ಪುಸ್ತಕ ವಿಶ್ವವಿದ್ಯಾನಿಲಯದ್ದು, ISBN ಸ್ವಂತ ಕುಟುಂಬದ ಪ್ರಕಾಶನ ಸಂಸ್ಥೆಯದ್ದು: ಕೇರಳ ಕೇಂದ್ರೀಯ ವಿವಿಯಲ್ಲಿ ಅನುಮಾನಾಸ್ಪದ ಪ್ರಕರಣ

Date:

Advertisements

ಭೌತಿಕ ಮತ್ತು ಡಿಜಿಟಲ್ ರೂಪಗಳಲ್ಲಿ ಇರಬಹುದಾದ ಪುಸ್ತಕಗಳನ್ನು ಗುರುತಿಸುವಲ್ಲಿ ಮತ್ತು ಪ್ರಮಾಣೀಕರಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿರುವ ಐ.ಎಸ್.ಬಿ.ಎನ್(ISBN) ಅನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆದಿದೆ. ಇಲ್ಲಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಹಾಗೂ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸೌಮ್ಯಾ ಹೇರಿಕುದ್ರು ವಿಶ್ವವಿದ್ಯಾನಿಲಯದ ಹೆಸರಿನಲ್ಲಿ ಇಲ್ಲದ ISBN ಬಳಸಿಕೊಂಡು ಪುಸ್ತಕ ಮುದ್ರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇಂಟರ್‌ನ್ಯಾಶನಲ್ ಸ್ಟ್ಯಾಂಡರ್ಡ್ ಬುಕ್ ನಂಬರ್ (ISBN) ಅನ್ನು ಭಾರತ ಸರ್ಕಾರದ ಅಧೀನದಲ್ಲಿ ಬರುವ ನವದೆಹಲಿಯ ರಾಜಾರಾಮ ಮೋಹನ್ ರಾಯ್ ನ್ಯಾಶನಲ್ ಏಜೆನ್ಸಿ ಪುಸ್ತಕ ಪ್ರಕಾಶಕರಿಗೆ ನೀಡುತ್ತದೆ. ಪುಸ್ತಕಗಳನ್ನು ವರ್ಗೀಕರಿಸುವಲ್ಲಿ, ಗುರುತಿಸುವಲ್ಲಿ, ಅದರ ಪ್ರಕಾಶಕರನ್ನು ನಿರ್ಧರಿಸುವಲ್ಲಿ ಈ ಬಾರ್ ಕೋಡ್ ಬಹಳ ಮುಖ್ಯವಾಗಿದೆ. ಕೇರಳ ವಿವಿಯ ಕನ್ನಡ ವಿಭಾಗ ಪ್ರಕಟಿಸಿರುವ ಪುಸ್ತಕದ ಬಾರ್ ಕೋಡ್ ಸೌಮ್ಯ ಅವರ ಪತಿ ಪ್ರದೀಪ್ ಕುಮಾರ್ ಶೆಟ್ಟಿಯವರ ಹೆಸರಿನಲ್ಲಿದೆ.

ಇದನ್ನು ಓದಿದ್ದೀರಾ? ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ಹಗರಣ: ಸಿಬಿಐ ತನಿಖೆಗೆ ವಹಿಸಿದ ಕೇಂದ್ರ

Advertisements

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಮೈಸೂರಿನ ಶಾಸ್ತ್ರೀಯ ಭಾಷಾ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ‘ಪ್ರಾಚೀನ ಕನ್ನಡ ಸಾಹಿತ್ಯ: ಓದಿನ ಕ್ರಮಗಳು’ ಎನ್ನುವ ಶೀರ್ಷಿಕೆಯಡಿ 2024ರ 21 ಮತ್ತು 22 ಫೆಬ್ರವರಿಯಂದು ಎರಡು ದಿನಗಳ ಅಂತಾರಾಷ್ಟೀಯ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು.

