ಇಸ್ರೇಲ್-ಇರಾನ್ ಸಂಘ‍ರ್ಷ | ಅಮೆರಿಕಾ ಕುತಂತ್ರಕ್ಕೆ ಇಸ್ರೇಲ್ ದಾಳ

Date:

Advertisements

ಇರಾನ್‌ ಸೇರಿದಂತೆ ತನ್ನ ನೆರೆಯ ರಾಷ್ಟ್ರಗಳ ಮೇಲೆ ಕಳೆದೊಂದು ವರ್ಷದಲ್ಲಿ ಇಸ್ರೇಲ್ ನಿರಂತರವಾಗಿ ದಾಳಿ ನಡೆಸಿದೆ. 50 ಸಾವಿರಕ್ಕೂ ಹೆಚ್ಚು ಜನರನ್ನ ಕೊಂದಿದೆ. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್‌ ಮೇಲೆ ಇರಾನ್ ಮಂಗಳವಾರ ರಾತ್ರಿ ತನ್ನ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಮಾಡಿದೆ. ತನ್ನ ನೂರಾರು ಕ್ಷಿಪಣಿಗಳನ್ನು ಇಸ್ರೇಲ್ ಕಡೆಗೆ ಉಡಾಯಿಸಿದೆ. ಏಪ್ರೀಲ್‌ನಲ್ಲಿ ಇಸ್ರೇಲ್ ಮೇಲೆ ತನ್ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದ ನಂತರ, ಇದು ಈ ವರ್ಷದಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ದಾಳಿ. ಈ ದಾಳಿ ಇಸ್ರೇಲ್‌ನ ಕ್ರೌರ್ಯದ ವಿರುದ್ಧದ ಪ್ರತೀಕಾರದ ದಾಳಿ ಎಂಬುದು ಸ್ಪಷ್ಟವಾಗಿದೆ. ಇದನ್ನೇ ಇರಾನ್ ಕೂಡ ಹೇಳಿಕೊಂಡಿದೆ.

ಇಸ್ರೇಲ್ ಮೇಲೆ ಇರಾನ್ ತನ್ನ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಮಾಡಿದ ನಂತರ ಇಸ್ರೇಲ್‌ನಾದ್ಯಂತ ನಗರಗಳಲ್ಲಿ ದೊಡ್ಡ ಪ್ರಮಾಣದ ಎಚ್ಚರಿಕೆಯ ಸೈರನ್ ಬಡಿಯಲಾರಂಭಿಸಿದೆ. ದಾಳಿ ಹಿನ್ನೆಲೆ, ಇಸ್ರೇಲ್ ನಾಗರಿಕರು ಮನೆಗಳನ್ನ ತೊರೆದು ಬಾಂಬ್ ಶೆಲ್ಟ್‌ರ್‌ಗಳಲ್ಲಿ ಇರುವಂತೆ ಅಲ್ಲಿನ ಸರ್ಕಾರ ಜನರಿಗೆ ಸೂಚನೆ ನೀಡಿದೆ.

“ಇನ್ನು ಇರಾನ್ ನಡೆಸುತ್ತಿದ್ದ ದಾಳಿಗಳು ಮುಗಿದಂತೆ ಕಾಣುತ್ತಿದೆ. ಇರಾನ್‌ನಿಂದ ಇಸ್ರೇಲ್‌ಗೆ ಸದ್ಯಕ್ಕೆ ಯಾವುದೇ ಬೆದರಿಕೆ ಇಲ್ಲ. ಆದರೆ, ಈಗ ನಡೆದ ದಾಳಿಯಿಂದ ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ” ಎಂದು ಇಸ್ರೇಲ್‌ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ದಾಳಿಯ ನಂತರದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Advertisements

