ವಕ್ಫ್ ತಿದ್ದುಪಡಿ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವಕ್ಫ್ ಕಾನೂನುಗಳ ಅನುಷ್ಠಾನದ ಮೇಲೆ ಯಾವುದೇ ತಾತ್ಕಾಲಿಕ ಅಥವಾ ಭಾಗಶಃ ತಡೆಯನ್ನು ವಿರೋಧಿಸುವುದಾಗಿ ತಿಳಿಸಿದೆ.
ಇಂದು ಮಧ್ಯಾಹ್ನ ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಮಾಡಿದ ಅರ್ಜಿಯಲ್ಲಿ, ಸರ್ಕಾರದ ಇಂತಹ ಪ್ರಕರಣಗಳಲ್ಲಿ ಕಾನೂನಿನ ಸ್ಥಿರವಾದ ನಿಲುವು ಏನೆಂದರೆ, ನ್ಯಾಯಾಲಯಗಳಿಗೆ ವಿಧಿವಿಧಾನದ ನಿಬಂಧನೆಗಳನ್ನು, ನೇರವಾಗಿ ಅಥವಾ ಪರೋಕ್ಷವಾಗಿ ತಡೆಯಲು ಅಧಿಕಾರವಿಲ್ಲ ಎಂದು ತಿಳಿಸಿದೆ.
“ಸಂಸತ್ತಿನಿಂದ ರಚಿತವಾದ ಕಾನೂನುಗಳಿಗೆ ಸಾಂವಿಧಾನಿಕತೆಯ ಸಿದ್ಧಾಂತ ಅನ್ವಯಿಸುತ್ತದೆ ಮತ್ತು ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆಯು ಅಧಿಕಾರದ ಸಮತೋಲನದ ತತ್ವಕ್ಕೆ ವಿರುದ್ಧವಾಗಿದೆ” ಎಂದು ನ್ಯಾಯಾಲಯಕ್ಕೆ ಕೇಂದ್ರ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾಷಾ ವೈಷಮ್ಯ ಬಿತ್ತಿದ ಭಂಡರು, ಬಿತ್ತರಿಸಿದ ಬುದ್ಧಿಗೇಡಿಗಳು
ಸುಪ್ರೀಂ ಕೋರ್ಟ್ ವಕ್ಫ್ ಹೊಸ ಕಾನೂನುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಅಲ್ಲದ ಸದಸ್ಯರು ಇರಬೇಕು ಮತ್ತು ಕನಿಷ್ಠ ಐದು ವರ್ಷಗಳಿಂದ ಮುಸ್ಲಿಂ ಧರ್ಮವನ್ನು ಆಚರಿಸುವ ಮುಸ್ಲಿಮರಿಂದ ಮಾತ್ರ ದೇಣಿಗೆ ನೀಡಬಹುದು ಎಂಬ ನಿಯಮಗಳು ಸೇರಿವೆ.
ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳಲ್ಲಿ ಈ ಕಾನೂನುಗಳು ಹಲವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ವಾದಿಸಲಾಗಿದೆ.
