ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯಲ್ಲಿ ಮುಂಬೈ-ಹೌರಾ ರೈಲಿನ 18 ಭೋಗಿಗಳು ಹಳಿತಪ್ಪಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ದಿ ಮಿಂಟ್ ವರದಿ ಮಾಡಿದೆ.
ಮುಂಜಾನೆ ಸುಮಾರು 3.45 ಗಂಟೆಗೆ ಈ ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಇಆರ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಸಮೀಪಿದಲ್ಲೇ ಸರಕು ಸಾಗಣೆ ರೈಲು ಕೂಡಾ ಹಳಿತಪ್ಪಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿ ಓಂ ಪ್ರಕಾಶ್ ಚರಣ್ ಹೇಳಿದ್ದಾರೆ. ಆದರೆ ಈ ಎರಡೂ ಅಪಘಾತಗಳು ಏಕಕಾಲದಲ್ಲಿಯೇ ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
#WATCH | Jharkhand: Train No. 12810 Howara-CSMT Express derailed near Chakradharpur, between Rajkharswan West Outer and Barabamboo in Chakradharpur division at around 3:45 am.
— ANI (@ANI) July 30, 2024
Two people have lost their lives so far.
(Visuals from the spot) pic.twitter.com/zYvhUHI9cV
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಪಾಲ್ಘರ್‌ನಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು
ಹಳಿತಪ್ಪಿದ 18 ಬೋಗಿಗಳಲ್ಲಿ 16 ಪ್ಯಾಸೆಂಜರ್ ಬೋಗಿಗಳು, ಒಂದು ಪವರ್ ಭೋಗಿ ಮತ್ತು ಒಂದು ಪ್ಯಾಂಟ್ರಿ ಭೋಗಿಯಾಗಿದೆ. ಹಳಿ ತಪ್ಪಲು ನಿಖರವಾದ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಓಂ ಪ್ರಕಾಶ್ ಚರಣ್ ತಿಳಿಸಿದ್ದಾರೆ.
#UPDATE | Jharkhand train derail | One passenger travelling in the B4 coach of Mumbai Howrah Mail has died. One more passenger is reported to be trapped in the B4 coach and rescue of same is underway: Information and Public Relations Department, Jharkhand https://t.co/Jmutbyk1pW
— ANI (@ANI) July 30, 2024
ಗಾಯಾಳುಗಳಿಗೆ ರೈಲ್ವೇಯ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಚಕ್ರಧರಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಗಾಯಾಳುಗಳ ನಿಖರ ಸಂಖ್ಯೆ ತಿಳಿದುಬಂದಿಲ್ಲ. ಕೆಲವು ಮಾಧ್ಯಮಗಳು ಕನಿಷ್ಠ 60 ಮಂದಿ ಗಾಯಗೊಂಡಿರುವುದಾಗಿ ವರದಿ ಮಾಡಿದೆ.
ಇನ್ನು ಇತ್ತೀಚೆಗೆ ಹಲವಾರು ರೈಲುಗಳು ಹಳಿ ತಪ್ಪಿರುವ ಘಟನೆಗಳು ನಡೆದಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಗೂಡ್ಸ್ ರೈಲೊಂದು ಹಳಿತಪ್ಪಿತ್ತು.
ಭಾರತೀಯ ರೈಲ್ವೇ ಕೂಡ ಪ್ರಯಾಣಿಕರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
ಟಾಟಾನಗರ: 06572290324
ಚಕ್ರಧರಪುರ: 06587 238072
ರೂರ್ಕೆಲಾ: 06612501072, 06612500244
ಹೌರಾ: 9433357920, 03326382217
ರಾಂಚಿ: 0651-27-87115
ಮುಂಬೈ: 022-22694040