ಪವನ್ ಕಲ್ಯಾಣ್ ಖಾತೆಯಲ್ಲಿ ಏನಾದರೂ ಲೋಪ ದೋಷಕಂಡು ಬಂದರೆ, ಬೇರೆ ಸಚಿವರು ಬಂದು ಆ ಖಾತೆಯನ್ನು ನಾನು ನಿಭಾಯಿಸುತ್ತೇನೆ ಎಂದರೆ ಹೇಗಿರುತ್ತದೆ? ಕ್ಯಾಬಿನೆಟ್ ಅಂದರೆ ಒಂದು ಕುಟುಂಬ ಇದ್ದಹಾಗೆ. ಅದನ್ನು ಕುಟುಂಬದಲ್ಲಿಯೇ ಚರ್ಚಿಸಿಕೊಳ್ಳಬೇಕು. ಚಿಕ್ಕಮಕ್ಕಳ ರೀತಿ ಬಜಾರಿನಲ್ಲಿ ಬಂದು ಮಾತನಾಡಬಾರದು. ಜನಸೇನಾ ಎಂದರೆ ಕಮ್ಮ, ಕಾಪು ಎರಡು ಜಾತಿಗಳಿಗೆ ಸೀಮಿತನಾ ಅಥವಾ ಎಲ್ಲರ ಪಕ್ಷವ ಎಂದು ದಲಿತ ಸಮುದಾಯದ ಹಿರಿಯ ಮುಖಂಡ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸ್ಥಾಪಕ ಮಂದಕೃಷ್ಣ ಮಾದಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳಮೀಸಲಾತಿ ವಿಚಾರವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಭೇಟಿಯಾಗಿ ಒಳಮೀಸಲಾತಿ ಜಾರಿಯಾಗುವವರಿಗೂ ಉದ್ಯೋಗ ಅಧಿಸೂಚನೆಗಳನ್ನು ಹೊರಡಿಸಬಾರದು ಮತ್ತು ಇತರೆ 31 ಅಂಶಗಳ ಕುರಿತು ಚರ್ಚಿಸಿ ಹೊರಬಂದು ಪತ್ರಕರ್ತರ ಪ್ರಶ್ನೆಗಳಿಗೆ ಮಂದಕೃಷ್ಣ ಮಾದಿಗ ಉತ್ತರಿಸಿದ್ದಲ್ಲದೇ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾತಿನ ಧಾಟಿಯ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
మాదిగ రిజర్వేషన్ పోరాట సమితి వ్యవస్థాపక అధ్యక్షుడు శ్రీ మందకృష్ణ మాదిగ సచివాలయంలో గౌరవ ముఖ్యమంత్రి శ్రీ నారా చంద్రబాబునాయుడును కలిశారు. ఈ సందర్భంగా పలు అంశాలపై వినతి పత్రం సమర్పించారు. ఎస్సీ వర్గీకరణతో బాటు వివిధ అంశాలపై చర్చలు జరిపారు.#AndhraPradesh pic.twitter.com/58bIDXBY0w
— CMO Andhra Pradesh (@AndhraPradeshCM) November 5, 2024
ಇತ್ತಿಚಿಗೆ ಪವನ್ಕಲ್ಯಾಣ್ ನಾನೇದರೂ ಗೃಹಮಂತ್ರಿ ಆಗಿದ್ದರೆ ಆ ಕಥೆಯೇ ಬೇರೆ ಇತ್ತು. ಈಗಲೂ ಆ ಖಾತೆಯನ್ನು ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ ಎಂದು ಅವರದೇ ಸರ್ಕಾರದ ಒಂದು ಖಾತೆಯ ಬಗ್ಗೆ ವಿವಾದಾಸ್ಪದವಾಗಿ ಮಾತನಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀರ್ವ ಸ್ವರೂಪದ ಚರ್ಚೆಗೆ ಕಾರಣವಾಗುತ್ತಿದೆ.
ಈ ವಿಷಯದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಂದಕೃಷ್ಣ ಮಾದಿಗ, “ಗೃಹಮಂತ್ರಿ ಅನಿತಾ ವಂಗಲಪೂಡಿ ಮಾದಿಗ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು. ಆಕೆಯನ್ನು ಅವಮಾನಿಸುವ ರೀತಿಯಲ್ಲಿ ಪವನ್ ಕಲ್ಯಾಣ್ ಮಾತನಾಡಿರುವುದು ದುರದೃಷ್ಟಕರ” ಎಂದು ಕಿಡಿಕಾರಿದ್ದಾರೆ.