ಇಸ್ರೇಲ್ ಕಡೆಗೆ ಇರಾನ್ ಸುಮಾರು 180 ಕ್ಷಿಪಣಿಗಳನ್ನ ಉಡಾಯಿಸಿದೆ. ಅದರಲ್ಲಿ, ಸುಮಾರು 110 ಬ್ಯಾಲಿಸ್ಟಿಕ್ ಮಿಸೈಲ್ ಮತ್ತು 30 ಕ್ರೂಸ್ ಮಿಸೈಲ್‌ಗಳು ಸೇರಿವೆ. ಇರಾನ್ ಇಸ್ರೇಲ್ ಮೇಲೆ ಏಪ್ರೀಲ್‌ನಲ್ಲಿ ನಡೆಸಿದ ದಾಳಿಗಿಂತ ಈ ಬಾರಿ ನಡೆದ ದಾಳಿ ಸ್ವಲ್ಪ ದೊಡ್ಡದಾಗಿದೆ. ಇರಾನ್ ಹಾರಿಸಿದ ಹೆಚ್ಚಿನ ಕ್ಷಿಪಣಿಗಳನ್ನ ಇಸ್ರೇಲ್ ವೈಮಾನಿಕ ರಕ್ಷಣಾ ವ್ಯವಸ್ಥೆಗಳಿಂದ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾನ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಮೊದಲ ಬಾರಿಗೆ ಬಳಸಿದೆ. ಮೂರು ಇಸ್ರೇಲ್‌ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ನಾವು ನಡೆಸಿದ ಪ್ರತಿಕಾರದ ದಾಳಿಯಲ್ಲಿ 90%ರಷ್ಟು ಸ್ಪೋಟಕಗಳು ನಮ್ಮ ಗುರಿಯನ್ನ ಮುಟ್ಟಿ ಹೊಡೆದಿವೆ ಎಂದು ಇರಾನ್‌ನ ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್ ಕಾರ್ಪಸ್ (IRGC) ಹೇಳಿದೆ.

ಇಸ್ರೇಲ್‌ ಕ್ರೌರ್ಯ – ಇರಾನ್ ಪ್ರತೀಕಾರ

ಇಸ್ರೇಲ್ ಈಗಾಗಲೇ ಗಾಜಾ, ಲೆಬನಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ಮೇಲೆ ದಾಳಿ ಮಾಡಿದೆ. ಸಾವಿರಾರು ಜನರನ್ನು ಕೊಂದಿದೆ. ಇಸ್ರೇಲ್ ವಿರುದ್ಧ ಈ ಎಲ್ಲ ರಾಷ್ಟ್ರಗಳು ಹೋರಾಡುತ್ತಿವೆ. ಇಸ್ರೇಲ್‌ನ ಕ್ರೌರ್ಯಕ್ಕೆ ಕಳೆದೊಂದು ವರ್ಷದಲ್ಲಿ ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅದರಲ್ಲಿ, ಗಾಜಾ ಪಟ್ಟಿಯಲ್ಲಿಯೇ 40 ಸಾವಿರಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿಯರು ಜೀವ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಜೀವನ ಬೀದಿಪಾಲಾಗಿದೆ. ಅವರೆಲ್ಲರೂ ನಿರ್ಗತಿಕರಾಗಿದ್ದಾರೆ.

ಇಸ್ರೇಲ್ ತನ್ನ ಕ್ರೌರ್ಯವನ್ನು ಇಂದಿಗೂ ಮುಂದುವರೆಸಿದೆ. ಇದೆಲ್ಲವನ್ನೂ ಇರಾನ್ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಾಗಲೂ ಇರಾನ್ ಮೌನವಾಗಿತ್ತು. ಆದರೆ, ಕಳೆದ ತಿಂಗಳು, ಅಂದರೆ, ಸೆಪ್ಟೆಂಬರ್ 27ರಂದು ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಇರಾನ್ ಸೇನೆ IRGC ಕಮಾಂಡರ್ ಅಬ್ಬಾಸ್ ನಿಲ್ಫೊರೊಶನ್ ಸೇರಿದಂತೆ ಕೆಲ ಅಧಿಕಾರಗಳನ್ನು ಇಸ್ರೇಲ್ ಕೊಂದು ಹಾಕಿದೆ. ಇಸ್ರೆಲ್‌ನ ಈ ದಾಳಿಯಿಂದ ಇರಾನ್ ಸಿಡಿದೆದ್ದಿದೆ. ಸೆಯ್ಯದ್ ಹಸನ್ ನಸ್ರಲ್ಲಾಹ್ ಮತ್ತು ಇರಾನ್ ಮಿಲಿಟರಿ ಅಧಿಕಾರಿಗಳ ಹತ್ಯೆಗೆ ಪ್ರತಿಕಾರವಾಗಿ ಇರಾನ್ ಮಂಗಳವಾರ ದಾಳಿ ನೆಡೆಸಿದೆ.

