ಭಾರತ್ ರಾಷ್ಟ್ರೀಯ ಸಮಿತಿ(ಬಿಆರ್‌ಎಸ್) ನಾಯಕಿ, ಶಾಸಕಿ ಕೆ ಕವಿತಾ ಅವರನ್ನು ದೆಹಲಿ ಅಬಕಾರಿ ಹಗರಣ ಪ್ರಕರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತಿಹಾರಿ ಜೈಲಿನಿಂದ ಬಂಧಿಸಿದೆ.
ಕವಿತಾ ಅವರು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿದ್ದು, ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ.ಯಿಂದ ಮಾ.15ರಂದು ಬಂಧಿತರಾಗಿ ಏ.23ರವರೆಗೂ ತಿಹಾರಿ ಜೈಲಿನಲ್ಲಿ ಇರಬೇಕಾಗಿತ್ತು.
“ಇದು ಸಂಪೂರ್ಣವಾಗಿ ಹೇಳಿಕೆಯನ್ನು ಆದರಿಸಿದ ಪ್ರಕರಣವಾಗಿದೆ. ಇದೊಂದು ರಾಜಕೀಯ ಪ್ರಕರಣ. ಈ ಪ್ರಕರಣದಲ್ಲಿ ವಿರೋಧ ಪಕ್ಷಗಳನ್ನು ಗುರಿ ಮಾಡಲಾಗುತ್ತಿದೆ. ಜೈಲಿನಲ್ಲಿರುವಾಗಲೆ ನನ್ನ ಹೇಳಿಕೆಯನ್ನು ಸಿಬಿಐ ಈಗಾಗಲೇ ದಾಖಲಿಸಿದೆ” ಎಂದು ಕೆ ಕವಿತಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಪ್ರಣಾಳಿಕೆ- ಸುಳ್ಳು ಸುಳ್ಳೇ ಮುಸ್ಲಿಮ್ ಲೀಗ್ ಮೊಹರು ಹಾಕಿದ ಮೋದಿ
ಇತ್ತೀಚಿಗಷ್ಟೆ ಕೋರ್ಟಿನಿಂದ ವಿಶೇಷ ಅನುಮತಿ ಪಡೆದಿದ್ದ ಸಿಬಿಐ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿಯೇ ಕವಿತಾ ಅವರನ್ನು ಪ್ರಶ್ನಿಸಿದ್ದರು.
ದೆಹಲಿ ಅಬಕಾರಿ ನೀತಿಯಲ್ಲಿ ರಾಷ್ಟ್ರ ರಾಜಧಾನಿಯಿಂದ ಅನುಕೂಲ ಪಡೆಯಲು ಎಎಪಿಗೆ 100 ಕೋಟಿ ಲಂಚ ನೀಡಿದ ನಂತರ, ಸಹ ಅಪರಾಧಿ ಬುಚಿ ಬಾಬು ಅವರಿಂದ ಭೂವ್ಯವಹಾರದ ದೂರವಾಣಿ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ವಾಟ್ಸಾಪ್ ಚಾಟ್‌ಗಳನ್ನು ವಶಪಡಿಸಿಕೊಂಡ ಬಗ್ಗೆ ಕವಿತಾ ಅವರನ್ನು ಪ್ರಶ್ನೆ ಕೇಳಲಾಗಿತ್ತು.
ಏಪ್ರಿಲ್ 6 ರಂದು ಸಿಬಿಐ ತಿಹಾರಿ ಜೈಲಿಗೆ ತೆರಳಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಹೇಳಿಕೆಯನ್ನು ಪಡೆದಿದ್ದರು.
