ಮಣಿಪುರ ಮೂಲದ ಗಾಯಕ ಹಾಗೂ ಗೀತರಚನೆಕಾರ ಅಖು ಚಿನ್‌ಗಾಂಗ್‌ಬಮ್ ಎಂಬುವವರನ್ನು ಅಪರಿಚಿತ ಬಂದೂಕುಧಾರಿಗಳು ಇಂದು ಅಪಹರಿಸಿದ್ದಾರೆ. ಪಶ್ಚಿಮ ಇಂಫಾಲದ ಖುರೈನಿಂದ ಈ ಘಟನೆ ನಡೆದಿದೆ.
ಅಖು ಚಿನ್‌ಗಾಂಗ್‌ಬಮ್ ಅವರು ಗಾಯಕ ಹಾಗೂ ಗೀತರಚನೆಕಾರರಲ್ಲದೆ ‘ಇಂಫಾಲ್ ಟಾಕೀಸ್’ ಎಂಬ ಜಾನಪದ ರಾಕ್‌ಬ್ಯಾಂಡ್ ಹೆಸರಿನಲ್ಲಿ ಸಂಗೀತ ಆಯೋಜಿಸುತ್ತಿದ್ದರು.
ವರದಿಗಳ ಪ್ರಕಾರ ಚಿನ್‌ಗಾಂಗ್‌ಬಮ್ ಅವರನ್ನು ಆತನ ತಾಯಿ ಹಾಗೂ ಪತ್ನಿಯನ್ನು ಬಂದೂಕಿನಿಂದ ಕೊಲ್ಲುವುದಾಗಿ ಬೆದರಿಸಿ ಅಪಹರಿಸಿದ್ದಾರೆ.
ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?
ಈ ವರ್ಷದ ಮೇ ತಿಂಗಳಿನಿಂದ ಮಣಿಪುರ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ಸಂಘರ್ಷ ನಡೆಯುತ್ತಿದೆ. ಹಿಂಸಾಚಾರದಲ್ಲಿ 160ಕ್ಕೂ ಹೆಚ್ಚು ಮಂದಿ ಮೃತಪಟ್ಟು, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮೇ 3ರಂದು ಮೈತೇಯಿ ಸಂಘಟನೆ ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಗಲಭೆ ಆರಂಭಗೊಂಡಿತು.
ಮಣಿಪುರ ರಾಜ್ಯದಲ್ಲಿ ಶೇ.53ರಷ್ಟಿರುವ ಮೈತೇಯಿ ಸಮುದಾಯದ ಬಹುತೇಕರು ಇಂಫಾಲ್ ಪ್ರದೇಶದಲ್ಲಿ ವಾಸವಿದ್ದಾರೆ. ಕುಕಿ, ನಾಗಾಗಳು ಒಳಗೊಂಡ ಬುಡಕಟ್ಟು ಸಮುದಾಯದವರು ಶೇ.40 ರಷ್ಟಿದ್ದು ಕಣಿವೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.