ದಕ್ಷಿಣ ಭಾರತದ ಪ್ರಮುಖ ಮತ್ತು ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಕೆಲಸ ಮಾಡುವವ ಎಲ್ಲರೂ ಹಿಂದುಗಳೇ ಆಗಿಬೇಕು. ಹಿಂದುಯೇತರರಿಗೆ ವಿಆರ್‌ಎಸ್ (ವಾಲೆಂಟಿಯರ್ ರಿಟೈರ್ಮೆಂಟ್) ಕೊಟ್ಟು ನಿವೃತ್ತಿ ಹೆಸರಿನಲ್ಲಿ ಹೊರದಬ್ಬಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ತೀರ್ಮಾನಿಸಿದೆ.
ಇತ್ತೀಚೆಗಷ್ಟೇ ಟಿಟಿಡಿ ಅಧ್ಯಕ್ಷರಾಗಿ ಬಿ.ಆರ್ ನಾಯ್ಡು ನೇಮಕಗೊಂಡಿದ್ದಾರೆ ಅವರ ನೇಮಕದ ಬಳಿಕ, ತಿರುಮಲ ದೇವಾಲಯ ಪದೇ-ಪದೇ ಸುದ್ದಿಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡು ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ, ಹಿಂದುಗಳಿಗೆ ಮಾತ್ರ ಕೆಲಸವೆಂಬ ನೀತಿ-ನಿರ್ಧಾರಗಳು ಹೊರಬರುತ್ತಿದೆ. ಈ ನಿರ್ಧಾರವು ಟಿಟಿಡಿ ಕೋಮುವಾದಿ, ಕೋಮುದ್ವೇಷದ ರಾಜಕಾರಣಕ್ಕೆ ತುತ್ತಾಗಿದೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಈ ಅನುಮಾನಗಳಿಗೆ ಪುಷ್ಠಿ ನೀಡುತ್ತದೆ.
ಶುಕ್ರವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ದು, “ತಿತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದುಗಳಾಗಿರಬೇಕು. ಇತರೆ ಧರ್ಮದ ಸಿಬ್ಬಂದಿಯನ್ನು ಹೇಗೆ ನಿಭಾಯಿಸಬೇಕು? ಅವರನ್ನು ಸರ್ಕಾರದ ಬೇರೆ ಇಲಾಖೆಗಳಿಗೆ ವರ್ಗಾಹಿಸಬೇಕೇ ಅಥವಾ ವಿಆರ್‌ಎಸ್ ನೀಡಬೇಕೇ ಎಂಬುದುರ ಬಗ್ಗೆ ಆಂಧ್ರ ಸರ್ಕಾರದೊಂದಿಗೆ ಚರ್ಚಿಸುತ್ತೇವೆ” ಎಂದಿದ್ದಾರೆ.
“ತಿರುಮಲದಲ್ಲಿ ಕೆಲಸ ಮಾಡಲು ಹಿಂದುಗಳಿಗೆ ಮಾತ್ರ ಅವಕಾಶ ಇರಬೇಕು. ಅದೇ ನನ್ನ ಮೊದಲ ಗುರಿ. ಅದಕ್ಕಾಗಿ ಪ್ರಯತ್ನಿಸುತ್ತೇನೆ” ಎಂದು ನಾಯ್ಡು ಹೇಳಿದ್ದಾರೆ.
ಬಿ ಆರ್ ನಾಯ್ಡು ಅವರು ‘ಹಿಂದು ಭಕ್ತಿ ಚಾನೆಲ್’ ಸೇರಿದಂತೆ ಹಲವು ತೆಲುಗು ವಾಹಿನಿಗಳನ್ನು ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ರಾಮನಗರ ಜಿಲ್ಲೆ ಚನ್ನಪಟ್ಟಣ ಮಂಗಳವಾರ ಪೇಟೆ 8ನೇ ಅಡ್ಡ ರಸ್ತೆ