“ಶಾಂತಿ ಭದ್ರತೆಗೆ ಧಕ್ಕೆ ಆಗುತ್ತಿದ್ದರೆ ಅದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಜವಾಬ್ದಾರಿಯೇ ಆಗುತ್ತಾರೆ. ಸಾರ್ವಜನಿಕ ಸಭೆಯಲ್ಲಿ ಈ ರೀತಿ ಮಾತನಾಡಿರುವುದು ದುರದೃಷ್ಟಕರ. ನಮ್ಮ ಸಮುದಾಯ ಜನರು ಪವನ್ ಕಲ್ಯಾಣ್ ಅವರ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.

“ಕ್ಯಾಬಿನೆಟ್ ಎಂಬುದು ಕುಟುಂಬ ಇದ್ದಹಾಗೆ. ಅದನ್ನು ಅದರ ಒಳಗೆಯೇ ಚರ್ಚೆ ಮಾಡಿಕೊಳ್ಳಬೇಕು. ಚಿಕ್ಕಮಕ್ಕಳ ಹಾಗೆ ಬೀದಿಯಲ್ಲಿ ನಿಂತು ಮಾತಾಡಬಾರದು” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಂದಕೃಷ್ಣ ಮಾದಿಗ, “ಇವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಒಬ್ಬ ದಲಿತನಿಗಾದರೂ ಅವರು ಸೀಟು ಕೊಟ್ಟಿದ್ದಾರ? ಚುನಾವಣಾ ಸಮಯದಲ್ಲಿಯೇ ಆತನ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದೇವೆ. ಮಾದಿಗ ಸಮುದಾಯಕ್ಕೆ ಒಂದು ಸೀಟು ಕೊಟ್ಟಿಲ್ಲ. ಜನಸೇನಾದಿಂದ ಮೂರು ಜನ ಸಚಿವರಲ್ಲಿ ಒಂದು ಸಚಿವ ಸ್ಥಾನವನ್ನಾದರೂ ಎಸ್ಸಿ,ಎಸ್ಟಿ, ಬಿಸಿಗೆ ಕೊಡಬಹುದಿತ್ತು ಆದರೆ ಕೊಟ್ಟಿಲ್ಲ” ಎಂದು ಜರೆದಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ವಕ್ಫ್ ವಿರುದ್ಧ ರಾಜಕೀಯ ಪ್ರೇರಿತ ಆರೋಪ: ಮುಸ್ಲಿಂ ಬಾಂಧವ್ಯ ವೇದಿಕೆಯ ಮುಖಂಡ ಮುಷ್ತಾಕ್ ಹೆನ್ನಾಬೈಲ್
ಜನಸೇನಾ ಪಕ್ಷ ಕೇವಲ ಕಮ್ಮ, ಕಾಪು ಎರಡು ಸಮುದಾಯಗಳಿಗೆ ಮಾತ್ರ ಸೀಮಿತವಾ? ಅವರು ಮಾತ್ರವಲ್ಲ ಎಲ್ಲರೂ ಮತಹಾಕಿದ್ದಾರೆ ಎಂಬುದು ಮರೆಯಬಾರದು. ಕಾಪು ಸಮುದಾಯ ದೊಡ್ಡಣ್ಣನ ಪಾತ್ರ ಪೋಷಿಸಬೇಕು ಎಂದು ಹೇಳುತ್ತಾರೆ ಎಂದು ಪತ್ರಕರ್ತರು ಹೇಳಿದಾಗ, “ದೊಡ್ಡಣ್ಣ ಅಂದರೆ ಎಲ್ಲರಿಗೂ ಅವಕಾಶಗಳನ್ನು ಕೊಟ್ಟು ಸಲಹುವುದು. ಅವರು ಕಾಪು ಸಮುದಾಯಕ್ಕೆ ಮಾತ್ರ ದೊಡ್ಡಣ್ಣ. ನಮಗಲ್ಲ” ಎಂದು ದಲಿತ ಸಮುದಾಯದ ಹಿರಿಯ ಮುಖಂಡ ಮಂದಕೃಷ್ಣ ಮಾದಿಗ ಪ್ರತ್ಯುತ್ತರ ನೀಡಿದ್ದಾರೆ.
