟ್ರಗಳೊಂದಿಗೆ ವ್ಯಾಪಾರಿ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ,” ನೌಕಾಪಡೆ ತಿಳಿಸಿದೆ.
ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಈಗ ಹಡಗು ಸೋಮಾಲಿಯಾದ ಕರಾವಳಿಯತ್ತ ಸಾಗುತ್ತಿದೆ. ಎಂವಿ ರೆಯುನ್ ಎಂಬ ಹಡಗು ಗುರುವಾರ ಮಾಲ್ಟಾ ಮೇಲೆ ದಾಳಿ ನಡೆಸಿತ್ತು, ಸಿಬ್ಬಂದಿ ಹಡಗಿನ ನಿಯಂತ್ರಣ ಕಡೆದುಕೊಂಡಿದ್ದರು ಎಂದು ಯುಕೆ ಮೆರೈನ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.
ಹಿಂದೂ ಮಹಾಸಾಗರದಲ್ಲಿ 2017 ರಿಂದ ಸೊಮಾಲಿ ಕಡಲ್ಗಳ್ಳರು ಹಲವಾರು ದೇಶಗಳ ಹಡಗುಗಳನ್ನು ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ.