ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ನೀಡಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ಬಹುಸಂಖ್ಯಾತರ ಇಚ್ಛೆಯಂತೆ ದೇಶ, ಕಾನೂನು ನಡೆಯುತ್ತದೆ ಎಂದು ಹೈಕೋರ್ಟ್ ನ್ಯಾಯಾಧೀಶ ಹೇಳಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ನ್ಯಾಯಾಧೀಶರಿಂದ ಅಲ್ಪಸಂಖ್ಯಾತ ಸಮುದಾಯವು ಹೇಗೆ ನ್ಯಾಯವನ್ನು ನಿರೀಕ್ಷಿಸುವುದು” ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಭಾನುವಾರ ಪ್ರಯಾಗರಾಜ್‌ನಲ್ಲಿ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌ನ ಕಾನೂನು ಘಟಕ ಆಯೋಜಿಸಿತ್ತು.
ಇದನ್ನು ಓದಿದ್ದೀರಾ? ಬೆಂಗಳೂರು | ಅಕ್ರಮ ವಾಸ; ಪಾಕಿಸ್ತಾನ ಪ್ರಜೆ ಸೇರಿ ನಾಲ್ವರ ಬಂಧನ
“ಇದು ಹಿಂದೂಸ್ತಾನ, ಈ ದೇಶವು ಹಿಂದೂಸ್ತಾನದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಕಾನೂನು. ಹೈಕೋರ್ಟ್ ನ್ಯಾಯಾಧೀಶರಾಗಿ ನೀವು ಹೀಗೆ ಹೇಳುತ್ತಿದ್ದೀರಾ ಎಂದು ನೀವು ಹೇಳುವಂತಿಲ್ಲ” ಎಂದು ಹೇಳಿದರು.
“ನಮ್ಮ ಕಾನೂನು ಬಹುಸಂಖ್ಯಾತರ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಅದು ಹೇಗೆ ಎಂಬುದನ್ನು ಕುಟುಂಬ ಮತ್ತು ಸಮಾಜದ ಹಿನ್ನೆಲೆಯಲ್ಲಿ ನೋಡಿ. ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೋಷಕ್ಕೆ ಯಾವುದು ಕಾರಣವಾಗುತ್ತದೆಯೋ ಅದನ್ನು ಮಾತ್ರ ಒಪ್ಪಿಕೊಳ್ಳಲಾಗುತ್ತದೆ” ಎಂದು ತನ್ನ ಉಪನ್ಯಾಸದಲ್ಲಿ ತಿಳಿಸಿದರು.
ನ್ಯಾಯಾಧೀಶರಿಗೆ ನೆಟ್ಟಿಗರ ತರಾಟೆ
ನ್ಯಾಯಾಧೀಶರ ಹೇಳಿಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ನ್ಯಾಯಾಧೀಶನ ವಿರುದ್ಧವಾಗಿ ಬಾರ್ ಬೆಂಚ್ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. “ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ನ್ಯಾಯಾಧೀಶರ ವಕೀಲಿ ಪರವಾನಗಿಯನ್ನು ರದ್ದು ಮಾಡಬೇಕು” ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ನ್ಯಾಯಾಧೀಶರ ಹೇಳಿಕೆಯನ್ನು ಟೀಕಿಸಿದ ಹೈದರಾಬಾದ್ ಸಂಸದ ಓವೈಸಿ, “ಭಾರತದ ಸಂವಿಧಾನವು ತನ್ನ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತವನ್ನು ನಿರೀಕ್ಷಿಸುತ್ತದೆ” ಎಂದು ಹೇಳಿದರು.
The VHP was banned on various occasions. It is associated with RSS, an organisation that Vallabhai Patel banned for being a ‘force of hate and violence.’
— Asaduddin Owaisi (@asadowaisi) December 9, 2024
It is unfortunate that a High Court judge attended the conference of such an organisation. This “speech” can be easily… https://t.co/IMce7aYbcf
“ವಿಎಚ್‌ಪಿಯನ್ನು ವಿವಿಧ ಸಂದರ್ಭಗಳಲ್ಲಿ ನಿಷೇಧಿಸಲಾಗಿದೆ. ಇದು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದೆ. ಅಂತಹ ಸಂಘಟನೆಯ ಸಮಾವೇಶದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಭಾಗವಹಿಸಿದ್ದು ದುರದೃಷ್ಟಕರ. ನ್ಯಾಯಾಧೀಶರಿಗೆ ಸಂವಿಧಾನವು ನ್ಯಾಯಾಂಗವು ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತವನ್ನು ನಿರೀಕ್ಷಿಸುತ್ತದೆ ಎಂದು ನೆನೆಪಿಸುವುದು ಮುಖ್ಯವಾಗಿದೆ” ಎಂದು ತನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುಂದಿನ ಭವಿಷ್ಯದ ಕುರಿತು ಅರಿವಿಲ್ಲದ, ಅರಿವಿದ್ದರೂ ಕಿಲುಬು ಕಾಸಿನ ಆಸೆಗೆ ಶಾಂತಿಪ್ರಿಯ “ಅಲ್ಪ ಸಂಖ್ಯಾತರ” ಓಲೈಕೆಗೆ ಮುಂದಾಗಿರುವುದು ದುರಂತ. ಮುಂದೆ ನಿಮ್ಮ ಮನೆಗಳಲ್ಲಿ ಈ ಮುಸ್ಲಿಮರ ದೆಸೆಯಿಂದ ಮಾರಿ ಹಬ್ಬ ಆದಾಗ ಜ್ಞಾನೋದಯ ಆಗಬಹುದೇನೋ. ಹಿಂದೂಗಳು ಚೆನ್ನಾಗಿದ್ದರೆ ಎಲ್ಲರೂ ಚೆನ್ನಾಗಿರುತ್ತಾರೆ ಎಂಬುದಕ್ಕೆ ಸಾವಿರ ವರ್ಷಗಳ ಇತಿಹಾಸವೇ ಸಾಕ್ಷಿ
ಸರಿಯಾಗಿ ಹೇಳಿದ್ದಾರೆ ಜಡ್ಜ್