ಈ ವಿಚಾರ ಸಂಕಿರಣದಲ್ಲಿ ಮಂಡಿಸಲ್ಪಟ್ಟ ಆಯ್ದ ಲೇಖನಗಳನ್ನು ಸೌಮ್ಯ ಹೇರಿಕುದ್ರು ‘ಪ್ರಮಾಣವೆಂಬುದು ಪ್ರಮಾಣ’ ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಪುಸ್ತಕ ಪ್ರಕಟಣೆಗಾಗಿ ವಿಶ್ವವಿದ್ಯಾಲಯದಿಂದ ಮೂವತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನೂ ಪಡೆದಿದ್ದಾರೆ.

ಈ ಸಂಪಾದಿತ ಪುಸ್ತಕದ ತಾಂತ್ರಿಕ ಪುಟದಲ್ಲಿ ಪುಸ್ತಕದ ಪ್ರಕಾಶಕರು ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗವೆಂದು ನಮೂದಿಸಲ್ಪಟ್ಟಿದೆ. ಪುಸ್ತಕದ ಒಳಪುಟದಲ್ಲಿ ಮತ್ತು ರಕ್ಷಾಪುಟದ ಹಿಂಬದಿಯಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿಳಾಸ ಮತ್ತು ಲೋಗೋವನ್ನು ಮುದ್ರಿಸಲಾಗಿದೆ. ಆದರೆ ಪುಸ್ತಕದ ISBNನ ದಾಖಲೆಗಳಲ್ಲಿ ಈ ಪುಸ್ತಕದ ಪ್ರಕಾಶಕರ ಹೆಸರು ಪ್ರದೀಪ್ ಕುಮಾರ್ ಶೆಟ್ಟಿ ಕೆ ಎಂದಿದೆ.

ಪ್ರದೀಪ್ ಕುಮಾರ್ ಶೆಟ್ಟಿ, ಸೌಮ್ಯ ಹೇರಿಕುದ್ರು ಅವರ ಪತಿಯಾಗಿದ್ದು ‘ಅನಿಕೇತನ ಪುಸ್ತಕ’ (ಹೇರಿಕುದ್ರು, ಕುಂದಾಪುರ)ದ ಹೆಸರಿನಲ್ಲಿ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡ ವಿಭಾಗದ ಹೆಸರಿನಲ್ಲಿ ಪ್ರಕಟಗೊಂಡ ಈ ಪುಸ್ತಕಕ್ಕೂ ಪ್ರದೀಪ್ ಕುಮಾರ್ ಅವರೇ ಪ್ರಕಾಶಕರಾಗಿದ್ದಾರೆ. ಹಾಗಾಗಿ ಈ ಪುಸ್ತಕವನ್ನು ನಿಜವಾಗಿಯೂ ಯಾರು ಪ್ರಕಟಿಸಿದ್ದಾರೆ ಎಂಬುದೇ ಅನುಮಾನಾಸ್ಪದವಾಗಿದೆ.

