ಹೇಮಾ ವೆಂಕಟ್, ಪ್ರೊ. ಪೂರ್ಣಾನಂದ, ಎ ನಾರಾಯಣ, ಸತೀಶ್‌ ಆಚಾರ್ಯ, ಸೋಮಶೇಖರ್ ಪಡುಕೆರೆ ಸೇರಿ ಹಲವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Date:

ಪ್ರತಿ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡಮಾಡುವ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತೆ, ಈದಿನ.ಕಾಮ್‌ ಸಂಸ್ಥೆಯ ಭಾಗವಾಗಿರುವ ಹೇಮಾ ವೆಂಕಟ್‌, ಪ್ರಾಧ್ಯಾಪಕ ಪೂರ್ಣಾನಂದ, ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ, ಪತ್ರಕರ್ತ ಸೋಮಶೇಖರ್ ಪಡುಕೆರೆ ಹಾಗೂ ಚಿಂತಕ, ಬರಹಗಾರ ಎ ನಾರಾಯಣ್ ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ.

- Advertisement -

ಈ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಣೆ ಹೊರಡಿಸಿದೆ. “ಜನವರಿ 8ರಂದು ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿಗೆ ಅರ್ಹರ ಹೆಸರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ 30 ಪತ್ರಕರ್ತರು, ವಿವಿಧ ದತ್ತಿ ಪ್ರಶಸ್ತಿಗಳಿಗೆ 10 ಮಂದಿ ಚಿಂತಕರು, ಬರಹಗಾರರು ಹಾಗೂ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಸರಿತಾ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ವಿಶೇಷ ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಕಾಡೆಮಿ ಮತ್ತು ದತ್ತಿ ಪ್ರಶಸ್ತಿಗಳು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಹೀಗಿದೆ:

  • ಡಿ ಕುಮಾರಸ್ವಾಮಿ
  • ಬನಶಂಕರ ಆರಾಧ್ಯ
  • ಹೇಮಾ ವೆಂಕಟ್
  • ಮಂಜುನಾಥ್ ವೈ ಎಲ್
  • ಅನಂತ ನಾಡಿಗ್
  • ಗುರುರಾಜ್ ವಾಮನರಾವ್ ಜಮಖಂಡಿ
  • ಎಂ.ಎಂ ಪಾಟೀಲ್
  • ಎಲ್ ವಿವೇಕಾನಂದ
  • ಆರ್‌.ಪಿ ಭರತ್‌ರಾಜ್ ಸಿಂಗ್
  • ಪ್ರೊ. ಪೂರ್ಣಾನಂದ
  • ಮೊಹಮ್ಮದ್ ಅಸದ್
  • ತುಂಗರೇಣುಕಾ
  • ಮೊಹಿಯುದ್ದೀನ್ ಪಾಷಾ
  • ರುದ್ರಪ್ಪ ಅಸಂಗಿ
  • ಸತೀಶ್‌ ಆಚಾರ್ಯ
  • ಸೋಮಶೇಖರ್ ಪಡುಕೆರೆ
  • ಗುಲ್ನಾರ್ ಮಿರ್ಝಾ
  • ಗಣೇಶ್‌ ಹೆಗಡೆ ಇಟಗಿ
  • ಆರತಿ ಎಚ್‌.ಎನ್‌
  • ಕೆ ಲಕ್ಷ್ಮಣ
  • ಉಮಾ ಆನಂತ್
  • ಮಂಜುನಾಥ ಮಹಾಲಿಂಗಪೂರ
  • ಮಂಜುನಾಥ ಟಿ
  • ಮಲ್ಲಿಕಾಚರಣ ವಾಡಿ
  • ಪ್ರತಿಮಾ ನಂದಕುಮಾರ್
  • ಅಮಿತ್ ಉಪಾಧ್ಯೆ
  • ಪ್ರಭುಸ್ವಾಮಿ ನಾಟೇಕರ್
  • ಸಿದ್ದೇಗೌಡ ಎನ್
  • ಸಂಜೀವ ಕಾಬ್ಲೈ
  • ನೀಲಕಂಠ ಕೆ.ಆರ್

ದತ್ತಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ;

  • ಡಾ. ಬಿ.ಆರ್ ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ – ಡಾ. ಎ ನಾರಾಯಣ
  • ಆಂದೋಲನ ದತ್ತಿ ಪ್ರಶಸ್ತಿ – ಸುವರ್ಣ ಗಿರಿ ಪತ್ರಿಕೆ, ಕೊಪ್ಪಳ
  • ಅಭಿಮಾನಿ ದತ್ತಿ ಪ್ರಶಸ್ತಿ – ಶಿವ ಹುಣಸೂರು
  • ಮೈಸೂರು ದಿಗಂತ ದತ್ತಿ ಪ್ರಶಸ್ತಿ – ಸಂತೋಷ ಈ ಚಿನಗುಡಿ
  • ಅಭಿಮನ್ಯ ದತ್ತಿ ಪ್ರಶಸ್ತಿ – ಚಂದ್ರಶೇಖರ ಬೆನ್ನೂರು
  • ಪ್ರಜಾ ಸಂದೇಶ ದತ್ತಿ ಪ್ರಶಸ್ತಿ – ನಾಗರಾಜು ವೈ
  • ಅರಗಿಣಿ ದತ್ತಿ ಪ್ರಶಸ್ತಿ – ಚೇತನ್ ನಾಡಿಗೇರ
  • ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ – ಸಿದ್ದೇಶ್ ತ್ಯಾಗಟೂರು
  • ಸಿ.ವಿ ರಾಜಗೋಪಾಲ್ ದತ್ತಿ ಪ್ರಶಸ್ತಿ – ಪ್ರಹ್ಲಾದ್ ಕುಳಲಿ
  • ಕೆಯುಡಬ್ಲ್ಯೂಜಿ ದತ್ತಿ ಪ್ರಶಸ್ತಿ – ಕೆ ಆನಂದ ಶೆಟ್ಟಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ ಕಲಿಕೆಯ ವಾತಾವರಣ ಅಗತ್ಯ

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ...