ಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನ್ಯಾಯಾಂಗ ಬಂಧನವನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯವು 14 ದಿನಗಳ ಕಾಲ ವಿಸ್ತರಣೆ ಮಾಡಿದೆ.
ಭೂ ಹಗರಣದ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿ ಸೋರೆನ್ ಇದ್ದಾರೆ. ಸೋರೆನ್ ಮತ್ತು ಇತರ 11 ಆರೋಪಿಗಳನ್ನು ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ.
ಈ ವಿಚಾರಣೆಯ ಬಳಿಕ ನ್ಯಾಯಾಲಯವು ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಇನ್ನೂ 14 ದಿನಗಳವರೆಗೆ ವಿಸ್ತರಿಸಿದೆ. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆಯು ಜುಲೈ 11ರಂದು ನಡೆಯಲಿದೆ.
ಇದನ್ನು ಓದಿದ್ದೀರಾ? ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ನಾದಿನಿ ಬಿಜೆಪಿ ಸೇರ್ಪಡೆ
ಹೇಮಂತ್ ಸೊರೇನ್ ಹೊರತುಪಡಿಸಿ, ಅಮಾನತುಗೊಂಡ ಬರ್ಗೈ ವಲಯದ ಕಂದಾಯ ಉಪನಿರೀಕ್ಷಕ ಭಾನು ಪ್ರತಾಪ್, ಜೆಎಂಎಂ ನಾಯಕ ಅಂತು ಟಿರ್ಕಿ, ಎಂಡಿ ಸದ್ದಾಂ, ಎಂಡಿ ಅಫ್ಸರ್ ಅಲಿ, ವಿಪಿನ್ ಸಿಂಗ್, ಪ್ರಿಯರಂಜನ್ ಸಹಾಯ್, ಇರ್ಷಾದ್ ಅಖ್ತರ್ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು.
ಶೇಖರ್ ಕುಶ್ವಾಹಾ, ಎಂಡಿ ಇರ್ಷಾದ್, ಕೋಲ್ಕತ್ತಾದ ರಿಜಿಸ್ಟ್ರಾರ್ ಆಫ್ ಅಶ್ಯೂರೆನ್ಸ್‌ನ ಇಬ್ಬರು ಉದ್ಯೋಗಿಗಳು ತಪಸ್ ಘೋಷ್ ಮತ್ತು ಸಂಜಿತ್ ಕುಮಾರ್ ಕೂಡಾ ವಿಚಾರಣೆಗೆ ಹಾಜರಾದರು. ಅವರ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಹಲವಾರು ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಇಡಿಯು ಜನವರಿ 31ರಂದು ಜನವರಿ 31ರಂದು ಹೇಮಂತ್ ಸೊರೆನ್ ಅವರನ್ನು ಬಂಧಿಸಿದೆ. ಏಪ್ರಿಲ್ 15ರಂದು ಜೆಎಂಎಂ ನಾಯಕ ಅಂತು ಟಿರ್ಕಿ, ಭೂ ಉದ್ಯಮಿ ಬಿಪಿನ್ ಸಿಂಗ್, ಪ್ರಿಯರಂಜನ್ ಸಹಾಯ್, ಮೊಹಮ್ಮದ್ ಇರ್ಷಾದ್ ಅವರನ್ನು ಬಂಧಿಸಿದೆ.
ಇನ್ನು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ ಆರೋಪದಲ್ಲಿ ಮಾಸ್ಟರ್ ಮೈಂಡ್ ಎಂಡಿ ಅಫ್ಸರ್ ಮತ್ತು ಎಂಡಿ ಸದ್ದಾಂ ಅವರನ್ನೂ ಇಡಿ ಬಂಧಿಸಿದೆ.