ತಮ್ಮ ಪ್ರತೀಕಾರವು ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು IRGC ಕಮಾಂಡರ್ ಅಬ್ಬಾಸ್ ನಿಲ್ಫೊರೊಶನ್ ಅವರ ಹತ್ಯೆಯ ಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಗೂ ಇದು ಪ್ರತೀಕಾರವಾಗಿದೆ ಎಂದು ಇರಾನ್ ಹೇಳಿಕೊಂಡಿದೆ.

ಹನಿಯೆಹ್ ಸಾವಿನ ಹಿಂದೆ ತನ್ನ ಕೈವಾಡ ಇರುವುದನ್ನು ಇಸ್ರೇಲ್ ಒಪ್ಪಿಕೊಳ್ಳದಿದ್ದರೂ, ಅವರ ಸಾವಿಗೆ ಇಸ್ರೇಲೇ ಹೊಣೆಗಾರನೆಂದು ಹೇಳಲಾಗಿದೆ. ಇಸ್ರೇಲ್‌ನ ಕ್ರೌರ್ಯದ ವಿರುದ್ಧ ಸಿಡಿದಿರುವ ಇರಾನ್, ಇಸ್ರೇಲ್‌ನ ಅಸ್ತಿತ್ವದ ಹಕ್ಕನ್ನು ಗುರುತಿಸುವುದಿಲ್ಲ. ಬದಲಾಗಿ ಅದರ ನರ್ಮೂಲನೆಯನ್ನು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ.ಅಮೆರಿಕಾ

ಆದಾಗ್ಯೂ, ಇಸ್ರೇಲ್ ತನ್ನದೇ ಆದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಅದರಲ್ಲಿ ಐರನ್ ಡೋಮ್ ಅತ್ಯಂತ ಬಲಿಷ್ಟ ವ್ಯವಸ್ಥೆಯಾಗಿದೆ. ಹಮಾಸ್ ಮತ್ತು ಹೆಜ್ಬುಲ್ಲಾ ಉಡಾಯಿಸಿದ ರೀತಿಯ ಅಲ್ಪ-ಶ್ರೇಣಿಯ ರಾಕೆಟ್‌ಗಳನ್ನು ಪ್ರತಿಬಂಧಿಸಲು ಐರನ್ ಡೋಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ ಇರಾನ್ ನಡೆಸಿದ ದಾಳಿಯಿಂದ ಇಸ್ರೇಲ್ ಅನ್ನು ರಕ್ಷಿಸಲು ಕೂಡ ಇದೇ ವ್ಯವಸ್ಥೆಯನ್ನೇ ಬಳಸಲಾಗಿತ್ತು. ಅದೇ ರೀತಿ ಡೇವಿಡ್ಸ್ ಸ್ಲಿಂಗ್ ಎಂಬ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಸಿದ್ದಪಡಿಸಿವೆ. ಇದು, ಮಧ್ಯಮದಿಂದ ದೀರ್ಘ-ಶ್ರೇಣಿಯ ರಾಕೆಟ್‌ಗಳನ್ನು, ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಪ್ರತಿಬಂಧಿಸಲು ಬಳಸಲಾಗುತ್ತದೆ. ಆದರೂ, ಮಂಗಳವಾರದ ದಾಳಿಯಲ್ಲಿ ಇಸ್ರೇಲ್ ಅನ್ನು ರಕ್ಷಿಸುವಲ್ಲಿ ಈ ವ್ಯವಸ್ಥೆಗಳು ಸಫಲವಾಗಿಲ್ಲ.

