ಶನಿವಾರ ತಡರಾತ್ರಿ ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದು, 23 ಮಂದಿಗೆ ಗಾಯಗಳಾಗಿವೆ.
ಮೈಹಾರ್ ಜಿಲ್ಲೆಯ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ರಾತ್ರಿ 11.30ರ ಸುಮಾರಿಗೆ ಪ್ರಯಾಣಿಕರಿದ್ದ ಬಸ್ ಒಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಬಸ್‌ನಲ್ಲಿ 45 ಪ್ರಯಾಣಿಕರಿದ್ದು, ಪ್ರಯಾಗ್‌ರಾಜ್‌ನಿಂದ ರೇವಾ ಮೂಲಕ ನಾಗ್ಪುರಕ್ಕೆ ತೆರಳುತ್ತಿತ್ತು. ಹೆದ್ದಾರಿಯಲ್ಲಿನ ಉಪಾಹಾರ ಗೃಹದ ಬಳಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಒಂದೇ ಕುಟುಂಬದ ಮೂವರು ಮಹಿಳೆಯರು, ಓರ್ವ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆ
ಇನ್ನು ಗಾಯಾಳುಗಳನ್ನು ಸತ್ನಾ, ಅಮರಪತನ್ ಮತ್ತು ಮೈಹಾರ್ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಗಾಯಾಳುಗಳನ್ನು ಮೊದಲು ಮೈಹರ್ ಮತ್ತು ಅಮರ್‌ಪತನ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು ಬಳಿಕ ಅಮರಪತನ್‌ನಿಂದ ಮೂವರನ್ನು ಮತ್ತು ಮೈಹರ್‌ನಿಂದ ಐವರನ್ನು ಸತ್ನಾ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣ ಜಖಂಗೊಂಡಿದೆ. ಹಲವಾರು ಪ್ರಯಾಣಿಕರು ಬಸ್ಸಿನೊಳಗೆ ಸಿಲುಕಿಕೊಂಡಿದ್ದರು. ಬಸ್ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರ ತೆಗೆಯಲು ಜೆಸಿಬಿ ಹಾಗೂ ಗ್ಯಾಸ್ ಕಟರ್ ಯಂತ್ರಗಳನ್ನು ಬಳಸಲಾಗಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ । ಹಾಡಹಗಲೇ ಮಹಿಳೆ ಮೇಲೆ ಅತ್ಯಾಚಾರ; ಕಾಮುಕನ ಕೃತ್ಯ ನೋಡುತ್ತ ನಿಂತ ಜನ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮೈಹರ್‌ನ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಅಗರ್ವಾಲ್, “ಪ್ರಯಾಗ್‌ರಾಜ್‌ನಿಂದ ನಾಗ್ಪುರಕ್ಕೆ ಸ್ಲೀಪರ್ ಬಸ್ ಪ್ರಯಾಣಿಸುತ್ತಿತ್ತು. ದೇಹತ್ ಪೊಲೀಸ್ ಠಾಣೆ ಪ್ರದೇಶವನ್ನು ತಲುಪಿದಾಗ ಕಲ್ಲುಗಳನ್ನು ತುಂಬಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದರು. ಮೊದಲು ಸುರಕ್ಷಿತವಾಗಿದ್ದವರನ್ನು ಸ್ಥಳಾಂತರಿಸಲಾಯಿತು” ಎಂದು ತಿಳಿಸಿದರು.
“ಅನೇಕರಿಗೆ ಗಾಯಗಳಾಗಿವೆ. ಬಸ್‌ನಲ್ಲೇ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ. ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 23 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್, ಇನ್ನೂ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ” ಎಂದು ಮಾಹಿತಿ ನೀಡಿದರು.
VIDEO | Madhya Pradesh: Rescue operation underway as dozens were injured after a bus collided with a parked truck in Maihar. More details awaited.
— Press Trust of India (@PTI_News) September 28, 2024
(Full video available on PTI Videos – https://t.co/n147TvqRQz) pic.twitter.com/ugSX5z3q7d
