ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು 6,060 ಕೋಟಿ ದೇಣಿಗೆ, ಜೆಡಿಎಸ್‌ಗೂ ಪಾಲು

Date:

Advertisements

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವ ಚುನಾವಣಾ ಬಾಂಡ್‌ ಗಳ ಕುರಿತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸಲ್ಲಿಕೆ ಮಾಡಿದ್ದ ದತ್ತಾಂಶಗಳ ವಿವರವನ್ನು ಕೇಂದ್ರ ಚುನಾವಣಾ ಆಯೋಗವು ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮಾರ್ಚ್ 15ರ ಸಂಜೆ 5 ಗಂಟೆಯೊಳಗೆ ವಿವರಗಳನ್ನು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೂ ಮುನ್ನವೇ ಫೆಬ್ರವರಿ 14ರಂದು ಮಾಹಿತಿಯನ್ನು ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಎಸ್‌ಬಿಐ ಮಾರ್ಚ್ 12ರಂದು ಚುನಾವಣಾ ಬಾಂಡ್‌ಗಳ ಖರೀದಿದಾರರ ವಿವರವನ್ನು ಆಯೋಗಕ್ಕೆ ಸಲ್ಲಿಸಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಮತ್ತು ಆರ್ಥಿಕತೆಯ ನಿಜನೋಟ

Advertisements

2018ರಿಂದ ಈವರೆಗೂ 30 ಕಂತುಗಳಲ್ಲಿ ಒಟ್ಟು 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ವಿತರಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್‌ ಯೋಜನೆಯನ್ನು ಫೆ.15ರಂದು ಸುಪ್ರೀಂಕೋರ್ಟ್‌ ರದ್ದುಪಡಿಸಿ ಮಹತ್ವದ ತೀರ್ಪು ನೀಡಿತ್ತು. ಇದು ‘ಅಸಂವಿಧಾನಿಕ’ ಎಂದಿದ್ದ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ಖರೀದಿಸಿದವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ಪ್ರಮುಖ 10 ದೇಣಿಗೆದಾರ ಕಂಪನಿಗಳು

  • ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವೀಸಸ್ : 1,368 ಕೋಟಿ ರೂ.
  • ಮೇಘಾ ಇಂಜಿನಿಯರಿಂಗ್ ಮತ್ತು ಇನ್ ಫ್ರಾಸ್ಟ್ರಕ್ಟರ್ ಲಿಮಿಟೆಡ್: 966 ಕೋಟಿ ರೂ.
  • ಕ್ವಿಕ್ ಸಪ್ಲೈ ಚೈನ್ ಪ್ರವೇಟ್ ಲಿಮಿಟೆಡ್: 410 ಕೋಟಿ ರೂ.
  • ವೇದಾಂತ ಲಿಮಿಟೆಡ್: 400 ಕೋಟಿ ರೂ.
  • ಹಾಲ್ದಿಯಾ ಎನರ್ಜಿ ಲಿಮಿಟೆಡ್: 377 ಕೋಟಿ ರೂ.
  • ಭಾರ್ತಿ ಗ್ರೂಪ್: 247 ಕೋಟಿ ರೂ.
  • ಎಸ್ಸೆಲ್ ಮೈನಿಂಗ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್: 224 ಕೋಟಿ ರೂ.
  • ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್ ಮಿಷನ್ ಕಂಪನಿ ಲಿಮಿಟೆಡ್: 220 ಕೋಟಿ ರೂ.
  • ಕೆವೆಂಟರ್ ಫುಡ್ ಪಾರ್ಕ್ ಇನ್ ಫ್ರಾ ಲಿಮಿಟೆಡ್: 195 ಕೋಟಿ ರೂ.
  • ಮದನ್ ಲಾಲ್ ಲಿಮಿಟೆಡ್: 185 ಕೋಟಿ ರೂ.
  • bond money

ಅತೀ ಹೆಚ್ಚು ದೇಣಿಗೆ ಪಡೆದ ಪಕ್ಷಗಳು

  • ಬಿಜೆಪಿ : 6,060.50 ಕೋಟಿ ರೂ., ಶೇ. 47.46
  • ತೃಣಮೂಲ ಕಾಂಗ್ರೆಸ್: 1,609.50 ಕೋಟಿ ರೂ., ಶೇ.12.60
  • ಕಾಂಗ್ರೆಸ್: 1,421.90 ಕೋಟಿ ರೂ., ಶೇ. 11.14
  • ಭಾರತ್ ರಾಷ್ಟ್ರ ಸಮಿತಿ: 1,214.70 ಕೋಟಿ ರೂ., ಶೇ. 9.51
  • ಬಿಜು ಜನತಾ ದಳ: 775.50 ಕೋಟಿ ರೂ., ಶೇ. 6.07
  • ಡಿಎಂಕೆ: 639.00 ಕೋಟಿ ರೂ., ಶೇ. 5.0
  • ವೈಎಸ್ ಆರ್ ಕಾಂಗ್ರೆಸ್ ಪಾರ್ಟಿ: 337.00 ಕೋಟಿ ರೂ., ಶೇ. 2.64
  • ತೆಲುಗು ದೇಶಂ ಪಾರ್ಟಿ: 218.90 ಕೋಟಿ ರೂ., ಶೇ. 1.71
  • ಶಿವಸೇನಾ: 159.40 ಕೋಟಿ ರೂ., ಶೇ. 1.24
  • ರಾಷ್ಟ್ರೀಯ ಜನತಾ ದಳ: 72.50 ಕೋಟಿ ರೂ., ಶೇ. 0.57
  • ಆಮ್ ಆದ್ಮಿ ಪಾರ್ಟಿ: 65.50 ಕೋಟಿ ರೂ., ಶೇ. 0.51
  • ಜೆಡಿಎಸ್: 43.50 ಕೋಟಿ ರೂ., ಶೇ. 0.34
  • ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ: 36.50 ಕೋಟಿ ರೂ., ಶೇ. 0.29
  • ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ: 30.50 ಕೋಟಿ ರೂ., ಶೇ. 0.24
  • ಜನಸೇನಾ ಪಾರ್ಟಿ: 21.00 ಕೋಟಿ ರೂ., ಶೇ. 0.16
  • ಸಮಾಜವಾದಿ ಪಾರ್ಟಿ: 14.10 ಕೋಟಿ ರೂ., ಶೇ. 0.11
  • ಜೆಡಿಯು: 14.00 ಕೋಟಿ ರೂ., ಶೇ. 0.11
  • ಶಿರೋಮಣಿ ಅಕಾಲಿದಳ: 7.30 ಕೋಟಿ ರೂ., ಶೇ. 0.06
  • ಎಐಎಡಿಎಂಕೆ: 6.10 ಕೋಟಿ ರೂ., ಶೇ. 0.05
  • ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್: 5.50 ಕೋಟಿ ರೂ., ಶೇ. 0.04
  • ರಾಷ್ಟ್ರೀಯ ಜನತಾ ದಳ: 1.00 ಕೋಟಿ ರೂ., ಶೇ. 0.01
  • ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ: 0.60 ಲಕ್ಷ ರೂ., ಶೇ. 0.01
  • ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್: 0.50 ಲಕ್ಷ ರೂ.,
  • ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮಹಾರಾಷ್ಟ್ರ ಪ್ರದೇಶ: 0.50 ಲಕ್ಷ ರೂ.,
  • ಗೋವಾ ಫಾರ್ವರ್ಡ್ ಪಾರ್ಟಿ: 0.40 ಲಕ್ಷ ರೂ.,

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X