ಉದ್ಯಮಿಗಳಾದ ಅಂಬಾನಿ ಹಾಗೂ ಮರ್ಚೆಂಟ್ ಕುಟುಂಬಗಳ ತಮ್ಮ ಮಕ್ಕಳ ಮದುವೆಗೆ ಆಗಮಿಸುವ ವಿಶ್ವದ ಶ್ರೀಮಂತರು ಹಾಗೂ ಗಣ್ಯರನ್ನು ಸ್ವಾಗತಿಸಲು ಸಲುವಾಗಿ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣವನ್ನು 10 ದಿನಗಳ ಕಾಲ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಿರುವುದಾಗಿ ಘೋಷಿಸಲಾಗಿದೆ.
ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ವಿರೆನ್ ಹಾಗೂ ಶಾಲಿನಿ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ಮಾರ್ಚ್ 1ರಿಂದ ಆರಂಭವಾಗಿದ್ದು, ಪ್ರೀ ವೆಡ್ಡಿಂಗ್ ಶೂಟ್ ನಡೆಯುತ್ತಿದೆ.
ಈ ಮದುವೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಪ್ರಖ್ಯಾತ ವ್ಯಕ್ತಿಗಳಾದ ಬಿಲ್ ಗೇಟ್ಸ್, ಮಾರ್ಕ್ ಜುಕೇರ್ ಬರ್ಗ್, ರಿಹಾನಾ, ಇವಾಂಕಾ ಟ್ರಂಪ್ ಹಾಗೂ ಹಲವು ಮಾಜಿ ಪ್ರಧಾನಿ ಮಂತ್ರಿಗಳು ಕಳೆದ ಮೂರು ದಿನಗಳಿಂದ ಆಗಮಿಸುತ್ತಿದ್ದಾರೆ.
ಫೆ.25 ರಿಂದ ಮಾ.5ರ ವರೆಗೆ ಜಾಮ್ ನಗರ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನಗಳಿಂದ ಪ್ರಖ್ಯಾತರನ್ನು ಸ್ವಾಗತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ, ಹಣಕಾಸು ಹಾಗೂ ಗೃಹ ವ್ಯವಹಾರಗಳ ಸಚಿವಾಲಗಳು ಕಸ್ಟಮ್, ಇಮಿಗ್ರೇಷನ್ ಹಾಗೂ ಕ್ವಾರಂಟೇನ್ ಸೌಲಭ್ಯಗಳನ್ನು ವಿಮಾನದಲ್ಲಿ ಒದಗಿಸಲು ಒತ್ತಾಯಿಸಿದೆ.
ಜಾಮ್‌ನಗರ ವಿಮಾನ ನಿಲ್ದಾಣ ರಕ್ಷಣಾ ವಿಮಾನ ನಿಲ್ದಾಣವಾಗಿದ್ದು, ಈ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳು ಈಗಾಗಲೇ ಆಗಮಿಸುತ್ತಿವೆ. ಗಣ್ಯರ ಸಲುವಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಿದೆ. ಆದಾಗ್ಯೂ, ಶತಕೋಟ್ಯಾದೀಶ ಮುಖೇಶ್ ಅಂಬಾನಿ ಕಿರಿಯ ಪುತ್ರನ ವಿಶೇಷ ಸಂಭ್ರಮಕ್ಕಾಗಿ ಭಾರತೀಯ ವಾಯುಪಡೆ ತನ್ನ ಸೂಕ್ಷ್ಮ ಪ್ರದೇಶಕ್ಕೂ ಪ್ರವೇಶವನ್ನು ಅನುಮತಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ
“ನೀಡಿರುವ ನಿರ್ದಿಷ್ಟ ಸಮಯದಲ್ಲಿ ತಾಂತ್ರಿಕ ಪ್ರದೇಶದಲ್ಲಿ ಮೂರು ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ನಿಲ್ದಾಣದ ನಾಗರಿಕ ಪ್ರದೇಶದಲ್ಲಿ ಫಾಲ್ಕನ್ 200ನಂಥ ಆರು ಸಣ್ಣ ವಿಮಾನಗಳು ಅಥವಾ ಏರ್‌ಬಸ್ ಎ320ಗಳಂಥ ಮೂರು ದೊಡ್ಡ ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಶುಕ್ರವಾರದಂದು ಒಮ್ಮೆ ಆರು ವಿಮಾನಗಳಂತೆ ಆಗಮನ ನಿರ್ಗಮನ ಸೇರಿ 140 ವಿಮಾನ ನಿಲ್ಧಾಣಗಳು ಆಗಮಿಸಿವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರದಂದು ಈ ವಿಮಾನ ನಿಲ್ದಾಣದಲ್ಲಿ ಕತಾರ್ ಪ್ರಧಾನಿ ಶೇಖ್ ಮೊಹಮದ್ ಬಿನ್ ಅಬ್ದುಲ್ ರೆಹಮಾನ್,ಸೌದಿಯ ಉದ್ಯಮಿ ಯಾಸಿರ್ ಅಲ್ ರುಮಯನ್, ಡಿಸ್ನಿ ಸಿಇಒ ಬಾಬ್‌ಇಗರ್, ಅಮೆರಿಕದ ಬಿಲೇನಿಯರ್ ಬ್ಲಾಕ್‌ರಾಕ್ ಲಾರಿ ಫಿಂಕ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಆಗಮಿಸಿದ್ದರು. ಇವರ ಜೊತೆ ಭೂತಾನ್ ರಾಜ ಜಿಗ್ಮೆ ಕೇಸರ್, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರೂಡ್ ಹಾಗೂ ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಕೂಡ ಸಡಗರದಲ್ಲಿ ಪಾಲ್ಗೊಂಡಿದ್ದರು.
