ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ, ಉದ್ಯಮಿ ರತನ್ ಟಾಟಾ ಅವರು ನಿಧನರಾಗಿದ್ದಾರೆ. ಇದೀಗ ಅವರ ಕೊನೆಯ ಪೋಸ್ಟ್ ವೈರಲ್ ಆಗುತ್ತಿದೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಸಾಲ್ಟ್ ಟು ಸಾಫ್ಟ್‌ವೇರ್ ಗ್ರೂಪ್‌ನ ಅಧ್ಯಕ್ಷರಾಗಿದ್ದ ಟಾಟಾ ಅವರು ಬುಧವಾರ ರಾತ್ರಿ 11.30ಕ್ಕೆ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿದ್ದೀರಾ? ಖ್ಯಾತ ಉದ್ಯಮಿ ರತನ್ ಟಾಟಾ ನಿಧನ
ಎರಡು ದಿನಗಳ ಹಿಂದಷ್ಟೇ ಉದ್ಯಮಿಯ ಆರೋಗ್ಯದ ಬಗ್ಗೆ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ಈ ಬಗ್ಗೆ ರತನ್ ಟಾಟಾ ಅವರು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದರು. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ರತನ್ ಟಾಟಾ ಕೊನೆಯ ಪೋಸ್ಟ್‌ನಲ್ಲೇನಿದೆ?
“ನನ್ನ ಆರೋಗ್ಯದ ಬಗ್ಗೆ ಹರಡುತ್ತಿರುವ ಇತ್ತೀಚಿನ ವದಂತಿಗಳ ಬಗ್ಗೆ ನನಗೆ ತಿಳಿದಿದೆ. ಈ ಸುದ್ದಿಗಳು ಆಧಾರರಹಿತವಾಗಿವೆ ಎಂದು ಎಲ್ಲರಿಗೂ ತಿಳಿಸಲು ನಾನು ಬಯಸುತ್ತೇನೆ. ನನ್ನ ವಯೋಸಹಜ ಸಮಸ್ಯೆಗಳಿಂದಾಗಿ, ಸಂಬಂಧಿತ ವೈದ್ಯಕೀಯ ತಪಾಸಣೆಗೆ ನಾನು ಒಳಗಾಗುತ್ತಿದ್ದೇನೆ. ನಾನು ಉತ್ತಮ ಉತ್ಸಾಹದಲ್ಲಿ ಇರುತ್ತೇನೆ” ಎಂದು ಟಾಟಾ ತಮ್ಮ ಕೊನೆಯ ಪೋಸ್ಟ್‌ನಲ್ಲಿ ಹೇಳಿದ್ದರು.
ಜೊತೆಗೆ “ಸಾಮಾಜಿಕ ಮಾಧ್ಯಮಗಳು ಮತ್ತು ಜನರು ತಪ್ಪು ಮಾಹಿತಿಯನ್ನು ಹರಡದಂತೆ ವಿನಂತಿಸುತ್ತೇನೆ” ಎಂದು ಟಾಟಾ ತಿಳಿಸಿದ್ದರು.
Thank you for thinking of me 🤍 pic.twitter.com/MICi6zVH99
— Ratan N. Tata (@RNTata2000) October 7, 2024
ಇದನ್ನು ಓದಿದ್ದೀರಾ? ರತನ್ ಟಾಟಾ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಉದ್ಯಮಿ ಸ್ಪಷ್ಟನೆ
ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ರತನ್ ಟಾಟಾ ಅವರು ಮಾಡಿರುವ ಪೋಸ್ಟ್ ಕೂಡಾ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ತುರ್ತು ರಕ್ತ ಅಗತ್ಯವಿರುವ ನಾಯಿಯೊಂದಕ್ಕೆ ಸಹಾಯ ಮಾಡುವಂತೆ ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಟಾಟಾ ಅವರು ನಾಯಿಯ ಸ್ಥಿತಿಯ ಬಗ್ಗೆ ನಿರ್ದಿಷ್ಟ ವಿವರಗಳನ್ನು ಹಂಚಿಕೊಂಡಿದ್ದರು. ಸಹಾಯ ಮಾಡಲು ಮುಂಬೈನ ಜನರನ್ನು ತುರ್ತಾಗಿ ಕರೆದಿದ್ದರು.
“ನಿಮ್ಮ ಸಹಾಯವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಮ್ಮ 7 ತಿಂಗಳು ವಯಸ್ಸಿನ ನಾಯಿಗೆ ತುರ್ತು ರಕ್ತ ವರ್ಗಾವಣೆಯ ಅಗತ್ಯವಿದೆ. ಜ್ವರ ಮತ್ತು ರಕ್ತಹೀನತೆಯಿಂದಾಗಿ ಅವರನ್ನು ದಾಖಲಿಸಲಾಗಿದೆ. ನಮಗೆ ತುರ್ತಾಗಿ ಮುಂಬೈನಲ್ಲಿ ನಾಯಿಗೆ ರಕ್ತದಾನ ಮಾಡುವವರ ಅಗತ್ಯವಿದೆ” ಎಂದು ತಿಳಿಸಿದ್ದರು.
