ಬಹುಕೋಟಿ ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಕಿಂಗ್‌ಪಿನ್ ಸೌರಭ್ ಚಂದ್ರಕರ್ ಅನ್ನು ದುಬೈನಲ್ಲಿ ಬಂಧಿಸಲಾಗಿದೆ. ಈ ಹಗರಣದಲ್ಲಿ ಮನಿ ಲಾಂಡರಿಂಗ್ ಮಾಡಿದ ಆರೋಪದಲ್ಲಿ ಯುಎಇ ಅಧಿಕಾರಿಗಳು ಮಾಸ್ಟರ್ ಮೈಂಡ್ ಸೌರಭ್ ಅನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಜಾರಿ ನಿರ್ದೇಶನಾಲಯವು (ಇಡಿ) ಶೀಘ್ರವೇ ಸೌರಭ್ ಚಂದ್ರಕರ್ ಹಸ್ತಾಂತರ ಕಾರ್ಯವನ್ನು ನಡೆಸುವ ನಿರೀಕ್ಷೆಯಿದೆ. ಗುರುವಾರ ಬಂಧನದ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಸುಮಾರು 10,000 ಕೋಟಿ ರೂಪಾಯಿಗಳ ಹಗರಣ ಇದಾಗಿದೆ.
ಇದನ್ನು ಓದಿದ್ದೀರಾ? ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಮಾಲೀಕ ರವಿ ಉಪ್ಪಲ್ ದುಬೈನಲ್ಲಿ ಬಂಧನ
ಮಹಾದೇವ್ ಆ್ಯಪ್ ಮೂಲಕ ಸುಮಾರು 1,100 ಕೋಟಿ ರೂಪಾಯಿಯಷ್ಟು ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ಈ ವರ್ಷದ ಆರಂಭದಲ್ಲಿ ಇಡಿ ಆರೋಪಿಸಿದೆ. ಜೊತೆಗೆ ಈ ಹಗರಣವನ್ನು ಮಾಡಲು ಸಾವಿರಾರು ಸಿಮ್ ಕಾರ್ಡ್‌ಗಳು, ಬೇರೆ ಬೇರೆ ವಿಧಾನಗಳನ್ನು ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಅಪ್ಲಿಕೇಶನ್ ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ಆರೋಪಿಸಲಾಗಿದೆ.
ಮಹಾದೇವ್ ಆ್ಯಪ್ ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಇಡಿ ತನಿಖೆಯ ವೇಳೆ ಬಹಿರಂಗವಾಗಿದೆ. ಈ ಹಗರಣಕ್ಕೆ ಸಂಬಂಧಿಸಿ 2023ರಲ್ಲಿ ರವಿ ಉಪ್ಪಲ್ ಎಂಬಾತನನ್ನು ದುಬೈನಲ್ಲಿ ಅಲ್ಲಿಯ ಸ್ಥಳೀಯ ಅಧಿಕಾರಿಗಳು ಬಂಧಿಸಿದ್ದರು. ಇಡಿ ಮನವಿಯ ಮೇರೆಗೆ ಈ ಬಂಧನ ಮಾಡಲಾಗಿತ್ತು.
ಇಡಿ ಈವರೆಗೆ ಈ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಬಂಧಿಸಿದೆ. ಸಂಸ್ಥೆಯು ಇಲ್ಲಿಯವರೆಗೆ ಎರಡು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವು ನಟ, ನಟಿಯರಿಗೆ ಸಮನ್ಸ್ ನೀಡಲಾಗಿದೆ.
