Zee ಸಮೂಹ ಸಂಸ್ಥಾಪಕ ಸುಭಾಷ್ ಚಂದ್ರಗೆ ಹಿನ್ನಡೆ: ಸಾಲ ಮರುಪಾವತಿ ಯೋಜನೆಗೆ ಎನ್‌ಸಿಎಲ್‌ಟಿ ತಡೆ

Date:

Zee ಸಮೂಹ ಸಂಸ್ಥೆಯ ಸಂಸ್ಥಾಪಕ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸಾಲ ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಐವರು ಸದಸ್ಯರ ವಿಶೇಷ ಪೀಠ ಮಂಗಳವಾರ ತಡೆ ನೀಡಿದೆ. ಅಲ್ಲದೆ, ಮುಂದಿನ ಆದೇಶದವರೆಗೆ ತಮ್ಮ ಯಾವುದೇ ಆಸ್ತಿಗಳನ್ನು ಪರಭಾರೆ (ಮಾರಾಟ ಅಥವಾ ಹಸ್ತಾಂತರ) ಮಾಡದಂತೆ ಸುಭಾಷ್ ಚಂದ್ರ ಅವರಿಗೆ ನಿರ್ಬಂಧ ವಿಧಿಸಿದೆ.

- Advertisement -

​ಆಗಸ್ಟ್ 25 ರಂದು ಎನ್‌ಸಿಎಲ್‌ಟಿ ಮೂರನೇ ಸದಸ್ಯರಾದ ನೀಲೇಶ್ ಶರ್ಮಾ ಅವರು ಸುಭಾಷ್ ಚಂದ್ರ ಅವರ ಸಾಲ ಮರುಪಾವತಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದರು. ಈ ಯೋಜನೆಯ ಪ್ರಕಾರ, ಒಟ್ಟು ₹22,006.57 ಕೋಟಿ ಮೌಲ್ಯದ ಸಾಲದ ಪೈಕಿ ಸುಭಾಷ್ ಚಂದ್ರ ಅವರು ತಮ್ಮ ವೈಯಕ್ತಿಕ ಆಸ್ತಿಯಿಂದ ಕೇವಲ ₹16.25 ಕೋಟಿ ಪಾವತಿಸಲು ಅವಕಾಶ ನೀಡಲಾಗಿತ್ತು. ಇದು ಪ್ರಮುಖ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ಅಸಮ್ಮತಿ ಸೂಚಿಸಿದ್ದ ಸಾಲದಾತರಿಗೆ ಶೇ. 99 ಕ್ಕಿಂತ ಹೆಚ್ಚು ನಷ್ಟ (ಹೇರ್‌ಕಟ್) ಉಂಟುಮಾಡುವಂತಿತ್ತು. ಇದೀಗ ಈ ಆದೇಶಕ್ಕೆ ತಡೆ ಬಿದ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಈ ಪ್ರಕರಣದಲ್ಲಿ ಈ ಮೊದಲು ಇಬ್ಬರು ಸದಸ್ಯರ (ನ್ಯಾಯಾಂಗ ಸದಸ್ಯ ಅಶೋಕ್ ಕುಮಾರ್ ಭಾರದ್ವಾಜ್ ಮತ್ತು ತಾಂತ್ರಿಕ ಸದಸ್ಯೆ ರೀನಾ ಸಿನ್ಹಾ ಪುರಿ) ಪೀಠವು ಭಿನ್ನ ತೀರ್ಪು ನೀಡಿತ್ತು. ಹಾಗಾಗಿ ಬಿಕ್ಕಟ್ಟು ಬಗೆಹರಿಸಲು ಮೂರನೇ ಸದಸ್ಯರಾಗಿ ನೀಲೇಶ್ ಶರ್ಮಾ ಅವರನ್ನು ನೇಮಿಸಲಾಗಿತ್ತು. ಆದರೆ, ಶರ್ಮಾ ಅವರು ಈ ಹಿಂದಿನ ಇಬ್ಬರು ಸದಸ್ಯರ ಪೈಕಿ ಯಾರೊಬ್ಬರ ಅಭಿಪ್ರಾಯದೊಂದಿಗೂ ಸಹಮತ ವ್ಯಕ್ತಪಡಿಸುವ ಬದಲು, “ಸ್ವತಂತ್ರ ಆದೇಶ” ನೀಡಿದ್ದರು. ಇದರಿಂದಾಗಿ ಸ್ಪಷ್ಟ ಬಹುಮತದ ತೀರ್ಪು ಹೊರಬಂದಿರಲಿಲ್ಲ. ಈ ಗೊಂದಲದ ಹಿನ್ನೆಲೆಯಲ್ಲಿ ಎನ್‌ಸಿಎಲ್‌ಟಿ ಅಧ್ಯಕ್ಷರು ಆಗಸ್ಟ್ 31 ರಂದು ಐವರು ಸದಸ್ಯರ ಬೃಹತ್ ವಿಶೇಷ ಪೀಠವನ್ನು ರಚಿಸಿದ್ದರು.