ಇಸ್ರೇಲ್‌ ಬೆನ್ನಿಗೆ ನಿಂತಿರುವ ಅಮೆರಿಕಾ-ಇಂಗ್ಲೆಂಡ್

ಇನ್ನು ಇಸ್ರೇಲ್ ಮೇಲೆ ಇರಾನ್ ಪ್ರತಿದಾಳಿ ನಡೆಸಿದ ನಂತರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಪರವಾಗಿ ತಾವು ನಿಲ್ಲುವುದನ್ನು ಪುನರುಚ್ಚರಿಸಿದ್ದಾರೆ. ಇಸ್ರೇಲ್ ರಕ್ಷಣೆಗೆ ಸಹಾಯ ಮಾಡುವುದಾಗಿಯೂ ಹಾಗೂ ಇರಾನ್ ಕ್ಷಿಪಣಿಗಳನ್ನ ಹೊಡೆದುರುಳಿಸಲು ತನ್ನ ಪಡೆಗಳಿಗೆ ಆದೇಶ ನೀಡಿದ್ದಾರೆ. ಮಾತ್ರವಲ್ಲದೆ, ತನ್ನ ನೌಕಾಪಡೆಗಳನ್ನೂ ಇಸ್ರೇಲ್ ನೆರವಿಗೆ ಕಳಿಸಿದ್ದಾರೆ.

ಯುಕೆ ಪ್ರಧಾನ ಮಂತ್ರಿ ಸರ್ ಕೀರ್ ಸ್ಟಾರ್ಮರ್, “ಯುಕೆ ಇಸ್ರೇಲ್ ಜೊತೆ ನಿಂತಿದೆ. ಇಸ್ರೇಲ್ ತನ್ನ ಆತ್ಮ ರಕ್ಷಣೆಯ ಹಕ್ಕನ್ನು ಗುರುತಿಸಿದೆ” ಎಂದು ಹೇಳಿದ್ದಾರೆ. ಫ್ರಾನ್ಸ್ ಮತ್ತು ಜಪಾನ್ ಕೂಡ ಇಸ್ರೆಲ್ ಪರವಾದ ಅಮೆರಿಕಾ-ಇಂಗ್ಲೆಂಡ್‌ಗಳಿಗೆ ಕೋರಸ್ ಕೊಡುತ್ತಿವೆ.

ಇನ್ನು ದಾಳಿಯ ಬಗ್ಗೆ ಮಾತನಾಡಿರುವ ಇರಾನ್ ಸೇನೆಯ ಮುಖ್ಯಸ್ಥ, “ಇಸ್ಮಾಯಿಲ್ ಹನಿಯೆಹ ಹುತಾತ್ಮತೆ, ಸೆಯ್ಯದ್ ಹಸನ್ ನಸ್ರಲ್ಲಾಹ್ ಹಾಗೂ ಹುತಾತ್ಮ ನೀಲ್ಫೊರೊಶನ್ ಅವರ ಹತ್ಯೆಯ ಪ್ರತಿಕಾರವಾಗಿ ಇಸ್ರೇಲ್‌ನ ಪ್ರದೇಶಗಳ ಮೇಲೆ ಪ್ರತಿದಾಳಿ ಮಾಡಿದ್ದೇವೆ. ಝೊಯೋನಿಸ್ಟ್ ಆಡಳಿತವು ನಮ್ಮ ದಾಳಿಗೆ ಪ್ರತಿಕ್ರಿಯಿಸಿದರೆ, ನಮ್ಮ ಮುಂದಿನ ದಾಳಿಗಳು ಇನ್ನಷ್ಟು ವಿನಾಶಕಾರಿಯಾಗಿರುತ್ತವೆ” ಎಂದು ಹೇಳಿದ್ದಾರೆ.

ಗಮನಾರ್ಹವಾಗಿ, ಇಸ್ರೇಲ್‌ನ ಕ್ರೌರ್ಯ, ದಾಳಿ, ದೌರ್ಜನ್ಯಗಳಿಗೆ ಅಮೆರಿಕ ಕುಮ್ಮಕ್ಕು ನೀಡುತ್ತಿದೆ. ಅಮೆರಿಕ ತನ್ನ ಮೂರು ಯುದ್ಧ ನೌಕೆಗಳನ್ನು ಇಸ್ರೇಲ್ ರಕ್ಷಣೆಗಾಗಿ ಮೆಡಿಟರೇನಿಯನ್ ಸಮುದ್ರಕ್ಕೆ ಕಳಿಸುತ್ತಿದೆ. ಪರಿಣಾಮ, ಮಧ್ಯ ಪ್ರಾಚ್ಯ ಏಷ್ಯಾ ಮೇಲೆ ಭಯಾನಕ ಯುದ್ಧದ ಕಾರ್ಮೋಡಗಳು ಕವಿಯುತ್ತಿದೆ. ಮಧ್ಯ ಪ್ರಾಚ್ಯದಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳೂ ಇವೆ.

