ಕೇರಳ | CPIMನ ಸೈದ್ಧಾಂತಿಕ ವಿಚಲನದಿಂದ ನೋವಾಗಿದೆ: BJP ಸೇರಿದ ರೆಜಿ ಲುಕೋಸ್

Date:

ಕೇರಳದ ಎಡಪಂಥೀಯ ನಾಯಕ, ಮಾಧ್ಯಮಗಳ ಚರ್ಚೆಯಲ್ಲಿ ಎಡ ಪಕ್ಷಗಳ ಮುಖವಾಗಿದ್ದ ರೆಜಿ ಲುಕೋಸ್ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯದಲ್ಲಿ ಸಿಪಿಐ(ಎಂ) ಕೋಮು ವಿಭಜನೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

- Advertisement -

ರೆಜಿ ಲುಕೋಸ್ ಅವರು ಮಾಧ್ಯಮಗಳ ಚರ್ಚೆಯಲ್ಲಿ ಎಡಪಕ್ಷದ ಪರವಾಗಿ ಭಾಗಿಯಾಗಿತ್ತುದ್ದರು. ಸಿಪಿಐ(ಎಂ)ನ ಫೈಯರ್‌ಬ್ರಾಂಡ್‌ ಪ್ರತಿಪಾದಕರಾಗಿದ್ದರು. ಇದೀಗ, ಅವರು ಸಿಪಿಐ(ಎಂ) ತೊರೆದು ಬಿಜೆಪಿ ಸೇರಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್‌ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

“ಕಳೆದ 35 ವರ್ಷಗಳಿಂದ, ನಾನು ಸಿಪಿಐ(ಎಂ)ನಲ್ಲಿದ್ದೇನೆ. ಇತ್ತೀಚಿನ ತಿಂಗಳಲ್ಲಿ ಸಿಪಿಐ(ಎಂ)ನ ಸೈದ್ಧಾಂತಿಕ ವಿಚಲನದಿಂದ ನನಗೆ ನೋವಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಕೈಲಾಶ್ ವಿಜಯವರ್ಗೀಯ ಎಂಬ ಗುಟುರು ಗೂಳಿಗೆ ಕಡಿವಾಣ ಹಾಕುವುದೇ ಬಿಜೆಪಿ?

“ಸಿಪಿಐ(ಎಂ) ಈಗ ರಾಜ್ಯದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕೋಮುವಾದದ ವಿರುದ್ಧ ಆ ಪಕ್ಷವು ಹೋರಾಟ ಮಾಡುತ್ತಿದ್ದ ಕಾರಣಕ್ಕಾಗಿ ನನ್ನಂತಹ ವ್ಯಕ್ತಿಗಳು ಹಲವು ವರ್ಷಗಳಿಂದ ಸಿಪಿಐ(ಎಂ) ಜೊತೆ ನಿಂತಿದ್ದರು. ಆದಾಗ್ಯೂ, ಇತ್ತೀಚೆಗೆ ಪಕ್ಷವು ಕೋಮುವಾದವನ್ನು ಬೆಂಬಲಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

“ಬಿಜೆಪಿಯ ‘ಅಭಿವೃದ್ಧಿ ಕಾರ್ಯಸೂಚಿಯಿಂದ ಪ್ರೇರಿತನಾಗಿ ಬಿಜೆಪಿ ಸೇರಿದ್ದೇನೆ. ನಾವು ಹಳತಾದ ಸಿದ್ಧಾಂತದೊಂದಿಗೆ ಮುಂದುವರೆದರೆ, ಕೇರಳ ಶೀಘ್ರದಲ್ಲೇ ವೃದ್ಧಾಶ್ರಮವಾಗಿ ಬದಲಾಗುತ್ತದೆ. ಉತ್ತರ ಭಾರತದಲ್ಲಿ ನಡೆದಿರುವ ಅಭಿವೃದ್ಧಿ ನನ್ನನ್ನು ಅಚ್ಚರಿಗೊಳಿಸಿದೆ. ಇನ್ನು ಮುಂದೆ ನಾನು ಬಿಜೆಪಿಯ ಧ್ವನಿಯಾಗುತ್ತೇನೆ” ಎಂದಿದ್ದಾರೆ.

ಹಿರಿಯ ಸಿಪಿಐ(ಎಂ) ನಾಯಕ, ಸಚಿವ ವಿ.ಎನ್ ವಾಸವನ್ ಅವರು, “ಲೂಕೋಸ್ ಅವರು ಸಿಪಿಐ(ಎಂ)ನಲ್ಲಿ ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ. ಆದ್ದರಿಂದ ಅವರು ಪಕ್ಷ ತೊರೆದಿದ್ದಾರೆ. ಇಂತಹ ಬೆಳವಣಿಗೆಗಳಿಂದ ಚುನಾವಣೆಗಳಲ್ಲಿ ಎಲ್‌ಡಿಎಫ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...

2018ರ ಪ್ರಕರಣ: ಸಿಜೆಪಿ ಪ್ರತಿಭಟನೆ ಹೊತ್ತಿನಲೇ ಧೃವ್ ರಾಠಿಗೆ ಹೊಸ ಸಮನ್ಸ್ ಜಾರಿ ಮಾಡಿದ ದೆಹಲಿ ಕೋರ್ಟ್

ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ 2018ರ...

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...