ನಿನ್ನೆ ರಾತ್ರಿ ಪಂಜಾಬ್‌ನ ಹಲವು ಜಿಲ್ಲೆಗಳಿಗೆ ಪ್ರಬಲ ಚಂಡಮಾರುತ ಅಪ್ಪಳಿಸಿದ್ದು, ಲುಧಿಯಾನದಲ್ಲಿ ನವರಾತ್ರಿ ಉತ್ಸವವೊಂದರಲ್ಲಿ ಪೆಂಡಾಲ್ ಕುಸಿದು ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಸುಮಾರು 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಈ ಪೈಕಿ ಹೆಚ್ಚಿನವರು ಮಕ್ಕಳು ಎಂದು ವರದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನವರಾತ್ರಿ ಉತ್ಸವದ ಪೆಂಡಾಲ್ ಕುಸಿದು ಸಮೀಪದಲ್ಲಿದ್ದ ದೇವಾಲಯದ ಒಳಗಿರುವ ಶಿವನ ಪ್ರತಿಮೆಗೂ ಹಾನಿಯಾಗಿದೆ ಎಂದು ವರದಿಯಾಗಿದೆ. ಚಂಡಮಾರುತದಿಂದಾಗಿ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ಕಡಿತವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಗಣೇಶೋತ್ಸವಕ್ಕೆ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ, ಸುರಕ್ಷತಾ ಗೈಡ್‌ಲೈನ್ಸ್ ಪ್ರಕಟ
ಲೂಧಿಯಾನದ ಹಂಬ್ರಾನ್ ರಸ್ತೆಯಲ್ಲಿರುವ ಶ್ರೀ ಗೋವಿಂದ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದ್ದು ದೇವಾಲಯದ ಹಿಂಭಾಗದ ತೆರೆದ ಮೈದಾನದಲ್ಲಿ ಜಾಗರಣೆಯನ್ನು ಆಯೋಜಿಸಲಾಗಿತ್ತು.
ನವರಾತ್ರಿ ಜಾಗರಣವನ್ನು ಸಮೀಪದ ದ್ವಾರಕಾ ಎನ್‌ಕ್ಲೇವ್‌ನ ನಿವಾಸಿಗಳು ಆಯೋಜಿಸಿದ್ದರು. ಅನೇಕ ವರ್ಷಗಳಿಂದ ಇಲ್ಲಿನ ನಿವಾಸಿಗಳು ನವರಾತ್ರಿ ವೇಳೆ ಕಾರ್ಯಕ್ರಮವನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
In Ludhiana, during a Navratri function (Jagran), a pandal collapsed due to a heavy storm, resulting in 3 deaths and several injuries. The injured have been admitted to the hospital. pic.twitter.com/2cYSOIVAYZ
— Gagandeep Singh (@Gagan4344) October 6, 2024
