ನಿನ್ನೆ (ಏಪ್ರಿಲ್ 24) ತಡರಾತ್ರಿ ನಿತೀಶ್ ಕುಮಾರ್ ಅವರ ಜನತಾ ದಳ-ಯುನೈಟೆಡ್‌ನ (ಜೆಡಿಯು) ಯುವ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ನಡುವೆ ಈ ಘಟನೆ ನಡೆದಿದೆ. ಜೆಡಿಯು ಯುವ ಮುಖಂಡ ಸೌರಭ್ ಕುಮಾರ್ ಅವರು ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಗುಂಡಿಕ್ಕೆ ಕೊಲೆಗೈಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
#WATCH | Patna, Bihar: On JDU leader Saurabh Kumar shot dead, SDPO Masaurhi Kanhaiya Singh says, “…Saurabh Kumar came with his friends to attend a reception function. While returning he was shot by unknown miscreants, then he was taken to hospital and one other person named… pic.twitter.com/DhWHCYlJay
— ANI (@ANI) April 25, 2024
ಪರ್ಸಾ ಬಜಾರ್ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಮುನ್ಮುಮ್ ಕುಮಾರ್ ಗಾಯಗೊಂಡಿದ್ದಾರೆ ಎಂದು ಪನ್‌ಪುನ್‌ನ ಪೊಲೀಸ್ ಠಾಣೆ ಅಧಿಕಾರಿ ಮಸೌರ್ಹಿ ಕನ್ಹಯ್ಯಾ ಸಿಂಗ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೆನಡಾ: ಭಾರತೀಯ ಮೂಲದ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಸೌರಭ್ ಅವರ ತಲೆಗೆ ಎರಡು ಗುಂಡು ಹಾರಿಸಿದ್ದು, ಅವರ ಸಹಚರ ಮುನ್ಮುನ್ ಕುಮಾರ್ ಅವರಿಗೆ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿ ವೈದ್ಯರು ಸೌರಭ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮುನ್ಮುನ್ ಅವರ ಗಂಭೀರವಾಗಿದೆ.
ರಾತ್ರಿಯೇ ಪಾಟ್ನಾ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಹತ್ಯೆ ಖಂಡಿಸಿ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಪುನ್ ಪುನ್ ಗೆ ಆಗಮಿಸಿ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.