ಮಹಿಳೆಯನ್ನು ‘ಹುಚ್ಚು ಆದಿವಾಸಿ’ ಎಂದು ಕರೆದ ಆರೋಪವನ್ನು ಹೊತ್ತಿರುವ ಸರ್ಕಾರಿ ಅಧಿಕಾರಿಯ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಜಾರ್ಖಂಡ್ ಹೈಕೋರ್ಟ್ ರದ್ದುಗೊಳಿಸಿದೆ. ‘ಆದಿವಾಸಿ’ ಎಂಬ ಪದವು ಜಾತಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಅನಿಲ್ ಕುಮಾರ್ ಚೌಧರಿ ಅವರು ಆದೇಶ ಹೊರಡಿಸಿದ್ದು, ಅವರ ಜಾತಿ ಅಥವಾ ಪಂಗಡವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೆ, ಅವರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಸದಸ್ಯರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಪಡಿಸಿದರು.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶದಲ್ಲಿ ಜಾತಿ ತಾರತಮ್ಯಕ್ಕೆ ದಲಿತ ಸರ್ಕಾರಿ ವೈದ್ಯರ ಬಲಿ
ದುಮ್ಕಾದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರದ ಅಧಿಕಾರಿ ಸುನಿಲ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಕುಮಾರ್ ಅವರು ಸಿಟ್ಟಿಗೆದ್ದು ಸುನೀತಾ ಮರಾಂಡಿಯವರ ಆರ್‌ಟಿಐ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದರು. “ಹುಚ್ಚು ಆದಿವಾಸಿಗಳು, ಕಿರಿಕಿರಿ ಮಾಡಲು ಬರುತ್ತಾರೆ” ಎಂದು ಹೇಳಿದ್ದರು. ಅಶ್ಲೀಲ ಭಾಷೆಯನ್ನು ಬಳಸಿದರು. ಅಸಭ್ಯವಾಗಿ ವರ್ತಿಸಿದರು. ಕಚೇರಿಯಿಂದ ಹೊರಗೆ ತಳ್ಳಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರು ಆರ್‌ಟಿಐ ಅರ್ಜಿಯನ್ನು ಸಲ್ಲಿಸಲು ಒತ್ತಾಯಿಸಿದ್ದರಿಂದ ಸಿಟ್ಟಿಗೆದ್ದ ಅರ್ಜಿದಾರರು ಅವರನ್ನು ತಮ್ಮ ಕೊಠಡಿಯಿಂದ ಹೊರಗೆ ತಳ್ಳಿದರು ಎಂಬುದು ನೇರ ಆರೋಪವಾಗಿದೆ. “ಆಕ್ರಮಣ ಮಾಡುವ ಉದ್ದೇಶದಿಂದ ಕ್ರಿಮಿನಲ್ ಬಲಪ್ರಯೋಗ ಮಾಡಿದರು ಎಂಬ ಆರೋಪ ಅರ್ಜಿದಾರರ ವಿರುದ್ಧ ಇರಲಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಮಾಡಿ ಸವರ್ಣಿಯರ ವಿಕೃತಿ
“ಮಾಹಿತಿದಾರರಿಗೆ ಅಡ್ಡಿಪಡಿಸಿದ ಅಥವಾ ಮಾಹಿತಿದಾರರಿಗೆ ಮುಂದುವರಿಯುವ ಹಕ್ಕಿದೆ ಎಂಬ ದಿಕ್ಕಿನಲ್ಲಿ ಮುಂದುವರಿಯದಂತೆ ತಡೆದ ಯಾವುದೇ ಆರೋಪ ಅರ್ಜಿದಾರರ ವಿರುದ್ಧ ಇಲ್ಲ” ಎಂದು ಪೀಠವು ಉಲ್ಲೇಖಿಸಿದೆ.
ಬುಡಕಟ್ಟು ಜನಾಂಗಕ್ಕೆ ಆದಿವಾಸಿ ಎಂದು ಕೂಡಾ ಕರೆಯಲಾಗುತ್ತದೆ. ನೇರವಾಗಿ ನಿಂದಿಸಲು ಈ ಪದವನ್ನೇ ಬಳಸಲಾಗುತ್ತದೆ. ಹಾಗಿರುವಾಗ ಇದು ಜಾತಿಯಲ್ಲ ಎಂಬ ಕಾರಣ ನಿಂದನೆಯಲ್ಲ ಎಂದು ಪರಿಗಣಿಸುವ ಹೈಕೋರ್ಟ್ ಆದೇಶ ಸದ್ಯ ಚರ್ಚೆಗೆ ಗ್ರಾಸವಾಗಿದೆ.
