ಮದುವೆ ಸಮಾರಂಭವೊಂದರಲ್ಲಿದ್ದ ಭಾಗಿಯಾಗಿದ್ದ ಐದು ವರ್ಷದ ಬಾಲಕಿಗೆ ಮಾವಿನ ಹಣ್ಣಿನ ಆಮಿಷವೊಡ್ಡಿ ಕಾಮುಕನೋರ್ವ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಚಾನ್ಹೋ ಎಂಬ ಹಳ್ಳಿಯಲ್ಲಿ ನಡೆದಿದೆ.
ಬಾಲಕಿಗೆ ಅತ್ಯಾಚಾರ ಎಸಗಿದ 25 ವರ್ಷದ ಆರೋಪಿಯನ್ನು ಸ್ಥಳೀಯರು ಥಳಿಸಿದ್ದು ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಪರಾಧ ಎಸಗಿದ ವೇಳೆ ಆರೋಪಿ ಕುಡಿದು ಮತ್ತಿನಲ್ಲಿದ್ದ. ಬಾಲಕಿಗೆ ಮಾವಿನಹಣ್ಣಿನ ಆಮಿಷವೊಡ್ಡಿ ಸಮೀಪದ ತೋಟಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಾಲಕಿ ಮೇಲೆ ಅತ್ಯಾಚಾರ: ಗರ್ಭಪಾತ ಮಾಡಿಸಿದ ದುರುಳರು; ಮೂವರ ಬಂಧನ
“ನಿನ್ನೆ ರಾತ್ರಿ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಶನಿವಾರ ಇಲ್ಲಿನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು” ಎಂದು ಚಾನ್ಹೋ ಪೊಲೀಸ್ ಠಾಣೆಯ ಉಸ್ತುವಾರಿ ಚಂದನ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
