ಕೋರ್ಟ್ ಕಲಾಪ ನಡೆಯುತ್ತಿರುವಾಗ ಗುಂಡಿ ಬಿಚ್ಚಿದ ಅಂಗಿ ಧರಿಸಿ ಬಂದಿದ್ದ ವಕೀಲರೊಬ್ಬರಿಗೆ ಅಲಹಾಬಾದ್ ಹೈಕೋರ್ಟ್ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
2021ರ ನಡೆದಿದ್ದ ಪ್ರಕರಣದಲ್ಲಿ ವಕೀಲ ಅಶೋಕ್ ಪಾಂಡೆ ಎಂಬುವವರು ನ್ಯಾಯಾಲಯಕ್ಕೆ ಕೋರ್ಟ್ ನಿಲುವಂಗಿಯಿಲ್ಲದೆ ಗುಂಡಿ ಬಿಚ್ಚಿದ ಅಂಗಿ ಧರಿಸಿ ಹಾಜರಾಗಿದ್ದರು.
ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಹಾಗೂ ಬಿ ಆರ್ ಸಿಂಗ್ ಒಳಗೊಂಡ ವಿಭಾಗೀಯ ಪೀಠ ‘ಅಶೋಕ್ ಪಾಂಡೆಯ ಹಿಂದಿನ ನಡವಳಿಕೆ ಹಾಗೂ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವರ ನಿರಾಕರಣೆಯ ಕಾರಣಕ್ಕೆ ಅನುಕರಣೀಯ ಶಿಕ್ಷೆ ವಿಧಿಸುವುದು ಅನಿವಾರ್ಯವಾಗಿದೆ”’ ಎಂದು ತಮ್ಮ ಆದೇಶದಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆನ್ಲೈನ್ ಗೇಮಿಂಗ್-ಬೆಟ್ಟಿಂಗ್‌ಗೆ ಕಡಿವಾಣ ಹಾಕಿ, ಕಾಯ್ದೆ ರೂಪಿಸುವ ಅಗತ್ಯವಿದೆ
ಶಿಕ್ಷೆಯ ಜೊತೆ 2 ಸಾವಿರ ದಂಡ ಕೂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚು ಅವಧಿಯ ಶಿಕ್ಷೆ ಅನುಭವಿಸಬೇಕೆಂದು ಪೀಠವು ಆದೇಶಿಸಿದೆ.
ಪಾಂಡೆ ಅವರು ನಾಲ್ಕು ತಿಂಗಳೊಳಗೆ ಲಖನೌದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರಿಗೆ ಶರಣಾಗಬೇಕೆಂದು ಗಡುವನ್ನು ವಿಧಿಸಲಾಗಿದೆ. ಅಲ್ಲದೆ ಅಲಹಾಬಾದ್ ಹೈಕೋರ್ಟ್ ಕಲಾಪಗಳ ವಕೀಲಿಕೆಯ ಅಭ್ಯಾಸದಿಂದ ನಿಮ್ಮನ್ನು ಏಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿರುವ ಪೀಠ ಪಾಂಡೆ ಅವರಿಗೆ ಶೋಕಾಸ್ ನೋಟಿಸ್‌ಅನ್ನು ಜಾರಿಗೊಳಿಸಿದೆ. ನೋಟಿಸ್‌ಗೆ ಮೇ 1ರೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ.
2021, ಆಗಸ್ಟ್ 18ರಂದು ಪಾಂಡೆ ಅವರು ನ್ಯಾಯಾಲಯಕ್ಕೆ ಗುಂಡಿ ಬಿಚ್ಚಿದ ಅಂಗಿ ಧರಿಸಿ ಆಗಮಿಸಿದ್ದರು. ಈ ಅನುಚಿತ ವರ್ತನೆಯನ್ನು ಆಕ್ಷೇಪಿಸಿದ ನ್ಯಾಯಾಧೀಶರನ್ನು ಗೂಂಡಾಗಳನ್ನು ಕರೆದ ನಂತರ ಪಾಂಡೆ ಅವರನ್ನು ಕೋರ್ಟ್‌ನಿಂದ ಹೊರಕಳಿಸಲಾಗಿತ್ತು. ಈ ಘಟನೆ ನಡೆದ ನಂತರ ಪಾಂಡೆ ವಿರುದ್ಧ ಸ್ವಯಂಪ್ರೇರಿತ ವಿಚಾರಣೆ ಕೈಗೊಳ್ಳಲಾಗಿತ್ತು.
ಈ ನ್ಯಾಯಾಂಗ ನಿಂದನೆ ಪ್ರಕರಣಗಳಿಗೆ ಉತ್ತರಿಸಲು ಹಲವು ಅವಕಾಶಗಳನ್ನು ನೀಡಲಾದರೂ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಪಾಂಡೆ ಅವರ ಈ ರೀತಿಯ ವರ್ತನೆ ಇದೇ ಮೊದಲೇನಲ್ಲ, 2017ರಲ್ಲಿ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ 2 ವರ್ಷ ಹೈಕೋರ್ಟ್ ಕಲಾಪಗಳಿಗೆ ಹಾಜರಾಗದಂತೆ ನಿಷೇಧಿಸಲಾಗಿತ್ತು.