ಮಣಿಪುರ | ತೌನೋಜಂ ಬೃಂದಾ ಜೊತೆ 10 ನಾಯಕರು ಕಾಂಗ್ರೆಸ್‌ಗೆ; ʼಕೈʼ ಪಡೆಗೆ ದಕ್ಕೀತೇ ಅಧಿಕಾರ?

Date:

ಮಣಿಪುರದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಮಾದಕವಸ್ತು ವಿರೋಧಿ ಹೋರಾಟಗಾರ್ತಿ ತೌನೋಜಂ ಬೃಂದಾ ಅವರು ಇತರ ಪ್ರಮುಖ 10 ನಾಯಕರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 2027ರ ಮಣಿಪುರ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಈ ಬೆಳವಣಿಗೆ ಮಹತ್ವದ್ದಾಗಿದೆ.

- Advertisement -

ಮಣಿಪುರದ ಇಂಫಾಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಸೇರ್ಪಡೆಗೆ ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ (MPCC) ಅಧ್ಯಕ್ಷ ಓಕ್ರಂ ಇಬೋಬಿ ಸಿಂಗ್ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬೃಂದಾ, ತಾವು ಯೈಸ್ಕುಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದು ಬೃಂದಾ ಅವರ ಎರಡನೇ ಪ್ರಯತ್ನ. 2022ರ ಚುನಾವಣೆಯಲ್ಲಿ ಅವರು ಅಲ್ಪ ಅಂತರದಲ್ಲಿ ಪ್ರಸ್ತುತ ಸ್ಪೀಕರ್ ತೋಕ್ಚೋಮ್ ಸತ್ಯಬ್ರತ ವಿರುದ್ಧ ಸೋಲನ್ನಪ್ಪಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಮಾಜಿ ಅಧಿಕಾರಿಗಳು, ನಿವೃತ್ತ ರಕ್ಷಣಾ ಸಿಬ್ಬಂದಿ, ವಕೀಲರು ಮತ್ತು ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಕಾಂಗ್ರೆಸ್ ಸೇರಿದ್ದಾರೆ. ಇವರಲ್ಲಿ ಎಂ. ಅನ್ವರ್ ಹುಸೇನ್, ಖ. ದೇವೇಂದ್ರೊ, ಕರ್ನಲ್ ಮೊಹಮ್ಮದ್ ಸಾಹಿದ್ ಖಾನ್ ಮತ್ತು ಹಿರಿಯ ವಕೀಲ ಲೈಶ್ರಾಮ್ ಶಶಿಭೂಷನ್ ಮುಂತಾದವರಿದ್ದಾರೆ.

image 2026 07 16T130352.247

2018ರಲ್ಲಿ ಮಣಿಪುರ ಪೊಲೀಸ್ ಅಧಿಕಾರಿಯಾಗಿ ಬೃಹತ್ ಮಾದಕವಸ್ತು ವಿರೋಧಿ ಕಾರ್ಯಾಚರಣೆಯನ್ನು ಮುನ್ನಡೆಸುವ ಮೂಲಕ ಬೃಂದಾ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾದಾಗ, ನ್ಯಾಯಕ್ಕಾಗಿ ತಮ್ಮ ‘ಗ್ಯಾಲಂಟ್ರಿ ಮೆಡಲ್’ (ಶೌರ್ಯ ಪದಕ) ಮರಳಿಸಿ ಅವರು ಪ್ರತಿಭಟಿಸಿದ್ದರು. ಅವರ ಈ ಹೋರಾಟದ ಮನೋಭಾವ ಈಗ ಕಾಂಗ್ರೆಸ್ ಪಕ್ಷಕ್ಕೆ ಹೊಸ ಬಲ ತುಂಬಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಣಿಪುರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಬೃಂದಾ ಅವರಂತಹ ವ್ಯಕ್ತಿಗಳ ಸೇರ್ಪಡೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಭರವಸೆಯನ್ನೇನೋ ನೀಡಿದೆ. ಆದರೆ, ಅಧಿಕಾರ ಹಿಡಿಯುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಕೆಲವು ಸವಾಲುಗಳ ಜೊತೆಗೆ ಅವಕಾಶಗಳೂ ಇವೆ.