ಅಮೆರಿಕಾ ಕುತಂತ್ರಕ್ಕೆ ದಾಳವಾಗಿರುವ ಇಸ್ರೇಲ್‌

ಮುಖ್ಯವಿಚಾರವೆಂದರೆ, ಇಸ್ರೇಲ್ ಎಂಬುದು ಅಮೆರಿಕಾ ಮತ್ತು ಇಂಗ್ಲೆಂಡ್ ಹುಟ್ಟು ಹಾಕಿದ ಕೂಸು. ಅಮೆರಿಕದ ಅಣತಿಯಂತೆಯೇ ಇಸ್ರೇಲ್ ನಡೆದುಕೊಳ್ಳುತ್ತಿದೆ. ಇನ್ನೂ ಹೇಳಬೇಕೆಂದರೆ, ಇಸ್ರೇಲ್ ಅಮೆರಿಕದ ಸಾಕು ನಾಯಿ. ಅಮೆರಿಕ ಬೊಗಳು ಎಂದರೆ ಇಸ್ರೇಲ್ ಬೊಗಳುತ್ತದೆ. ಕಚ್ಚು ಎಂದರೆ, ಕಚ್ಚುತ್ತದೆ. ಇಸ್ರೇಲ್ ಅನ್ನು ಬಳಸಿಕೊಂಡು ಮಧ್ಯ ಪ್ರಾಚ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅಮೆರಿಕ ಹವಣಿಸುತ್ತಿದೆ.

ಎರಡನೆ ಮಹಾಯುದ್ಧ ಘಟಿಸುವವರೆಗೆ ಇಸ್ರೇಲ್ ಎಂಬ ರಾಷ್ಟ್ರವೇ ಇರಲಿಲ್ಲ. ಎರಡನೇ ವಿಶ್ವಯುದ್ಧದ ನಂತರ ಯಹೂದಿಗಳು ಸಾವಿರಾರು ವರ್ಷ ನಾವು ಅಲೆದಾಡಿದ್ದೇವೆ. ನಮಗೆ ಎಲ್ಲಿಯೂ ಶಾಂತಿಯಿಲ್ಲ. ನಮಗೊಂದು ಹೋಮ್ ಲ್ಯಾಂಡ್ – ಮಾತೃ ಭೂಮಿ – ಎನ್ನುವುದು ಇಲ್ಲ. ನಮಗೆ ನೆಲೆ ಬೇಕು. ನಮ್ಮ ಧರ್ಮ ಗ್ರಂಥಗಳ ಪ್ರಕಾರ ಐತಿಹಾಸಿಕವಾಗಿ ನಾವು ನೆಲೆಸಿದ್ದ ಪ್ರದೇಶ ಇಸ್ರೇಲ್ ಎಂದು ಯಹೂದಿಗಳು ಪ್ರತಿಪಾದಿಸಿದ್ದರು. ಆಗ ಆ ಪ್ರದೇಶ ಇಸ್ರೇಲ್ ಆಗಿರಲಿಲ್ಲ. ಪ್ಯಾಲೆಸ್ತೀನ್ ಆಗಿತ್ತು. ಪ್ಯಾಲೆಸ್ತೀನ್‌ನಲ್ಲಿ ಭಾರತದಂತೆಯೇ ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದರು. ಹೀಗಾಗಿ, ಪ್ಯಾಲೆಸ್ತೀನ್ ದೇಶದ ದಕ್ಷಿಣ ಭಾಗದಲ್ಲಿ ಹೋಗಿ ನೆಲೆಸಿರಿ ಎಂದು ಬ್ರಿಟಿಷ್ ಸರ್ಕಾರ ಹೇಳಿತು. ಆ ಪ್ರದೇಶವನ್ನು ಇಸ್ರೇಲ್ ರಾಷ್ಟ್ರವೆಂದು ವಿಶ್ವಸಂಸ್ಥೆಯ ಮುಂದೆ ಪ್ರಸ್ತಾಪಿಸಿ, ಅಮೆರಿಕಾ-ಇಂಗ್ಲೆಂಡ್ ಸೇರಿಕೊಂಡು ಇಸ್ರೇಲ್ ರಾಷ್ಟ್ರವನ್ನು ಹುಟ್ಟುಹಾಕಿದವು.