ಅಲ್ಲದೆ, ಕನ್ನಡ ವಿಭಾಗ ಈ ವರೆಗೆ ನಡೆಸಿದ ನಾಲ್ಕು ವಿಚಾರ ಸಂಕಿರಣಗಳಲ್ಲಿ, ಎರಡು ಕಾರ್ಯಕ್ರಮಗಳ ಗೋಷ್ಠಿಗೆ ಪ್ರದೀಪ್ ಕುಮಾರ್ ಶೆಟ್ಟಿ ಅವರೇ ಆಹ್ವಾನಿತ ಅತಿಥಿಯೂ ಆಗಿದ್ದಾರೆ. ಈ ಎರಡೂ ಕಾರ್ಯಕ್ರಮಗಳನ್ನು ಸೌಮ್ಯ ಹೇರಿಕುದ್ರು ಸಂಯೋಜಿಸಿದ್ದಾರೆ. ಅಂದರೆ ಸೌಮ್ಯ ಅವರು ಸಂಯೋಜಿಸುವ ಅರ್ಧದಷ್ಟು ಕಾರ್ಯಕ್ರಮಗಳಿಗೆ ಅವರ ಪತಿಯೇ ಖಾಯಂ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಕೇರಳ ಕೇಂದ್ರೀಯ ವಿವಿಯಲ್ಲಿ ಹೀಗೆ ವಿಭಾಗದ ಮುಖ್ಯಸ್ಥರ ಕುಟುಂಬದವರು ನಡೆಸುವ ಪ್ರಕಾಶನ ಸಂಸ್ಥೆಗೆ 30 ಸಾವಿರ ರೂಪಾಯಿ ಹಣ ನೀಡಿ, ವಿವಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಸಂಪ್ರದಾಯವಿದೆಯೇ, ಈ ನಕಲಿ ISBN ನಂಬರಿನ ಪುಸ್ತಕದ ಪ್ರಕಟಣೆಯ ಬಗ್ಗೆ ಕನ್ನಡ ವಿಭಾಗದ ಇತರ ಪ್ರಾಧ್ಯಾಪಕರು, ಲೇಖನ ಆಯ್ಕೆ ಮತ್ತು ಪುಸ್ತಕ ಸಂಪಾದನಾ ಮಂಡಳಿ ಸದಸ್ಯರು, ವಿವಿಯ ಅಕಾಡೆಮಿಕ್ ಇಲಾಖೆ ಯಾಕೆ ಮೌನ ವಹಿಸಿತು, ISBN ನಕಲಿ ಆಗಿರುವ ಕಾರಣ ಈ ಪುಸ್ತಕದಲ್ಲಿ ಪ್ರಕಟಗೊಂಡ ಲೇಖನಗಳಿಗೆ ಅಕಾಡೆಮಿಕ್ ಮಾನ್ಯತೆ ಇದೆಯೇ, ಇಲ್ಲವೇ ಎಂಬ ಗೊಂದಲ ಪ್ರಬಂಧ ಮಂಡಿಸಿದವರಲ್ಲಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಹಣ ಖರ್ಚು ಮಾಡಿಕೊಂಡು ಬಂದು, ಶ್ರಮ ವಹಿಸಿ ಲೇಖನ ಮಂಡಿಸಿದ ಸಂಶೋಧಕರು ಈಗ ನಕಲಿ ISBN ಸುಳಿಗೆ ಸಿಲುಕಿದ್ದಾರೆ.

ಇದನ್ನು ಓದಿದ್ದೀರಾ? ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಕೋಮು ದ್ವೇಷ; ಅ.11ರಂದು ಪ್ರತಿಭಟನಾ ಜಾಥಾ

ಪ್ರಸಕ್ತ ವಿಚಾರ ಸಂಕಿರಣದ ಸಂಯೋಜಕರೂ ಆಗಿದ್ದ ಸೌಮ್ಯ ಅವರು ವಿಭಾಗದ ಸಂಶೋಧನಾರ್ಥಿಗಳು, ಪ್ರಾಧ್ಯಾಪಕರು ಮಂಡಿಸಿದ ಯಾವುದೇ ಪ್ರಬಂಧಗಳನ್ನು ಪುಸ್ತಕದಲ್ಲಿ ಪ್ರಕಟಿಸದೆ, ಸೆಮಿನಾರ್‌ನಲ್ಲಿ ಪ್ರಬಂಧ ಮಂಡಿಸಿದ್ದ ತಮ್ಮ ಸ್ವಜಾತಿಯವರೊಬ್ಬರಿಗೆ ‘ಉತ್ತಮ ಪ್ರಬಂಧ’ವೆಂಬ ಬಹುಮಾನವನ್ನು ನೀಡಿ, ಆ ಲೇಖನ ಪುಸ್ತಕದಲ್ಲಿ ಪ್ರಕಟವಾಗುವಂತೆ, ಅದರ ಕೆಲವು ಸಾಲುಗಳು ಪುಸ್ತಕದ ಹಿಂಪುಟದಲ್ಲಿ ಅಚ್ಚಾಗುವಂತೆಯೂ ನೋಡಿಕೊಂಡಿದ್ದಾರೆ.