ಕಳೆದ ಕೆಲವು ವರ್ಷಗಳಿಂದ ಮಣಿಪುರದಲ್ಲಿ ಕಂಡುಬಂದಿರುವ ಜನಾಂಗೀಯ ಸಂಘರ್ಷ ಮತ್ತು ಅಸ್ಥಿರತೆ, ಆಡಳಿತಾರೂಢ ಬಿಜೆಪಿಯ ಜನಪ್ರಿಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವುದು ನಿಜ. ಈಗ ಜನ ಬದಲಾವಣೆ ಬಯಸುತ್ತಿದ್ದು, ಓಕ್ರಂ ಇಬೋಬಿ ಸಿಂಗ್ ಅವರ ಅನುಭವ ಮತ್ತು ಬೃಂದಾ ಅವರಂತಹ ಜನಪರ ನಾಯಕರ ಆಗಮನವು ಮತದಾರರಿಗೆ ಪರ್ಯಾಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಬೃಂದಾ ಅವರು ಭ್ರಷ್ಟಾಚಾರ ಮತ್ತು ಮಾದಕವಸ್ತು ಜಾಲದ ವಿರುದ್ಧದ ಹೋರಾಟಗಾರರಾಗಿ ದೊಡ್ಡ ಯುವ ಅಭಿಮಾನಿ ಬಳಗ ಹೊಂದಿದ್ದಾರೆ. ಯೈಸ್ಕುಲ್ ಕ್ಷೇತ್ರ ಸೇರಿದಂತೆ ಇತರೆ ಕಡೆಗಳಲ್ಲಿ ಅವರ ಪ್ರಭಾವವು ಬಿಜೆಪಿ ಮತಗಳನ್ನು ವಿಭಜಿಸುವಲ್ಲಿ ನಿರ್ಣಾಯಕವಾಗಬಹುದು.

image 2026 07 16T130257.341

ಕಾಂಗ್ರೆಸ್ ಪಕ್ಷವು ಮಣಿಪುರದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಆದರೆ, ಬಿಜೆಪಿಯ ಬಲಿಷ್ಠ ಚುನಾವಣಾ ತಂತ್ರಗಾರಿಕೆ ಮತ್ತು ನೆಟ್‌ವರ್ಕ್ ಅನ್ನು ಮೀರಿಸಲು, ಕಾಂಗ್ರೆಸ್ ಇದಕ್ಕಿಂತಲೂ ಹೆಚ್ಚಿನದನ್ನು ಮಾಡಬೇಕಿದೆ. ಪ್ರಬಲವಾದ ಪ್ರಣಾಳಿಕೆ ಮತ್ತು ಜನಾಂಗೀಯ ಸಾಮರಸ್ಯ ಮೂಡಿಸುವ ಭರವಸೆಗಳು ಗೆಲುವಿಗೆ ಅನಿವಾರ್ಯ. ಮಣಿಪುರದ ರಾಜಕೀಯದಲ್ಲಿ ಇನ್ನೂ ಅನೇಕ ಪ್ರಾದೇಶಿಕ ಪಕ್ಷಗಳು ಸಕ್ರಿಯವಾಗಿವೆ. ಕಾಂಗ್ರೆಸ್‌ನ ಮತಬ್ಯಾಂಕ್ ಹೆಚ್ಚಾಗಿದ್ದರೂ, ಮೈತ್ರಿಕೂಟಗಳ ಜಾಣ್ಮೆ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತದೆ. ಇಬೋಬಿ ಸಿಂಗ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಹಳೆಯ ವೈಭವವನ್ನು ಮರಳಿ ಪಡೆಯುತ್ತದೆಯೇ ಎಂಬುದು 2027ರ ಹೊತ್ತಿಗೆ ತಿಳಿಯಲಿದೆ.

