ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ 4.6 ತೀವ್ರತೆಯಲ್ಲಿ ಪ್ರಬಲವಾಗಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ.
ಭೂಮಿ ಕಂಪಿಸುತ್ತಿದ್ದಂತೆ ಜನರು ಭಯಭೀತರಾಗಿ ಓಡಿದ್ದಾರೆ. ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿ 5 ಕಿಮೀ ದೂರದಲ್ಲಿದೆ ಎಂದು ಕಂಡುಬಂದಿದೆ.
ಭೂಮಿಯು ಕಂಪಿಸಿದ ಹಿನ್ನೆಲೆಯಲ್ಲಿ ಕಚೇರಿಗಳಲ್ಲಿ ಹಾಗೂ ಮನೆಗಳಲ್ಲಿದ್ದ ಜನರು ಆಚೆಗೆ ಓಡಿ ಬಂದಿದ್ದಾರೆ. ದೆಹಲಿ ಮಾತ್ರವಲ್ಲದೆ ಪಂಜಾಬ್, ಹರಿಯಾಣ, ಛತ್ತೀಸ್‌ಗಢದ ಕೆಲ ಭಾಗಗಳಲ್ಲಿಯೂ ಭಕಂಪವಾಗಿದೆ. ಅಲ್ಲದೆ ಉತ್ತರ ಪ್ರದೇಶದ ನೋಯ್ಡಾದಲ್ಲೂ ಕಂಪನವಾಗಿದೆ.
Tremors felt in #Gurgaon #earthquake in #DelhiNCR pic.twitter.com/6KKFqWeStd
— Umesh Yadav (@Umeshrao07) October 3, 2023
ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 75 ರ ಭೂಕಂಪನದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಇತರ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ | ಅಕ್ಟೋಬರ್ 14 ರಂದು ಮೇರಿಲ್ಯಾಂಡ್‌ನಲ್ಲಿ ಡಾ. ಬಿ ಆರ್ ಅಂಬೇಡ್ಕರ್‌ರ ಬೃಹತ್ ಪುತ್ಥಳಿ ಅನಾವರಣ
ಉತ್ತರ ಪ್ರದೇಶದ ಲಖನೌ, ಹಾಪುರ್ ಮತ್ತು ಅಮ್ರೋಹಾದಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪನದ ಅನುಭವವಾದ ತಕ್ಷಣ ಜನರು ಕಟ್ಟಡಗಳಿಂದ ಹೊರಗೆ ಬಂದು ನಿಂತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿದೆ.
ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿ ಪೊಲೀಸರು, “ನಾಗರಿಕರೆ, ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬನ್ನಿ. ಆದರೆ ಭಯಪಡಬೇಡಿ. ಎಲಿವೇಟರ್‌ಗಳನ್ನು ಬಳಸಬೇಡಿ! ಯಾವುದೇ ತುರ್ತು ಸಹಾಯಕ್ಕಾಗಿ, 112 ಅನ್ನು ಡಯಲ್ ಮಾಡಿ” ಎಂದಿದ್ದಾರೆ.
ಭಾನುವಾರ, ಹರ್ಯಾಣದ ಕೆಲವು ಭಾಗಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭಾನುವಾರ ರಾತ್ರಿ 11.26 ಕ್ಕೆ 2.6 ತೀವ್ರತೆಯಲ್ಲಿ ಭೂಕಂಪಿಸಿದೆ. ಈ ಭೂಕಂಪನದ ಕೇಂದ್ರಬಿಂದು ಹರ್ಯಾಣದ ರೋಹ್ಟಕ್‌ನ ಪೂರ್ವ ಆಗ್ನೇಯದ 7 ಕಿಮೀ ದೂರದಲ್ಲಿತ್ತು.
People rush out of the building on Mall Road after experiencing tremors of a bit high intensity in Kanpur. #earthquake pic.twitter.com/B4pZzemJCz
— Haidar Naqvi🇮🇳 (@haidarpur) October 3, 2023