ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸರ್ಕಾರವು ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ. ಗಳಿಂದ 300 ರೂ.ಗಳಿಗೆ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉಜ್ವಲ ಯೋಜನೆ ಫಲಾನುಭವಿಗಳು ಇದೀಗ ಎಲ್‌ಪಿಜಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ. ಈ ಮೊದಲು 200 ರೂಪಾಯಿ ಸಬ್ಸಿಡಿ ನೀಡಲಾಗಿತ್ತು. ಇದರೊಂದಿಗೆ ಉಜ್ವಲಾ ಫಲಾನುಭವಿಗಳ ಗ್ಯಾಸ್ ಸಿಲಿಂಡರ್‌ಗೆ ಒಟ್ಟು 500 ರೂಪಾಯಿ ಇಳಿಕೆಯಾದಂತಾಗಿದೆ.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ ಏಕದಿನ ತಂಡಕ್ಕೆ ಸ್ಥಾನ ಪಡೆದ ಸ್ಪಿನ್ನರ್ ಆರ್ ಅಶ್ವಿನ್: ಬದಲಾವಣೆಯ 15ರ ಬಳಗದಲ್ಲಿ ಆಯ್ಕೆ
ಇನ್ಮುಂದೆ ಉಜ್ವಲಾ ಫಲಾನುಭವಿಗಳು ಎಲ್‌ಪಿಜಿ ಸಿಲಿಂಡರ್‌ಅನ್ನು 603 ರೂಪಾಯಿಗೆ ಖರೀದಿಸಬಹುದಾಗಿದೆ. 2024ರ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನ ಸಬ್ಸಿಡಿ ಏರಿಸಲಾಗಿದೆ.
2023-24ನೇ ಹಣಕಾಸು ವರ್ಷದಿಂದ 2025-26ರವರೆಗೆ ಮೂರು ವರ್ಷಗಳಲ್ಲಿ 75 ಲಕ್ಷ ಉಜ್ವಲಾ ಯೋಜನೆ ಎಲ್‌ಪಿಜಿ ಸಂಪರ್ಕಗಳ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅನುಮೋದನೆ ನೀಡಿತ್ತು. ಇದರೊಂದಿಗೆ ಉಜ್ವಲಾ ಸಂಪರ್ಕಗಳು ಒಟ್ಟು ಫಲಾನುಭವಿಗಳ ಸಂಖ್ಯೆಯು 10.35 ಕೋಟಿಯಷ್ಟಾಗಿದೆ.
ಈ ವರ್ಷ ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್‌ಗಢ ಮತ್ತು ತೆಲಂಗಾಣ ಚುನಾವಣೆಗಳು ನಡೆಯಲಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಯೋಜನೆ ಪ್ರಕಟಿಸಿದೆ.