ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಸರಿಯಾದ ವ್ಯವಸ್ಥೆಯನ್ನು ಮಾಡದ ಕೇಂದ್ರ ಸರ್ಕಾರ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬುಧವಾರ ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆ ಸ್ನಾನ ಜರುಗಲಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚಳವಾಗಿ ಕಾಲ್ತುಳಿತದಂತಹ ಸ್ಥಿತಿ ಉಂಟಾದ ಕಾರಣ ಈ ಅಮೃತ ಸ್ನಾನವನ್ನು ಅಖಾರಗಳು ರದ್ದು ಮಾಡಿದ್ದಾರೆ. ಆದರೆ ಕಾಲ್ತುಳಿತದಿಂದಾಗಿ ಹಲವು ಮಂದಿ ಗಾಯಗೊಂಡಿದ್ದು, ಸಾವುಗಳೂ ಸಂಭವಿಸಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ | ವಿವಾದಕ್ಕೆ ತಿರುಗಿದ ಖರ್ಗೆ ಹೇಳಿಕೆ
ಈ ಬೆನ್ನಲ್ಲೇ ಕಾಂಗ್ರೆಸ್ ಮಹಾ ಕುಂಭಮೇಳದ ನಿರ್ವಹಣೆಯನ್ನು ಯೋಗಿ ಸರ್ಕಾರದ ಬದಲಾಗಿ ಉತ್ತಮ ನಿರ್ವಹಣಾಕಾರರಿಗೆ ನೀಡುವಂತೆ ಒತ್ತಾಯಿಸಿದೆ. ಹಾಗೆಯೇ ವಿವಿಐಪಿಗಳ ಆಗಮನಕ್ಕೆ ನಿರ್ಬಂಧ ವಿಧಿಸುವಂತೆ ಆಗ್ರಹಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮಹಾ ಕುಂಭಮೇಳದ ತ್ರೀವೇಣಿ ಸಂಗಮದಲ್ಲಿ ಕಾಲ್ತುಳಿತದಿಂದಾಗಿ ಹಲವು ಮಂದಿ ಸಾವನ್ನಪ್ಪಿರುವುದು, ಹಲವರಿಗೆ ಗಾಯವಾಗಿರುವ ಹೃದಯವಿದ್ರಾವಕ ಸುದ್ದಿ ತಿಳಿಯಿತು. ಭಕ್ತರ ಕುಟುಂಬಸ್ಥರಿಗೆ ನಮ್ಮ ತೀವ್ರ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ” ಎಂದು ಹೇಳಿದ್ದಾರೆ.
महाकुंभ के दौरान, तीर्थराज संगम के तट पर हुई भगदड़ से कई लोगों की जान गई है और अनेकों लोगों के घायल होने का समाचार बेहद हृदयविदारक है।
— Mallikarjun Kharge (@kharge) January 29, 2025
श्रद्धालुओं के परिजनों के प्रति हमारी गहरी संवेदनाएँ और घायलों की शीघ्रातिशीघ्र स्वास्थ्य लाभ की हम कामना करते हैं।
आधी अधूरी व्यवस्था,…
“ಕುಂಭಮೇಳದಲ್ಲಿ ಅಪೂರ್ಣ ವ್ಯವಸ್ಥೆ ಮಾಡಿರುವುದು, ವಿಐಪಿಗಳ ಓಡಾಟ, ವೈಯಕ್ತಿಕ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುವುದು ಮತ್ತು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಈ ಕಾಲ್ತುಳಿತಕ್ಕೆ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಈ ರೀತಿ ಅಪೂರ್ಣ ವ್ಯವಸ್ಥೆ ಮಾಡಿರುವುದು ಖಂಡನಾರ್ಹ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: 10 ಸಾವು ಶಂಕೆ
“ಇನ್ನು ಹಲವು ಪ್ರಮುಖ ‘ಶಾಹಿ ಸ್ನಾನಗಳು’ ಬಾಕಿ ಉಳಿದಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ವ್ಯವಸ್ಥೆಯನ್ನು ಉತ್ತಮಗೊಳಿಸಿ ಇಂತಹ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳಬೇಕು” ಎಂದು ಖರ್ಗೆ ಆಗ್ರಹಿಸಿದ್ದಾರೆ. ಹಾಗೆಯೇ ಸಂತ್ರಸ್ತರಿಗೆ ಸಾಧ್ಯವಾದ ಸಹಾಯ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಖರ್ಗೆ ಕರೆ ನೀಡಿದ್ದಾರೆ.
प्रयागराज में कुंभ स्नान के दौरान मची भगदड़ में कई श्रद्धालुओं की मौत बेहद दुखदाई है। जिस तरह की भीड़ और आधी अधूरी व्यवस्था थी उससे इस तरह की दुर्घटना की आशंका बनी हुई थी।
— Pawan Khera 🇮🇳 (@Pawankhera) January 29, 2025
अभी कई महास्नान बचे हुए हैं ऐसे में आवश्यक है कि वहां पर अतिरिक्त सुरक्षा बल भेजे जाएं और योगी आदित्यनाथ… pic.twitter.com/4asR5RQ3e5
ಇನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಮಹಾ ಕುಂಭಮೇಳದಲ್ಲಿ ಹಲವು ಭಕ್ತರ ಸಾವು ತೀವ್ರ ದುಃಖಕರವಾದುದ್ದು. ಸರಿಯಾದ ವ್ಯವಸ್ಥೆಯನ್ನು ಮಾಡದಿರುವುದೇ ಈ ಕಾಲ್ತುಳಿತಕ್ಕೆ ಕಾರಣ” ಎಂದು ದೂರಿದ್ದಾರೆ. ಇನ್ನು ವಿಐಪಿಗಳಿಗೆ ಅವಕಾಶ ನೀಡಿರುವುದೇ ಇದಕ್ಕೆ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
