ಲಂಡನ್ ಹೋಟೆಲ್ ಕೊಠಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಏರ್ ಇಂಡಿಯಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ದೂರು ದಾಖಲಾಗಿದೆ.
ಏರ್ ಇಂಡಿಯಾ ಸಿಬ್ಬಂದಿ ತಂಗಿದ್ದ ಲಂಡನ್‌ನ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಮಹಿಳೆಗೆ ಕಿರುಕುಳ ನೀಡಲಾಗಿತ್ತು. ಭದ್ರತೆಯ ಬಗ್ಗೆ ಈಗಾಗಲೇ ಹೋಟೆಲ್ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಏರ್ ಇಂಡಿಯಾ ಸಿಬ್ಬಂದಿ ದೂರಿದ್ದಾರೆ.
ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಹಿಳೆ ಮೇಲೆ ಬೆಳಗಿನ ಜಾವ ಒಂದೂವರೆ ಗಂಟೆಗೆ ದಾಳಿ ನಡೆದಿದೆ. ಕೋಣೆಗೆ ನುಗ್ಗಿದ ದುಷ್ಕರ್ಮಿ ಗಗನಸಖಿಯನ್ನು ಎಳೆದೊಯ್ದು ಕೊಠಡಿಯಲ್ಲಿದ್ದ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಓಡಿಹೋಗಲು ಯತ್ನಿಸಿದ ವ್ಯಕ್ತಿಯನ್ನು ಮಹಿಳಾ ಸಹೋದ್ಯೋಗಿಗಳು ಹಾಗೂ ಹೋಟೆಲ್ ಸಿಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಿಎಂ ವಿರುದ್ಧ ಅನುಮತಿಸಲಾದ ‘ಪ್ರಾಸಿಕ್ಯೂಷನ್’ ಅಂದ್ರೆ ಏನು? ಮುಂದೇನಾಗಲಿದೆ?
ಏರ್ ವಿಮಾನ ಸಿಬ್ಬಂದಿ ಗಾಯಗೊಂಡಿದ್ದು ಆಕೆಗೆ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಭಾರತಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಸಿಬ್ಬಂದಿಗೆ ಅಗತ್ಯವಿರುವ ಸಹಾಯವನ್ನು ಮಾಡುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.