ಭಾರತೀಯ ಸೆಲಬ್ರಿಟಿಗಳಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾರೂಖ್ ಖಾನ್, ಎಂ ಎಸ್ ಧೋನಿ, ಸೈನಾ ನೆಹ್ವಾಲ್ ಒಳಗೊಂಡು ಹಲವರು ಆಗಮಿಸಿದ್ದರು.
ಗರಿಷ್ಠ ಸಮಯದಲ್ಲಿ ಸುಮಾರು 360 ಪ್ರಯಾಣಿಕರು ಆಗಮಿಸುವುದರಿಂದ ಹಲವು ಪ್ರಖ್ಯಾತ ಗಣ್ಯರು ಆಗಮಿಸುತ್ತಿರುವುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ಕಟ್ಟಡವನ್ನು 475 ಚದುರ ಕಿ.ಮೀನಿಂದ 900 ಚ.ಕಿಮೀ ವರೆಗೆ ವಿಸ್ತರಿಸಲಾಗಿದೆ.
ವಿಸ್ತರಣ ಕಾರ್ಯಗಳನ್ನು ಮೊದಲೇ ಯೋಜಿಸಲಾಗಿತ್ತು ಆದರೆ ಕಾರ್ಯಕ್ರಮಕ್ಕಾಗಿ ತ್ವರಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾನವ ಸಿಬ್ಬಂದಿಯನ್ನು ಕೂಡ ಹೆಚ್ಚುಗೊಳಿಸಿದ್ದಾರೆ. 16 ಸಂಖ್ಯೆಯಿದ್ದ ಹಾಲಿ ಹೌಸ್‌ಕೀಪಿಂಗ್ ಅಂಖ್ಯೆಯನ್ನು 35ರಿಂದ 70ಕ್ಕೆ ನಿಯೋಜಿಸಲಾಗಿದೆ. ಗ್ರೌಂಡ್ ನಿರ್ವಹಣೆ ಸಂಸ್ಥೆಗಳು ತಮ್ಮ ಸಿಬ್ಬಂದಿಯ ಸಂಖ್ಯೆಯನ್ನು 65ರಿಂದ 125ಕ್ಕೆ ಏರಿಸಿವೆ.
ಇದೇ ರೀತಿ ಭಾರತೀಯ ವಾಯುಪಡೆ ವಾಯು ಸಂಚಾರ ನಿಯಂತ್ರಣ ಟವರ್‌ನಲ್ಲಿ ಸೇನಾ ಸಿಬ್ಬಂದಿಯನ್ನು ಹೆಚ್ಚುಗೊಳಿಸಿದೆ. ವಿಮಾನ ನಿಲ್ದಾಣದಲ್ಲಿನ ಶೌಚಾಲಯಗಳನ್ನು ಬಣ್ಣ ಹಚ್ಚುವುದನ್ನು ಒಳಗೊಂಡು ನವೀಕರಿಸಲಾಗಿದೆ.
ಇವೆಲ್ಲವನ್ನು ಹೊರತುಪಡಿಸಿ ವಿದೇಶಗಳಿಂದ ಖಾಸಗಿ ಜೆಟ್‌ಗಳಲ್ಲಿ ಹಲವು ಗಣ್ಯರು ಆಗಮಿಸಲಿದ್ದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಮೂರು 180 ಆಸನಗಳ ಬೋಯಿಂಗ್ 737 ವಿಮಾನಗಳ ಒಟ್ಟು 18 ಹಾರಾಟ ನಡೆಸಲಿದೆ, ಬೆಂಗಳೂರು ಮೂಲದ ಸ್ಟಾರ್ ಏರ್ ತನ್ನ 76 ಆಸನಗಳ ಎಂಬ್ರೇರ್ ಇ175 ವಿಮಾನಗಳನ್ನೂ ಬಳಸಲಿದೆ.
ಅಂತಾರಾಷ್ಟ್ರೀಯ ಖಾದ್ಯಗಳನ್ನು ತರಿಸಲು ಸ್ಪೈಸ್ ಜೆಟ್ ಫೆಬ್ರವರಿ 26ರಂದು ಕಾರ್ಗೊ ವಿಮಾನ ಹಾರಾಟ ನಡೆಸಿದೆ. ಶುಕ್ರವಾರದ ನಂತರ ಮುಂದಿನ ನಾಲ್ಕು ದಿನಗಳ ಕಾಲ ವಿಮಾನ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರನ್ನು ನಿರೀಕ್ಷಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾನ್ಯ ವಾಣಿಜ್ಯ ಪ್ಯಾಸೆಂಜರ್ ವಿಮಾನ ಸೇವೆಗಳು ಜಾಮ್‌ನಗರ್ ವಿಮಾನ ನಿಲ್ದಾಣದಲ್ಲಿ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿವೆ.
