ಹಳ್ಳಿಯೊಂದರ ಗ್ರಾಮಸ್ಥರು ವಿದ್ಯುತ್ ‘ಟ್ರಾನ್ಸ್‌ಫಾರ್ಮರ್’ಗೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ. ಗ್ರಾಮಸ್ಥರು ಟ್ರಾನ್ಸ್‌ಫಾರ್ಮರ್‌ಗೆ ಪೂಜೆ ಸಲ್ಲಿಸುವ ಆಸಕ್ತಿಕರ ಬೆಳವಣಿಗೆಯು ಮಧ್ಯಪ್ರದೇಶದ ಭಿಂಡ್ ಪ್ರದೇಶದ ಗಾಂಧಿ ನಗರದಲ್ಲಿ ರೂಡಿಯಲ್ಲಿದೆ.
ಸುಮಾರು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಟ್ರಾನ್ಸ್‌ಫಾರ್ಮರ್ ಇತ್ತೀಚೆಗೆ ಸುಟ್ಟುಹೋಗಿತ್ತು. ಬಳಿಕ, ಹೊಸ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಅನ್ನು ಅಳವಡಿಸಲಾಗಿದೆ. ಬಳಿಕ, ಟ್ರಾನ್ಸ್‌ಫಾರ್ಮರ್‌ಅನ್ನು ಗ್ರಾಮಸ್ಥರು ದೇವರಂತೆ ಪೂಜಿಸಿದ್ದಾರೆ. ಅದನ್ನು ದೈವೀಕರಿಸಿದ್ದಾರೆ.
ಗಾಂಧಿ ನಗರಕ್ಕೆ 15 ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಬುಡ್ಡಿಯ ದೀಪದ ಬೆಳಕಲ್ಲಿ ಗ್ರಾಮಸ್ಥರು ಸಂಜೆ-ರಾತ್ರಿ ದೂಡುತ್ತಿದ್ದರು. ಆ ಗ್ರಾಮಕ್ಕೆ 15 ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ದೊರೆಯಿತು. ಈ 15 ವರ್ಷಗಳ ಕಾಲ ಒಂದೇ ಟ್ರಾನ್ಸ್‌ಫಾರ್ಮರ್ ಕಾರ್ಯನಿವರ್ಹಿಸಿತ್ತು. ಗ್ರಾಮಕ್ಕೆ ಬೆಳಕು ನೀಡಿತ್ತು.
15 ವರ್ಷಗಳ ಕಾಲ ನಿರಂತರವಾಗಿ ಗ್ರಾಮಕ್ಕೆ ವಿದ್ಯುತ್ ಪೂರೈಸಲು ನೆರವಾದ ಟ್ರಾನ್ಸ್‌ಫಾರ್ಮರ್ ಮೇಲೆ ಗ್ರಾಮಸ್ಥರು ಅಪಾರ ಪ್ರೀತಿ ಹೊಂದಿದ್ದಾರೆ. ಟ್ರಾನ್ಸ್‌ಫಾರ್ಮರ್ ಸುಟ್ಟುಹೋದ ಬಳಿಕ, ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಹೊಸ ಟ್ರಾನ್ಸ್‌ಫಾರ್ಮರ್‌ಗೆ ಆರತಿ ಮಾಡಿ, ಪೂಜೆ ಸಲ್ಲಿಸಿ, ಸಿಹಿತಿಂಡಿ ಹಂಚಿದ್ದಾರೆ. ಅದು ಧೀರ್ಘಕಾಲದವರೆಗೆ ಕಾರ್ಯನಿರ್ವಹಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಹಳೆಯ ಟ್ರಾನ್ಸ್‌ಫಾರ್ಮರ್ ಸುಟ್ಟುಹೋಗಿ ಬಹಳ ದಿನಗಳ ಕಳೆದಿದ್ದವು. ವಿದ್ಯುತ್ ಕಂಪನಿಗೆ ಮಾಹಿತಿ ನೀಡಿದರೂ, ಅವರು ಹೊಸ ಟ್ರಾನ್ಸ್‌ಫಾರ್ಮರ್ ತರಲಿಲ್ಲ. ಗ್ರಾಮಸ್ಥರು ವಿದ್ಯುತ್ ಇಲ್ಲದೆ ಬೇಸಿಗೆಯ ದಿನಗಳಲ್ಲಿ ಕಷ್ಟಪಟ್ಟಿದ್ದಾರೆ. ಶಾಸಕರ ಗಮನಕ್ಕೆ ತಂದ ಬಳಿಕ, ಗ್ರಾಮಕ್ಕೆ ಹೊಸ ಟ್ರಾನ್ಸ್‌ಫಾರ್ಮರ್ ಬಂದಿದೆ ನಮಗೆ ವಿದ್ಯುತ್ ಕಂಪನಿಯ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಗ್ರಾಮದ ಮುಖಂಡರರೊಬ್ಬರು ಹೇಳಿದ್ದಾರೆ.
ವಿದ್ಯುತ್ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ. ಯಾವುದೇ ಟ್ರಾನ್ಸ್‌ಫಾರ್ಮರ್ ಕೆಟ್ಟುಹೋದರೆ, ಅದನ್ನು ಬದಲಾಯಿಸಲು 10 ರಿಂದ 15 ದಿನಗಳು ಬೇಕಾಗುತ್ತದೆ. ಅದಕ್ಕಾಗಿ ಕಚೇರಿಗಳಿಗೆ ಅಲೆದಾಡಬೇಕು. ಆದ್ದರಿಂದ, ಹೊಸ ಟ್ರಾನ್ಸ್‌ಫಾರ್ಮರ್ ಹಲವು ವರ್ಷಗಳ ಕಾಲ ಬಾಳಿಕೆ ಬರುವಂತೆ ಪೂಜೆ ಮಾಡಿದ್ದೇವೆ ಎಂದು ಹೇಳಿದ್ದಾರೆ.