ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್ ಅಬ್ಲುಲ್ಲಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಭಿನಂದನೆ ಸಲ್ಲಿಸಿದ್ದು, “ಜಮ್ಮು ಮತ್ತು ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ” ಎಂದಿದ್ದಾರೆ.
ಒಮರ್ ಅಬ್ದುಲ್ಲಾ ಅವರಿಗೆ ಶುಭಾಷಯ ತಿಳಿಸಿ ‘ಎಕ್ಸ್‘ನಲ್ಲಿ ದೇವೇಗೌಡ ಪೋಸ್ಟ್ ಮಾಡಿದ್ದಾರೆ. ‘”‘ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಒಮರ್ ಅಬ್ದುಲ್ಲಾ ಅವರಿಗೆ ಅಭಿನಂದನೆಗಳು. ಅವರು ಈ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿ ತರುತ್ತಾರೆಂದು ನಂಬಿದ್ದೇನೆ” ಎಂದಿದ್ದಾರೆ.
“ಒಮರ್ ಅಬ್ದುಲ್ಲಾ ಅವರ ತಂದೆ ಫಾರೂಕ್ ಅಬ್ದುಲ್ಲಾ ಅವರು ನನ್ನ ಆಪ್ತ ಸ್ನೇಹಿತರು. ಅವರಿಗೂ ಅಭಿನಂದನೆಗಳು. ಜಮ್ಮು-ಕಾಶ್ಮೀರಕ್ಕೆ ದೇವರು ಆಶೀರ್ವದಿಸಲಿ. ಜಮ್ಮು-ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವಿದೆ” ಎಂದು ಪೋಸ್ಟ್ ಮಾಡಿದ್ದಾರೆ.