ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ರೈಲು ನಿಲ್ದಾಣದ ಬಳಿ ಶನಿವಾರ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೂಡ್ಸ್ ರೈಲು ಹಳಿ ತಪ್ಪಿರುವುದು ಯಾವುದೇ ಸ್ಥಳೀಯ ರೈಲುಗಳ ಪ್ರಯಾಣದ ಮೇಲೆ ಪರಿಣಾಮ ಬೀರಿಲ್ಲ ಎಂದು ಪಶ್ಚಿಮ ರೈಲ್ವೆಯ ಸಿಪಿಆರ್‌ಒ ತಿಳಿಸಿದ್ದಾರೆ.
“ಪಾಲ್ಘರ್‌ನ ಬೋಯಿಸರ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ. ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಗೂಡ್ಸ್ ರೈಲು ಹಳಿತಪ್ಪಿರುವುದು ಸ್ಥಳೀಯ ರೈಲುಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅವುಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿದೆ” ಎಂದು ಪಶ್ಚಿಮ ರೈಲ್ವೆಯ ಸಿಪಿಆರ್‌ಒ ಹೇಳಿದರು.
Palghar, Maharashtra: At Boisar railway station, several freight train cars derailed but fortunately, the slow speed prevented a major accident. There was no impact on Western Railway’s operations. Officials are on-site and work is underway to return the carriage to the track pic.twitter.com/7bYVq9n9qZ
— IANS (@ians_india) July 27, 2024
ಇನ್ನು ಜುಲೈ 26ರಂದು, ಒಡಿಶಾದ ಭುವನೇಶ್ವರ ರೈಲು ನಿಲ್ದಾಣದ ಬಳಿ ಅಂಗುಲ್‌ಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿತಪ್ಪಿದ್ದವು. ಜುಲೈ 22ರಂದು, ಪೂರ್ವ ರೈಲ್ವೆಯ ಪ್ರಕಾರ ರಾಣಾಘಾಟ್ ಯಾರ್ಡ್‌ನಲ್ಲಿ ಗೂಡ್ಸ್ ರೈಲಿನ ಹಿಂದಿನ ಬೋಗಿ ಹಳಿತಪ್ಪಿತ್ತು.
ಇದನ್ನು ಓದಿದ್ದೀರಾ? ಬಿಹಾರ | ಹಳಿ ತಪ್ಪಿದ ಈಶಾನ್ಯ ಎಕ್ಸ್‌ಪ್ರೆಸ್ ರೈಲು; 4 ಸಾವು, 100 ಮಂದಿಗೆ ಗಾಯ
ಜುಲೈ 22ರಂದೇ ಅಲ್ವಾರ್ ಗೂಡ್ಸ್ ನಿಲ್ದಾಣದಿಂದ ರೇವಾರಿಗೆ ತೆರಳುತ್ತಿದ್ದ ಸರಕು ರೈಲು ಸರಿಸುಮಾರು 2:30 ಗಂಟೆಗೆ ಮಥುರಾ ಟ್ರ್ಯಾಕ್‌ನಲ್ಲಿ ಹಳಿತಪ್ಪಿತು. ಜುಲೈ 21ರಂದು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನ ಗೂಡ್ಸ್ ಬೋಗಿ ಹಳಿತಪ್ಪಿತ್ತು.
ಜುಲೈ 21ರಂದು, ಅಲ್ವಾರ್ ಗೂಡ್ಸ್ ನಿಲ್ದಾಣದಿಂದ ರಾಜಸ್ಥಾನದ ರೇವಾರಿಗೆ ಸಾಗುತ್ತಿದ್ದ ಸರಕು ರೈಲು ಸರಿಸುಮಾರು 2:30ಕ್ಕೆ ಮಥುರಾ ಟ್ರ್ಯಾಕ್‌ನಲ್ಲಿ ಹಳಿತಪ್ಪಿತು. ಜುಲೈ 20ರಂದು, ಉತ್ತರ ಪ್ರದೇಶದ ಗಾಜಿಯಾಬಾದ್ ಮತ್ತು ಮೊರಾದಾಬಾದ್ ವಿಭಾಗಗಳ ನಡುವೆ ಗೂಡ್ಸ್ ರೈಲಿನ ಕನಿಷ್ಠ ಏಳು ಬೋಗಿಗಳು ಹಳಿತಪ್ಪಿದ್ದವು.
Another Train Accident 🚨
Goods train derailed at Palghar, Maharashtra, a major accident avoided due to slow speed
Meanwhile Reel Minister is busy writing poems to Modi 👏🏻👏🏻 pic.twitter.com/vreXuEoXTM
— Rohini Anand (@mrs_roh08) July 27, 2024
ನಿರಂತರವಾಗಿ ಇಂತಹ ರೈಲು ಅಪಘಾತಗಳು ನಡೆಯುತ್ತಿದ್ದರೂ ಸರ್ಕಾರ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಿನ ನಿತ್ಯ ರೈಲು ಅಪಘಾತಗಳು ನಡೆಯುತ್ತಿದೆ. ಆದರೆ ನಮ್ಮ ‘ರೀಲ್ ಮಿನಿಸ್ಟರ್’ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕವಿತೆ ಬರೆಯುವುದರಲ್ಲಿ ಸನ್ನದ್ಧರಾಗಿದ್ದಾರೆ” ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.