ಮಥುರಾದ ದೇವಸ್ಥಾನದಲ್ಲಿ ನ್ಯಾಯಾಧೀಶರೊಬ್ಬರ ತಾಳಿಯನ್ನು ಕದ್ದ ಘಟನೆ ಇತ್ತೀಚೆಗೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹತ್ತು ಮಹಿಳೆಯರನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಿಯೋಜಿತರಾದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪ್ರೇಮಾ ಸಾಹು ಅವರು ಜೂನ್ ಒಂದರಂದು ಕುಟುಂಬ ಸದಸ್ಯರೊಂದಿಗೆ ವೃಂದಾವನದ ಠಾಕೂರ್ ಶ್ರೀ ರಾಧಾರಾಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಚಿನ್ನದ ತಾಳಿಯನ್ನು ಕದಿಯಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶ್ಲೋಕ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರೈಲ್ವೆ ಪರೀಕ್ಷೆ | ಜನಿವಾರ-ಮಂಗಳಸೂತ್ರ ತೆಗೆಯಬೇಡಿ: ಅಧಿಕಾರಿಗಳಿಗೆ ರೈಲ್ವೆ ರಾಜ್ಯ ಖಾತೆ ಸಚಿವ ಸೋಮಣ್ಣ ಸೂಚನೆ
“ದೇವಾಲಯಗಳಲ್ಲಿ ಸಕ್ರಿಯವಾಗಿರುವ ಮಹಿಳಾ ಕಳ್ಳರು ಮತ್ತು ಜೇಬುಗಳ್ಳರನ್ನು ಗುರುತಿಸಲು, ಬಂಧಿಸಲು ನಾವು ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇದರಿಂದಾಗಿ ಶನಿವಾರ ಅಂತಹ 10 ಮಹಿಳೆಯರನ್ನು ಬಂಧಿಸಲಾಗಿದೆ” ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಮಹಿಳೆಯರು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಗ್ಯಾಂಗ್‌ನ ಭಾಗವಾಗಿದ್ದಾರೆ ಎಂದು ತಿಳಿದುಬಂದಿದೆ. ವೃಂದಾವನ ಮತ್ತು ಮಥುರಾದ ಜನದಟ್ಟಣೆಯ ದೇವಾಲಯಗಳಲ್ಲಿ ಜೇಬುಗಳ್ಳತನ, ಫೋನ್ ಕಳ್ಳತನ ಮತ್ತು ಬೆಲೆಬಾಳುವ ಆಭರಣಗಳನ್ನು ಕದಿಯುತ್ತಿದ್ದರು. ಈಗಾಗಲೇ ಕಾನೂನು ಕ್ರಮ ಆರಂಭಿಸಲಾಗಿದ್ದು, ಬಂಧಿತ ಮಹಿಳೆಯರನ್ನು ಜೈಲಿನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಪೊಲೀಸರು ಮಹಿಳೆಯರು ಮಾತ್ರವಲ್ಲದೆ ಇತರೆ ಕಳ್ಳರಿಂದ ಹಲವು ಕದ್ದ ಪರ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ನಗದು, ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಡ್ರೈವಿಂಗ್ ಲೈಸೆನ್ಸ್, ಇತರ ಪ್ರಮುಖ ದಾಖಲೆಗಳು, ಒಟ್ಟು 18,652 ರೂ. ನಗದು ಇತ್ತು.