ಉನ್ನತ ಸ್ಥಾನಗಳಲ್ಲಿ ಇರುವವರು ಜಾತಿ, ಧರ್ಮದಂತಹ ಸೂಕ್ಷ್ಮ ವಿಷಯಗಳಲ್ಲಿ ತಟಸ್ಥವಾಗಿ ಇರಬೇಕು ಎಂಬ ಸಂವೇದನೆಯೂ ಇಲ್ಲದವರಾಗಿ, ಇತ್ತೀಚೆಗೆ ದಾಖಲಾದ ವಿದ್ಯಾರ್ಥಿಯೊಬ್ಬರ ಕುರಿತು ವಿಭಾಗದ ಕಾರಿಡಾರ್‌ನಲ್ಲಿ ಕೆಲವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮ್ಮುಖದಲ್ಲಿ “ಇವನು ನಮ್ಮ ಜಾತಿಯ ಹುಡುಗ” ಎಂದು ಅಭಿಮಾನದಿಂದ ಮಾತನಾಡಿರುವುದು ಇತರ ಜಾತಿಗಳ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಕಡಿಮೆ ದಾಖಲಾತಿ ಇರುವ ಕನ್ನಡ ವಿಭಾಗದ ಬೆಳವಣಿಗೆಗೆ ಸೌಮ್ಯ ಅವರ ಈ ಮನೋಗುಣವು ಅಡ್ಡಿಯಾದರೆ ಇದರ ಹೊಣೆಯನ್ನು ಯಾರು ಹೊರುತ್ತಾರೆ ನೋಡಬೇಕಿದೆ.

ISBN ನಂಬರಿನಲ್ಲಿ ಲೇಖನ/ಪುಸ್ತಕ ಪ್ರಕಟಣೆಯು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರತಿಷ್ಠಿತ ವಿಷಯವಾಗಿದೆ. ಕೃತಿ ಚೌರ್ಯ ಮತ್ತು ಸಂಶೋಧನಾ ನೈತಿಕತೆಯ ಬಗ್ಗೆ ಯುಜಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಪ್ರತಿಷ್ಠಿತ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರ ಮುಖ್ಯಸ್ಥರೊಬ್ಬರು ISBN ಸಂಖ್ಯೆಯನ್ನೇ ದುರ್ಬಳಕೆ ಮಾಡಿರುವ ಪ್ರಕರಣ ಕನ್ನಡ ಪುಸ್ತಕ ಪ್ರಕಾಶನ, ಪ್ರಸರಣೆ ಪರಂಪರೆಯಲ್ಲಿಯೇ ಮೊಟ್ಟ ಮೊದಲಿನದ್ದಾಗಿದೆ. ಜೊತೆಗೆ ವಿಶ್ವವಿದ್ಯಾನಿಲಯ ಪುಸ್ತಕ ಪ್ರಕಟಣೆಗೆ ನೀಡಿರುವ ಅನುದಾನವನ್ನು ತನ್ನ ಕುಟುಂಬವೇ ನೇರವಾಗಿ ಭಾಗಿಯಾಗಿರುವ ಉದ್ಯಮಸಂಸ್ಥೆಗೆ ಪಾವತಿ ಮಾಡಬಹುದೇ? ಇಲ್ಲಿ ವಿಶ್ವವಿದ್ಯಾನಿಲಯದ ನಿಯಮಗಳನ್ನು ಪಾಲಿಸಲಾಗಿದೆಯೇ? ವಿಭಾಗದ ಪ್ರಭಾರ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಮೊದಲ ಅವಧಿಯಲ್ಲಿಯೇ ಇಷ್ಟೆಲ್ಲಾ ಅವಘಡಗಳಿಗೆ ಕಾರಣರಾದ ಸೌಮ್ಯ ಹೇರಿಕುದ್ರು ಅವರ ಈ ಪ್ರಕರಣದ ಬಗ್ಗೆ ವಿವಿಯ ಆಡಳಿತಾಂಗವು ಯಾವ ಕ್ರಮ ಕೈಗೊಳ್ಳುವುದು ಕಾದು ನೋಡಬೇಕಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ...

Download Eedina App Android / iOS

X