ದುಬೈನಿಂದ ಮರಳಿದ ಕೇರಳದ ಮಲಪ್ಪುರಂನ 38 ವರ್ಷದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ಹೇಳಿದ್ದಾರೆ.
ಈ ವ್ಯಕ್ತಿ ಸದ್ಯ ಮಂಜೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ವಾರದ ಹಿಂದೆ ದುಬೈನಿಂದ ಭಾರತಕ್ಕೆ ಮರಳಿದ್ದರು.
ವ್ಯಕ್ತಿಯ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡಿದ್ದವರು. ಜೊತೆಗೆ ತೀವ್ರ ಜ್ವರವೂ ಇತ್ತು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಹುತೇಕ ಮಂಕಿಪಾಕ್ಸ್ ಲಕ್ಷಣವಿದ್ದ ಕಾರಣ ಪರೀಕ್ಷೆ ನಡೆಸಿದಾಗ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ.
ಇದನ್ನು ಓದಿದ್ದೀರಾ? ಭಾರತದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆ
ದೆಹಲಿಯಲ್ಲಿ 26 ವರ್ಷದ ಯುವಕನಿಗೆ ಮಂಕಿಪಾಕ್ಸ್ ದೃಢಪಟ್ಟ ನಂತರ ಈಗಾಗಲೇ ದೇಶದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.
ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ 2022ರಲ್ಲಿ ಕೇರಳದಲ್ಲಿ ವರದಿಯಾಗಿದ್ದು ಆ ಸಂದರ್ಭದಲ್ಲೇ ಕೇರಳ ಸರ್ಕಾರ ಕಾರ್ಯವಿಧಾನವನ್ನು ಹೊರಡಿಸಿತ್ತು.
A 38-year-old man undergoing treatment in Kerala's Malappuram confirmed with Mpox infection: State Health department
— Press Trust of India (@PTI_News) September 18, 2024
