1946ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಗಲಭೆಯ ಘಟನೆಗಳನ್ನಾಧರಿಸಿ ನಿರ್ಮಿಸಲಾಗಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟ್ರೈಲರ್ ಬಿಡುಗಡೆಗೆ ಕೋಲ್ಕತ್ತಾ ಪೊಲೀಸರು ತಡೆಯೊಡ್ಡಿದ್ದಾರೆ ಎಂದು ವರದಿಯಾಗಿದೆ.
ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪೊಲೀಸರು ವಿರುದ್ಧ ಆರೋಪ ಮಾಡಿದ್ದು, “ಶನಿವಾರ ಮಧ್ಯಾಹ್ನ ಪಂಚತಾರಾ ಹೋಟೆಲ್‌ನಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಆದರೆ, ಟ್ರೇಲರ್ ಬಿಡುಗಡೆಯನ್ನು ಪೊಲೀಸರು ತಡೆದಿದ್ದಾರೆ” ಎಂದು ಹೇಳಿದ್ದಾರೆ.
ಸೆನ್ಸಾರ್ ಮಂಡಳಿಯು ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ. ಸಿನಿಮಾದ ನಿಷೇಧಕ್ಕೆ ಹೈಕೋರ್ಟ್ ಕೂಡ ತಡೆ ನೀಡಿದೆ. ಆದರೂ, ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಮೇಲೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಜನರ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅಗ್ನಿಹೋತ್ರಿ ದೂರಿದ್ದಾರೆ.
ಆದರೆ, ಅಗ್ನಿಹೋತ್ರಿ ಅವರ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್’, ‘ದಿ ತಾಷ್ಕೆಂಟ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಎಂಬ ಸಿನಿಮಾಗಳನ್ನೂ ನಿರ್ಮಿಸಿ ಬಿಡಗುಡೆ ಮಾಡಿದ್ದಾರೆ. ಈ ಎಲ್ಲ ಸಿನಿಮಾಗಳಲ್ಲಿಯೂ ಇತಿಹಾಸ ಮತ್ತು ಸತ್ಯವನ್ನು ತಿರುಚಲಾಗಿದೆ ಎಂಬ ಆರೋಪಗಳಿವೆ. ಈ ಸಿನಿಮಾಗಳ ಕಾರಣಕ್ಕಾಗಿ ಅಗ್ನಿಹೋತ್ರಿ ವಿವಾದದ ಕೇಂದ್ರಬಿಂದುವೂ ಆಗಿದ್ದರು.