ಮಣಿಪುರದಲ್ಲಿ ಸಂಭವಿಸಿದ ಹಿಂಸಾಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಅಲ್ಲಿಗೆ ಅಂದುಕೊಂಡಷ್ಟರ ಮಟ್ಟಿಗೆ ಭೇಟಿ ನೀಡಲಿಲ್ಲ. ಇದು ಕಾಂಗ್ರೆಸ್‌ಗೆ ರಾಜಕೀಯವಾಗಿ ಒಂದು ಪ್ರಬಲ ಅಸ್ತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಣಿಪುರದ ಜನಸಾಮಾನ್ಯರಲ್ಲಿ, ವಿಶೇಷವಾಗಿ ಸಂತ್ರಸ್ತ ಕುಟುಂಬಗಳಲ್ಲಿ ಕೇಂದ್ರ ನಮ್ಮನ್ನು ಕಡೆಗಣಿಸಿದೆ ಎಂಬ ಭಾವನೆ ದಟ್ಟವಾಗಿದೆ. ದೇಶದ ಇತರ ಭಾಗಗಳಿಗೆ, ವಿದೇಶಗಳಿಗೆ ಭೇಟಿ ನೀಡುವ ಪ್ರಧಾನಿ, ಇಷ್ಟು ದೊಡ್ಡ ಬಿಕ್ಕಟ್ಟು ಎದುರಿಸುತ್ತಿರುವ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ? ಎಂಬ ಪ್ರಶ್ನೆ ಅಲ್ಲಿನ ಮತದಾರರ ಜೊತೆಗೆ ದೇಶ ವಾಸಿಗಳಲ್ಲೂ ಸಹಜವಾಗಿ ಎದ್ದಿತ್ತು. ಈ ಭಾವನೆಯನ್ನು ಬಳಸಿಕೊಂಡು ಕಾಂಗ್ರೆಸ್, ʼಬಿಜೆಪಿಗೆ ಮಣಿಪುರದ ಜನರ ಬದುಕಿಗಿಂತ ಅಧಿಕಾರ ಮುಖ್ಯʼ ಎಂಬ ನಿರೂಪಣೆಯನ್ನು ಬಲಪಡಿಸಬಹುದು.

ಬಿಜೆಪಿಯ ಸ್ಥಳೀಯ ಸರ್ಕಾರವು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬುದು ಬಹುತೇಕ ಮಣಿಪುರಿಗಳ ಅಭಿಪ್ರಾಯ. ಇಂತಹ ಸಂದರ್ಭದಲ್ಲಿ, ಮೋದಿಯವರ ಮೌನವು ಸ್ಥಳೀಯ ಬಿಜೆಪಿ ನಾಯಕರನ್ನು ಅನಾಥರನ್ನಾಗಿ ಮಾಡಿದೆ. ಇದು ಅವರ ಬೆಂಬಲಿಗರಲ್ಲೂ ಅಸಮಾಧಾನ ಮೂಡಿಸಿದ್ದು, ಕಾಂಗ್ರೆಸ್ ಈ ಅಸಮಾಧಾನಿತ ಮತಗಳನ್ನು ತನ್ನತ್ತ ಸೆಳೆಯುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬಹುದು.

image 2026 07 16T125759.671

ಕಾಂಗ್ರೆಸ್ ನಾಯಕರು, ವಿಶೇಷವಾಗಿ ರಾಹುಲ್ ಗಾಂಧಿ, ಸಂಘರ್ಷದ ದಿನಗಳಲ್ಲಿ ಮಣಿಪುರಕ್ಕೆ ಭೇಟಿ ನೀಡಿ ಜನರನ್ನು ಭೇಟಿಯಾಗಿದ್ದರು. ʼನಾವು ಕಷ್ಟಕಾಲದಲ್ಲಿ ನಿಮ್ಮೊಂದಿಗೆ ಇದ್ದೆವುʼ ಎಂಬ ಸಂದೇಶವನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಹುದು.

ಮಣಿಪುರದಂತಹ ರಾಜ್ಯಗಳಲ್ಲಿ ‘ಜನಾಂಗೀಯ ಅಸ್ಮಿತೆ’ ತುಂಬಾ ಮುಖ್ಯ. ಕೇಂದ್ರದ ನಿರ್ಲಕ್ಷ್ಯವು ಆ ಅಸ್ಮಿತೆಗೆ ಅವಮಾನ ಎಂದು ಜನರು ಭಾವಿಸಿದರೆ, ಅದು ಬಿಜೆಪಿಗೆ ಭಾರಿ ಹಿನ್ನಡೆಯಾಗಬಹುದು. ತೌನೋಜಂ ಬೃಂದಾ ಅವರಂತಹ ಹೊಸ ನಾಯಕರು ಸೇರ್ಪಡೆಯಾಗಿರುವುದು, ಕಾಂಗ್ರೆಸ್ ತನ್ನ ತಳಮಟ್ಟದ ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿ.

