ಅತ್ಯಾಚಾರ, ದೌರ್ಜನ್ಯ, ಹಿಂಸೆಗಳ ರಾಜಧಾನಿ ಎಂದೇ ಕುಖ್ಯಾತಿಯಾಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನುಷ ಘಟನೆ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯನ್ನು ಮನೆಯಿಂದ ಅಪಹರಿಸಿ, ಆಕೆಯ ಮೇಲೆ ಆ್ಯಸಿಡ್ ಎರಚಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಬಾಲಕಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
8ನೇ ತರಗತಿಯಲ್ಲಿ ವ್ಯಾಂಸಗ ಮಾಡುತ್ತಿದ್ದ ಬಾಲಕಿಯನ್ನು ಪತ್ರಾ ಗ್ರಾಮದಲ್ಲಿ ಆಕೆಯ ಮನೆಯಿಂದಲೇ ಮಂಗಳವಾರ ಮುಂಜಾನೆ ಆರೋಪಿಗಳು ಅಪಹರಿಸಿದ್ದಾರೆ. ಬಳಿಕ, ಆಕೆಯ ಮೇಲೆ ಹಲ್ಲೆ ನಡೆಸಿ, ಆ್ಯಸಿಡ್ ಎರಚಿದ್ದಾರೆ ಎಂದು ಅಮ್ರೋಹಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಕುಮಾರ್ ಸಿಂಗ್ ಹೇಳಿದ್ದಾರೆ.
ಬಾಲಕಿಯ ಸಹೋದರ ದಾಖಲಿಸಿದ ದೂರಿನ ಮೇಲೆ ರಹ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಬಾಲಕಿಯ ಮೇಲೆ ಆರೋಪಿಗಳಿಗೆ ಯಾವುದೋ ದ್ವೇಷವಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಆರೋಪಿಗಳನ್ನು ಅದೇ ಗ್ರಾಮದ ರಾಂಪಾಲ್ ಮತ್ತು ಆತನ ಸ್ನೇಹಿತ ಎಂದು ಹೆಸರಿಸಲಾಗಿದೆ.