ಈ ಸುದ್ದಿ ಓದಿದ್ದೀರಾ? ಯಾರು ಈ ಜಗ್ಗಿ ವಾಸುದೇವ್? ಈತ ನಿಜಕ್ಕೂ ಸದ್ಗುರುನಾ?

ಆ ನಂತರ, ಬ್ರಿಟಿಷರು ಪ್ಯಾಲೆಸ್ತೀನ್ ತೊರೆದರು. ಆದರೆ, ತಮ್ಮ ದೇಶ ಬಿಟ್ಟು ಹೋದ ಬ್ರಿಟಿಷರು ಎಷ್ಟು ಭಾಗ ಪ್ಯಾಲೆಸ್ತೀನ್ – ಎಷ್ಟು ಭಾಗ ಇಸ್ರೇಲ್ ಎಂಬುದನ್ನು ಗುರಿತಿಸಲಿಲ್ಲ. ಸಮಸ್ಯೆಯನ್ನು ಬಗೆಹರಿಸಲಿಲ್ಲ. ಅದರ ಪರಿಣಾಮವಾಗಿ, ಇಸ್ರೇಲ್ ದಿನಗಳೆದಂತೆ ಪ್ಯಾಲೆಸ್ತೀನ್ ಅನ್ನು ಅತಿಕ್ರಮಿಸಿಕೊಳ್ಳಲು ತೊಡಗಿತು. ಅಮೆರಿಕಾ-ಇಂಗ್ಲೆಂಡ್‌ಗಳ ರಾಜಕೀಯಕ್ಕೆ ಪ್ಯಾಲೆಸ್ತೀನ್ ಬಲಿಯಾಯಿತು. ಪ್ಯಾಲೆಸ್ತೀನ್ – ಇಸ್ರೇಲ್ ನಡುವಿನ ಜಗಳ ಜೀವಂತ ಆಗಿರುವಂತೆ ಅಮೆರಿಕಾ ನೋಡಿಕೊಂಡಿತು. ಇದರಿಂದ ತಮ್ಮ ಶಸ್ತ್ರಾಸ್ತ್ರ ಸಂತೆಗೆ ಹೆಚ್ಚು ಲಾಭವೆಂಬುದು ಅಮೆರಿಕದ ತಂತ್ರ.

ಪ್ರಸ್ತುತದಲ್ಲಿ, ಅಮೆರಿಕ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ತನ್ನ ಆರ್ಥಿಕ ಚೇತರಿಕೆ ಆಗಬೇಕೆಂದರೆ ದೊಡ್ಡ ಪ್ರಮಾಣದ ಯುದ್ಧ ಆಗಬೇಕು. ಆ ಮೂಲಕ ತನ್ನಲ್ಲಿರುವ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬೇಕು. ಜೊತೆಗೆ, ತೈಲ ಅಭಾವ ಉಂಟಾಗಿ ತೈಲ ಬೇಡಿಕೆ ಹೆಚ್ಚಾಗಬೇಕು. ಡಾಲರ್ ಬೆಲೆ ಮುಗಿಲು ಮುಟ್ಟಬೇಕು. ಅದಕ್ಕಾಗಿಯೇ, ಇಸ್ರೇಲ್ ಅನ್ನು ತನ್ನ ಸುತ್ತಲಿನ ರಾಷ್ಟ್ರಗಳ ಮೇಲೆ ಅಮೆರಿಕ ಛೂಬಿಡುತ್ತಿದೆ. ಪರಿಣಾಮವಾಗಿ ಮಧ್ಯ ಪ್ರಾಚ್ಯ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Hamas terrorists made Palestinians lives a hell by declaring war on Isreal on October 7 before that Palestinians lived peacefully and happily in their apartment complexes. Only a few thousands Hamas, hijbullas houthis terrorists using children women journalists health workers refugees as human shield and risk their lives. If they surrender peace will prevail in west asia.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X