ಆದರೆ ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಪ್ರಧಾನಿಯವರ ಭೇಟಿಯ ಕೊರತೆಯನ್ನು ಮುಂದಿಟ್ಟುಕೊಂಡು ಮತ ಗಳಿಸಲು ಸಾಧ್ಯವಿಲ್ಲ. ಮಣಿಪುರದಲ್ಲಿ ಬಿಜೆಪಿ ತನ್ನದೇ ಆದ ಮತಬ್ಯಾಂಕ್ ಮತ್ತು ಕಾರ್ಯಕರ್ತರ ಜಾಲ ಹೊಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಮರಳಬೇಕೆಂದರೆ, ಕೇವಲ ಬಿಜೆಪಿಯ ವಿಫಲತೆಯನ್ನು ತೋರಿಸುವುದಷ್ಟೇ ಸಾಲದು, ಶಾಂತಿ ಮರು ಸ್ಥಾಪಿಸುವ ಅವರ ಕ್ರಿಯಾಯೋಜನೆ ಏನು ಎಂಬುದನ್ನು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಡಬೇಕು.

ಇದನ್ನೂ ಓದಿ: ವಿಷಮ ಭಾರತ | ಮೋದಿ ಮಣಿಪುರ ಭೇಟಿ- ‘ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ’!

ಈ ಎಲ್ಲಾ ಅಂಶಗಳು ಕಾಂಗ್ರೆಸ್‌ಗೆ ಖಂಡಿತವಾಗಿಯೂ ಲಾಭ ತಂದುಕೊಡುತ್ತವೆ. ಇದು ಅತೃಪ್ತ ಮತದಾರರನ್ನು ಬಿಜೆಪಿ ವಿರುದ್ಧ ತಿರುಗಿಸಲು ಉತ್ತಮ ಅವಕಾಶ ಕೂಡ. ಆದರೆ, ಅಧಿಕಾರ ಹಿಡಿಯಬೇಕೆಂದರೆ, ಕಾಂಗ್ರೆಸ್ ತನ್ನ ಆಂತರಿಕ ಗುಂಪುಗಾರಿಕೆಯನ್ನು ಸರಿಪಡಿಸಿಕೊಂಡು, ಮಣಿಪುರದ ಭವಿಷ್ಯಕ್ಕಾಗಿ ಒಂದು ವಿಶ್ವಾಸಾರ್ಹ ಭರವಸೆಯನ್ನು ನೀಡಬೇಕಾಗುತ್ತದೆ. 2027ರ ಹೊತ್ತಿಗೆ ಈ ವಿಚಾರ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತದೆ ಎಂಬುದರ ಮೇಲೆ ಕಾಂಗ್ರೆಸ್‌ನ ಗೆಲುವು ಅವಲಂಬಿತವಾಗಿರುತ್ತದೆ.

ಒಟ್ಟಿನಲ್ಲಿ ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚುತ್ತಿವೆ. ಆಡಳಿತ ವಿರೋಧಿ ಅಲೆ ಮತ್ತು ಬೃಂದಾ ಅವರಂತಹ ಹೊಸ ಮುಖಗಳ ಸೇರ್ಪಡೆಯು ಪಕ್ಷಕ್ಕೆ ಎನರ್ಜಿ ನೀಡಿದೆ. ಒಂದು ವೇಳೆ ಕಾಂಗ್ರೆಸ್ ಮಣಿಪುರದ ಸೂಕ್ಷ್ಮ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಂಡರೆ, 2027ರಲ್ಲಿ ಮಣಿಪುರದಲ್ಲಿ ಕಾಂಗ್ರೆಸ್ ಧ್ವಜ ಮರುಸ್ಥಾಪನೆಯಾಗುವ ಎಲ್ಲಾ ಸಾಧ್ಯತೆಗಳಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

ಕಲಬುರಗಿ ಹೊರವಲಯದ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ...

ಎಸ್‌ಐಆರ್ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ: ಸಿಎಂ ಡಿ.ಕೆ. ಶಿವಕುಮಾರ್

ಎಸ್‌ಐಆರ್ (SIR) ದತ್ತಾಂಶಗಳ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ಸುಪ್ರೀಂ...

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...