“ನ್ಯಾಯಾಂಗವು ಸಾರ್ವಜನಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಇದ್ದು, ಇದರ ಭಾಗವಾಗಿರುವ ನ್ಯಾಯಾಧೀಶರು ರಾಜಕುಮಾರರೂ ಅಲ್ಲ ಅಥವಾ ಸಾರ್ವಭೌಮರು ಅಲ್ಲ” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಜೆ20 ಶೃಂಗಸಭೆಯಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್ ಅವರು ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಪ್ರಸ್ತಾಪ ಮಾಡಿದರು. “ನ್ಯಾಯಾಂಗ ನಿರ್ಧಾರ ಕೈಗೊಳ್ಳಲು ಬಳಸುವ ಕೃತಕ ಬುದ್ಧಿಮತ್ತೆಯು (ಎಐ) ಪಾರದರ್ಶಕವಾಗಿರಬೇಕು ಮತ್ತು ಅದರ ಫಲಿತಾಂಶಗಳಿಗೆ ಕಾರಣಗಳನ್ನು ನೀಡಬೇಕು” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ‘ಸಿಎಎ ಅಸಂವಿಧಾನಿಕ’ ಎಂದ ನ್ಯಾಯಮೂರ್ತಿ ಚಂದ್ರಚೂಡ್‌ರ ಪುತ್ರ; ವೀಡಿಯೋ ವೈರಲ್
“ನ್ಯಾಯಾಧೀಶರು ಬಹುಶಃ ಉನ್ನತ ವೇದಿಕೆಯ ಮೇಲೆ ಕುಳಿತಿರುವ ಏಕೈಕ ಸಾರ್ವಜನಿಕ ಕಾರ್ಯಕರ್ತರು. ಯಾವುದೇ ಚುನಾವಣಾ ನಷ್ಟದ ಭಯವಿಲ್ಲದೆ ಪ್ರತ್ಯೇಕ ಖಾಸಗಿ ಕೋಣೆಗಳಲ್ಲಿ ಇತರರ ಜೀವನದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವವರು ನ್ಯಾಯಾಧೀಶರು” ಎಂದು ಹೇಳಿದರು.
“ನ್ಯಾಯಾಧೀಶರು ನೀಡುವ ಆದೇಶವು ಎಂದಿಗೂ ಪಾರದರ್ಶಕವಾಗಿರಬೇಕು ಮತ್ತು ಆ ಆದೇಶವು ಕಾನೂನು ಶಿಕ್ಷಣ ಹೊಂದಿರುವ ಅಥವಾ ಇಲ್ಲದ ಎಲ್ಲರಿಗೂ ಅರ್ಥವಾಗುವಂತಹದ್ದಾಗಿರಬೇಕು” ಎಂದು ಸಿಜೆಐ ಅಭಿಪ್ರಾಯಿಸಿದರು.
“ನ್ಯಾಯಾಲಯದ ತೀರ್ಪಿನ ಮೊದಲು ಮತ್ತು ನಂತರದ ಪ್ರಕ್ರಿಯೆಯಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಉತ್ತಮ ನ್ಯಾಯ ನೀಡುವ ಕಾರ್ಯವಿಧಾನಗಳಿಗೆ ಸಹಾಯ ಮಾಡುತ್ತದೆ” ಎಂದು ಈ ಸಂದರ್ಭದಲ್ಲೇ ಹೇಳಿದರು.
ಇದನ್ನು ಓದಿದ್ದೀರಾ? ತೀರ್ಪು ತಪ್ಪಾಗಿದೆ ಎಂದು ನೇರವಾಗಿ ರದ್ದುಪಡಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ: ಸಿಜೆಐ ಚಂದ್ರಚೂಡ್
ಹಾಗೆಯೇ ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ತಪ್ಪು ಮಾಹಿತಿಯ ಕಳವಳಕಾರಿ ಅಂಶದ ಬಗ್ಗೆ ಮಾತನಾಡಿದರು. “ಭಾರತದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುವ ನಿಟ್ಟಿನಲ್ಲಿ ವಕೀಲರೊಂದಿಗೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿದೆ. ಆದರೆ ಪೀಠದ ಅಭಿಪ್ರಾಯ ಮತ್ತು ವಿಚಾರಣೆಯ ತಪ್ಪು ಕ್ಲಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವುದರಿಂದ ಕೆಲವೊಮ್ಮೆ ತಪ್ಪಾಗುತ್ತದೆ. ಆದರೆ ಕಾನೂನು ಪತ್ರಕರ್ತರು ಲೈವ್ ರಿಪೋರ್ಟಿಂಗ್ ಮಾಡಿ ಈ ತಪ್ಪು ಮಾಹಿತಿ ಹೊರಬೀಳುವುದನ್ನು ತಡೆಯುತ್ತಾರೆ” ಎಂದರು.