​ಎನ್‌ಸಿಎಲ್‌ಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅನುಪಿಂಧರ್ ಸಿಂಗ್ ಗ್ರೆವಾಲ್, ನ್ಯಾಯಾಂಗ ಸದಸ್ಯರಾದ ಬಚ್ಚು ವೆಂಕಟ್ ಬಲರಾಮ್ ದಾಸ್, ಮಹೇಂದ್ರ ಖಂಡೇಲ್ವಾಲ್ ಹಾಗೂ ತಾಂತ್ರಿಕ ಸದಸ್ಯರಾದ ಅತುಲ್ ಚತುರ್ವೇದಿ ಮತ್ತು ರವೀಂದ್ರ ಚತುರ್ವೇದಿ ಅವರನ್ನು ಈ ವಿಶೇಷ ಪೀಠ ಒಳಗೊಂಡಿದೆ. ಪೀಠವು ಎಲ್ಲಾ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ನಿಗದಿಪಡಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲರಿಗೂ ತಮ್ಮ ವಾದ ಮಂಡಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದೆ.

ಈ ಸಾಲ ಮರುಪಾವತಿ ಯೋಜನೆಗೆ ಶೇ. 80.814 ರಷ್ಟು ಮೌಲ್ಯದ ಸಾಲದಾತರು ಒಪ್ಪಿಗೆ ಸೂಚಿಸಿದ್ದರು. ಆದರೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅಸಮ್ಮತಿ ಹೊಂದಿದ್ದ ಸಾಲದಾತರು ಈ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಎಟಿ) ಪ್ರಶ್ನಿಸಿದ್ದರು. ಮಂಗಳವಾರ ಸಾಲದಾತರ ಪರವಾಗಿ ವಿಶೇಷ ಪೀಠದ ಮುಂದೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸುಭಾಷ್ ಚಂದ್ರ ಅವರು ತಮ್ಮ ಯಾವುದೇ ಆಸ್ತಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಿಲೇವಾರಿ ಮಾಡದಂತೆ ನಿರ್ಬಂಧಿಸಬೇಕು ಎಂದು ಕೋರಿದರು. ಈ ಮನವಿಯನ್ನು ಪುರಸ್ಕರಿಸಿದ ಪೀಠವು ಚಂದ್ರ ಅವರ ಆಸ್ತಿ ಪರಭಾರೆಗೆ ತಡೆ ನೀಡಿದೆ.

​ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಈ ಮರುಪಾವತಿ ಯೋಜನೆಯನ್ನು “ಅವ್ಯವಹಾರಿಕ ಮತ್ತು ಕಾನೂನುಬಾಹಿರ” ಎಂದು ಕರೆದಿದೆ. ಈ ಸಂಸ್ಥೆಯು ₹1,322.39 ಕೋಟಿ ಮೊತ್ತದ ಸಾಲದ ಕ್ಲೈಮ್ ಹೊಂದಿದ್ದು, ವಿವಾದಿತ ಯೋಜನೆಯಡಿ ಅದಕ್ಕೆ ಕೇವಲ ₹138.09 ಲಕ್ಷ ಮಾತ್ರ ಸಿಗುವಂತಹುದಾಗಿತ್ತು.

Zee ಸಮೂಹ ಸಂಸ್ಥೆಗೆ ಸೇರಿದ ಕಂಪನಿಗಳು ಪಡೆದಿದ್ದ ಸಾಲಗಳಿಗೆ ಸುಭಾಷ್ ಚಂದ್ರ ಅವರು ವೈಯಕ್ತಿಕ ಖಾತರಿ (Personal Guarantee) ನೀಡಿದ್ದರು. ಈ ಸಾಲ ವಸೂಲಾತಿಗಾಗಿ 2024 ರಲ್ಲಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಎನ್‌ಸಿಎಲ್‌ಟಿ ಮೆಟ್ಟಿಲೇರಿದಾಗ ಅವರ ವಿರುದ್ಧ ಈ ದಿವಾಳಿತನ ಪ್ರಕ್ರಿಯೆಗಳು ಆರಂಭವಾದವು. ಈ ಪ್ರಕ್ರಿಯೆಗಳು ಕೇವಲ ವೈಯಕ್ತಿಕ ಖಾತರಿದಾರರಾಗಿ ಅವರ ಹೊಣೆಗಾರಿಕೆಗೆ ಸೀಮಿತವಾಗಿದ್ದು, ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ (ZEEL) ನಿಯಂತ್ರಣ ಪ್ರಕ್ರಿಯೆಗಳು ಅಥವಾ Zee ಸಮೂಹ ಸಂಸ್ಥೆಯ ಇತರ ಪ್ರಕರಣಗಳಿಗಿಂತ ಸಂಪೂರ್ಣ ಪ್ರತ್ಯೇಕವಾಗಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...

ಇಂಡಿ |‌ ಜೋಡೆತ್ತು ಕೃಷಿಕರ ಪ್ರತಿಭಟನೆ; ಅಹವಾಲು ಆಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಗಳನ್ನು...

SIR | ಯುವಜನರ ಮೇಲಿನ ದಮನಕಾರಿ ಕ್ರಮಗಳ ಕುರಿತು ಅಮೆರಿಕದ 6 ಡೆಮಾಕ್ರಟಿಕ್ ಸಂಸದರ ಕಳವಳ; ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ದೆಹಲಿ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಅತಿಯಾದ...

ಇಂಡಿಯಾ ಒಕ್ಕೂಟದತ್ತ ಮುಖ ಮಾಡಿದರೇ ಜಗನ್?

ಆಂಧ್ರಪ್ರದೇಶದ ರಾಜಕಾರಣದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೊಸದೊಂದು ರಾಜಕೀಯ ಸಮೀಕರಣ ರೂಪುಗೊಳ್ಳುವ...