10 ವರ್ಷಗಳ ಬಳಿಕ ನಡೆದಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಡಿಎನ್ ಪೋರಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎನ್‌ಸಿ ನಾಯಕಿ ಸಕೀನಾ ಮಸೂದ್ ಗೆಲುವು ಸಾಧಿಸಿದ್ದಾರೆ. ತಮ್ಮ ಎದುರಾಳಿ, ಪಿಡಿಪಿ ಅಭ್ಯರ್ಥಿ ಗುಲ್ಜಾರ್ ದಾರ್ ಅವರನ್ನು 17,000 ಮತಗಳಿಂದ ಸೋಲಿಸಿದ್ದಾರೆ.
ಇನ್ನು, ಎನ್‌ಸಿ ನಾಯಕ ತನ್ವಿರ್ ಸಾದಿಕ್ ಅವರು ಝಾಡಿಬಲ್ ವಿಧಾನಸಭಾ ಕ್ಷೇತ್ರದಿಂದ ಗಿದ್ದಿದ್ದಾರೆ. “ನನಗೆ ಜನಾದೇಶ ನೀಡಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ವಿಧಾನಸಭೆಯಲ್ಲಿ ಜನರಿಗಾಗಿ ಧ್ವನಿ ಎತ್ತುತ್ತೇನೆ” ಎಂದಿದ್ದಾರೆ.
ಎನ್‌ಸಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದಾರೆ. ಗಂದೇರ್‌ಬಾಲ್ ಮತ್ತು ಬಡ್ಗಾಂನ ವಿಧಾನಸಭಾ ಕ್ಷೇತ್ರಗಳಲ್ಲಿ ಒಮರ್ ಅಬ್ಲುಲ್ಲಾ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲೂ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಅಲ್ಲದೆ, ಅಬ್ದುಲ್ಲಾ ಅವರು ಸರ್ಕಾರ ರಚಿಸುವ ವಿಶ್ವಾಸ ಮತ್ತು ಸಂಸತ ವ್ಯಕ್ತಪಡಿಸಿದ್ದಾರೆ.